More

    ಧಾರ್ವಿುಕ ದತ್ತಿ ಸಾಮೂಹಿಕ ವಿವಾಹಕ್ಕಿಲ್ಲ ಸ್ಪಂದನೆ

    ಕಾರವಾರ: ಜಿಲ್ಲೆಯ ಮೂರು ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲಾಗುವುದು ಎಂದು ಸರ್ಕಾರ ಪ್ರಚಾರ ಮಾಡುತ್ತಿದೆ. ಆದರೆ, ಎರಡು ದೇವಸ್ಥಾನಗಳು ವಿವಾಹ ಕಾರ್ಯ ಮಾಡುವುದಿಲ್ಲ ಎಂದು ಪತ್ರ ಬರೆದುಕೊಟ್ಟಿರುವುದು ಗೊಂದಲಕ್ಕೆ ಕಾರಣವಾಗಿದೆ.

    ಏಪ್ರಿಲ್ 26 ಹಾಗೂ ಮೇ 24 ರಂದು ಧಾರ್ವಿುಕ ದತ್ತಿ ಇಲಾಖೆಯಿಂದ ರಾಜ್ಯಾದ್ಯಂತ 100 ದೇವಸ್ಥಾನಗಳಲ್ಲಿ ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಜಿಲ್ಲೆಯ ಹಲವೆಡೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಾಹೀರಾತು ಫಲಕಗಳನ್ನು ಅಳವಡಿಸಿದೆ. ವಧುವಿಗೆ ಸೀರೆ ಕೊಳ್ಳಲು 10 ಸಾವಿರ ರೂ., ವರನಿಗೆ 5 ಸಾವಿರ ರೂ. ನೀಡಲಾಗುವುದು. 40 ಸಾವಿರ ರೂ. ಮೌಲ್ಯದ ತಾಳಿ ನೀಡಲಾಗುವುದು ಎಂದು ಜಾಹೀರಾತು ಫಲಕದಲ್ಲಿ ವಿವರಿಸಲಾಗಿದೆ. ಮಾಹಿತಿಗೆ 18004256654 ಉಚಿತ ಸಹಾಯವಾಣಿ ಸಂಖ್ಯೆಯನ್ನೂ ನೀಡಲಾಗಿದೆ. ಆ ಸಂಖ್ಯೆಗೆ ಕರೆ ಮಾಡಿದರೆ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಸ್ಥಾನ, ಹೊನ್ನಾವರ ಇಡಗುಂಜಿ ಸಿದ್ದಿವಿನಾಯಕ ದೇವಸ್ಥಾನ, ಭಟ್ಕಳದ ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಸ್ಥಾನಗಳ ಹೆಸರು ಸೂಚಿಸಲಾಗುತ್ತದೆ. ವಿವಾಹವಾಗಲು ಇಚ್ಛಿಸುವವರು ಮಾ. 26ರೊಳಗೆ ಸಂಬಂಧಪಟ್ಟ ದೇವಸ್ಥಾನಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಆದರೆ, ದೇವಸ್ಥಾನಗಳಲ್ಲಿ ಇನ್ನೂ ನೋಂದಣಿ ಪ್ರಾರಂಭಿಸದಿರುವುದು ಗೊಂದಲಕ್ಕೆ ಕಾರಣವಾಗಿದೆ.

    ಇಡಗುಂಜಿ ದೇವಸ್ಥಾನದ ವಿವಾದ ಸುಪ್ರೀಂ ಕೋರ್ಟ್​ನಲ್ಲಿರುವುದರಿಂದ ಯಾವುದೇ ಹೊಸ ಕಾರ್ಯಕ್ಕೆ ಸುಪ್ರೀಂ ಅನುಮತಿ ಬೇಕು. ಇದರಿಂದ ನಾವು ವಿವಾಹ ನಡೆಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಧಾರ್ವಿುಕ ದತ್ತಿ ಇಲಾಖೆಗೆ ಪತ್ರ ನೀಡಿದೆ. ಇನ್ನು ಭಟ್ಕಳ ಅಳ್ವೆಕೋಡಿ ದುರ್ಗಾ ಪರಮೇಶ್ವರಿ ದೇವಸ್ಥಾನ ಕಟ್ಟಡದ ನವೀಕರಣ ನಡೆದಿರುವುದರಿಂದ ವಿವಾಹ ಮಾಡಲು ಸಾಧ್ಯವಿಲ್ಲ ಎಂದು ಅಲ್ಲಿನ ಆಡಳಿತ ಮಂಡಳಿಯೂ ಲಿಖಿತವಾಗಿ ತಿಳಿಸಿದೆ. ಶಿರಸಿ ಮಾರಿಕಾಂಬಾ ದೇವಸ್ಥಾನ ವಿವಾಹದ ಬಗ್ಗೆ ಯಾವುದೇ ಉತ್ತರ ನೀಡಿಲ್ಲ ಎಂಬುದು ಧಾರ್ವಿುಕ ದತ್ತಿ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ. ಒಟ್ಟಿನಲ್ಲಿ ಸರ್ಕಾರದ ಆದೇಶಕ್ಕೆ ದೇವಸ್ಥಾನಗಳು ಸ್ಪಂದಿಸದ ಕಾರಣ ಇಲ್ಲಿ ಗೊಂದಲ ಉಂಟಾಗಿದೆ.

    ಧಾರ್ವಿುಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಿಂದ ಜಿಲ್ಲೆಯ ಎರಡು ದೇವಸ್ಥಾನಗಳನ್ನು ಆಯ್ಕೆ ಮಾಡಿ ಕಳಿಸಲಾಗಿತ್ತು. ಆದರೆ, ಎರಡು ದೇವಸ್ಥಾನಗಳು ಸಾಮೂಹಿಕ ವಿವಾಹ ನಡೆಸುವುದಿಲ್ಲ ಎಂದು ಪತ್ರ ನೀಡಿವೆ. ಅದನ್ನು ನಾವು ಇಲಾಖೆಗೆ ತಿಳಿಸುತ್ತೇವೆ. ಇಲಾಖೆಯ ಸೂಚನೆಯಂತೆ ಮುಂದಿನ ಕ್ರಮ ವಹಿಸಲಾಗುವುದು.
    | ನಾಗರಾಜ ಸಿಂಗ್ರೇರ್ ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts