More

    ಬೈಪಾಸ್ ಕಾಮಗಾರಿಗೆ ಟೆಂಡರ್ ಕರೆಯಲು ಸೂಚನೆ

    ಹುಬ್ಬಳ್ಳಿ: ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ನವದೆಹಲಿಯ ಹೆದ್ದಾರಿ ಸಚಿವಾಲಯದಲ್ಲಿ ಗುರುವಾರ ಸಭೆ ನಡೆಸಲಾಯಿತು. ಹುಬ್ಬಳ್ಳಿ-ಧಾರವಾಡ ಬೈಪಾಸ್ 30 ಕಿಮೀ ರಸ್ತೆಯನ್ನು ಷಟ್ಪಥವನ್ನಾಗಿ ಮಾರ್ಪಡಿಸಲು ಕೂಡಲೆ ಟೆಂಡರ್ ಕರೆಯುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

    ಸಚಿವ ನಿತಿನ್ ಗಡ್ಕರಿ ಮಾತನಾಡಿ, ಈ ಹಿಂದೆಯೇ ಈ ರಸ್ತೆ ನಿರ್ಮಾಣ ಮಾಡಿ ನಿರ್ವಹಣೆ ಮಾಡುತ್ತಿರುವ ನಂದಿ ಹೈವೇ ಡೆವಲಪರ್ಸ್ ಸಹಯೋಗದೊಂದಿಗೆ ಷಟ್ಪಥ ರಸ್ತೆ ಹಾಗೂ ಸಮರ್ಪಕವಾಗಿ ಸರ್ವಿಸ್ ರಸ್ತೆಯನ್ನು ಎರಡೂ ಬದಿ ನಿರ್ವಿುಸಲು ಸೂಚನೆ ನೀಡಲಾಗಿದೆ. ಡಿಪಿಆರ್ ತಯಾರಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಆರ್​ಒಬಿ ಮತ್ತು ಆರ್​ಯುುಬಿ ಸೇರಿಸಲೂ ಸೂಚನೆ ನೀಡಿದ್ದು, ಮುಖ್ಯವಾಗಿ 33 ಹೆಕ್ಟೇರ್ ಭೂಸ್ವಾಧೀನ ಅವಶ್ಯವಿದೆ. ಭೂಮಿ ವಶಪಡಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಕಾಮಗಾರಿ ಆರಂಭದ ನಂತರ ಯಾವುದೇ ಅಡೆತಡೆ ಬಾರದಂತೆ ಎಲ್ಲ ಕಡೆಗಳಿಂದ ಒಡಂಬಡಿಕೆ ಮಾಡಿಕೊಳ್ಳುವಂತೆ ಸೂಚಿಸಿದರು. ನಂದಿ ಡೆವಲಪರ್ಸ್ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿ, ರಸ್ತೆ ನಿರ್ವಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಸಂಸದರಾದ ಶಿವಕುಮಾರ ಉದಾಸಿ, ಜಿ.ಎಂ. ಸಿದ್ದೇಶ್ವರ, ಪಿ.ಸಿ. ಗದ್ದಿಗೌಡರ್, ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲ್, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts