More

    ಬರ ಪೀಡಿತ ತಾಲೂಕುಗಳಿಗೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ-;ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಆರೋಪ

    ಬೆಂಗಳೂರು: 195 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿ ಅದಕ್ಕಾಗಿ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಆರೋಪಿಸಿದರು.

    ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಳೆ ನಷ್ಟ ಪರಿಹಾರ ಕೊಟ್ಟಿಲ್ಲ.
    ಅವರ ಜಮೀನುಗಳಿಗೆ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ.
    ಕಿಸಾನ್ ಯೋಜನೆಗೆ ಯಡಿಯೂರಪ್ಪ ಘೋಷಣೆ ಮಾಡಿದ್ದ ಅನುದಾನ ನಿಲ್ಲಿಸಿದ್ದೀರಿ. ನಿಮ್ಮ ಕೊಡುಗೆ ರೈತರಿಗೆ ಏನೂ ಎಂದು ಪ್ರಶ್ನಿಸಿದರು.

    ರೈತರ ಸ್ಥಿತಿ ಚಿಂತಾಜನಕವಾಗಿದೆ.
    ಕೆರೆಕಟ್ಟೆಗಳಲ್ಲಿ ನೀರು ಇಲ್ಲ,ಕರೆಂಟ್ ಎಷ್ಟು ಸಮಯ ಕೊಡುತ್ತಿದ್ದಿರಾ?
    2 ಗಂಟೆ ಕರೆಂಟ್ ಕೊಡುತ್ತಿದ್ದೀರಿ.
    ರೈತರು ಮತ್ತು ಪಂಪ್ ಸೆಟ್ ಗಳ ಸ್ಥಿತಿ ಏನು..? ಎಂದು ಸರ್ಕಾರವನ್ನು ತರಾಟೆ ತೆಗೆಕೊಂಡರು.
    ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ 14 ಜನ ಮರಣ ಹೊಂದಿದ್ದಾರೆ.
    ತನಿಖೆ ಚುರುಕುಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಅ. 13ರಂದು ಬೆಳಗಾವಿ ಸಮಾವೇಶ ಮಾಡುತ್ತಿದ್ದೇವೆ.

    ಅಲ್ಲಿ ಬೆಳಗಾವಿ ಮತ್ತು ಚಿಕ್ಕೋಡಿ ಕಾರ್ಯಕರ್ತರು ಮತ್ತು ಪಕ್ಷದ ನಾಯಕರ ಸಭೆ ಮಾಡುತ್ತೇವೆ.
    ಪಕ್ಷದ ಪುನಶ್ಚೇತನಕ್ಕಾಗಿ ಸಭೆ ಮಾಡುತ್ತಿದ್ದೇವೆ ಎಂದರು.
    ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ,
    ಬಿಡದಿಯಲ್ಲಿ ನಡೆದ ಸಭೆಯಲ್ಲಿ ಮೈತ್ರಿ ಒಮ್ಮತ ಸೂಚಿಸಲಾಗಿದೆ.
    ಅದಾದ ನಂತರ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳುದರು.
    ನಮ್ಮ ಪಕ್ಷದಲ್ಲಿ ರಾಜೀ ಪ್ರಶ್ನೆಯೇ ಇಲ್ಲ.
    ನಮ್ಮ ತತ್ವ, ಸಿದ್ದಾಂತದಲ್ಲಿ ಯಾವುದೇ ರಾಜೀ ಇಲ್ಲ.
    ಹಿಂದೆ ಬಿಜೆಪಿ ಜತೆ ಸರ್ಕಾರ ಮಾಡಿದಾಗಲೂ ಸೈದ್ಧಾಂತಿಕವಾಗಿ ಯಾವುದೇ ರಾಜೀ ಮಾಡಿಕೊಂಡಿರಲಿಲ್ಲ.
    ಡಿಎಂಕೆಯನ್ನು ಬಿಜೆಪಿ, ಕಾಂಗ್ರೆಸ್ ಇಬ್ಬರೂ ಮುದ್ದಾಡುತ್ತಾರೆ.
    ಕಾರಣ ಅವರು ಯಾವುದೇ ಸೈದ್ದಾಂತಿಕ ರಾಜಿ ಮಾಡಿಕೊಳ್ಳುವುದಿಲ್ಲ.
    ತಮಿಳುನಾಡಿನ ಅಭಿವೃದ್ಧಿ ಮಾತ್ರ ರಾಜಿ ಆಗುತ್ತಾರೆ.
    ಅದೇ ರೀತಿ ನಾವು ಕೂಡ ಪಕ್ಷದ ಉಳಿವಿಗಾಗಿ ಮತ್ತು ಕರ್ನಾಟಕ ಜನರ ಅಭಿವೃದ್ಧಿಗಾಗಿ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ.
    ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಲಾ ಖಾನ್ ಮಾತನಾಡಿ,
    ದೇವೇಗೌಡರು ನನ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ಆಯ್ಕೆ ಮಾಡಿದರು.
    ಅವರ ಮನೆಯಲ್ಲಿ ಸನ್ಮಾನ ಮಾಡಿ ಆಯ್ಕೆ ಮಾಡಿದರು.
    ದೇವೇಗೌಡರಿಗೆ ಅವತ್ತೆ ಹೇಳಿದ್ದೆ ನಿಷ್ಠೆಯಿಂದ ಇರುತ್ತೇನೆ ಎಂದು.
    ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡಲ್ಲ ಎಂದಿದ್ದೆ.
    ಅದರಿಂದ ನಾನು ಅಲ್ಲಿಂದ ಇಲ್ಲಿಗೆ ಹೋಗಲ್ಲ.
    ದೇವೇಗೌಡರ ನಿರ್ಧಾರಕ್ಕೆ ನಮಗೆ ಒಪ್ಪಿಗೆ ಇದೆ.
    ಬೇರೆ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿರಬಹುದು ಆದರೆ ಸಿದ್ಧಾಂತ ಬಿಟ್ಟುಕೊಟ್ಟಿಲ್ಲ.
    ಮೈತ್ರಿ ಕೆಲವರಿಗೆ ಇಷ್ಟ ಇಲ್ಲದೇ ರಾಜೀನಾಮೆ ಕೊಟ್ಟಿದ್ದಾರೆ.
    ಅವರ ಜತೆ ಮಾತನಾಡಿ ಮತ್ತೆ ವಾಪಸ್ ಕರೆದುಕೊಂಡು ಬರುತ್ತೇನೆ ಎಂದು ಜಫ್ರುಲ್ಲಾ ಖಾನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts