More

    ಮುಂದಿನ ಏಪ್ರಿಲ್​ನಿಂದ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳೋಲ್ಲ! ಹೀಗೆಂದವರು ಯಾರು, ಏಕೆ?

    ಚಂಡೀಗಡ: ಚುನಾವಣೆ ಬಂತೆಂದರೆ ರಾಜಕಾರಣಿಗಳು ಏನೆಲ್ಲಾ ಆಶ್ವಾಸನೆಗಳನ್ನು ಕೊಡುತ್ತಾರೆ. ತಮ್ಮ ಪಕ್ಷವನ್ನೇ ಅಧಿಕಾರಕ್ಕೆ ತಂದರೆ ಚಂದ್ರನ ಮೇಲೆ ಸೈಟು ಕೊಡಿಸುತ್ತೇವೆ ಎಂದರೂ ಆಶ್ಚರ್ಯವಿಲ್ಲ. ಅಂಥದ್ದೇ ಒಂದು ಪ್ರಯತ್ನವನ್ನು ಆಮ್​ ಆದ್ಮಿ ಪಕ್ಷ(ಎಎಪಿ)ದ ನಾಯಕ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವ ಪಂಜಾಬಿನಲ್ಲಿ ಮಾಡಿದ್ದಾರೆ.

    ರೈತರು ವಿವಿಧ ಸಂಕಷ್ಟಗಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುವುದು ಭಾರತದಾದ್ಯಂತ ಹರಡಿರುವ ಸಮಸ್ಯೆಯಾಗಿದೆ. ಆದ್ದರಿಂದ ಪಂಜಾಬಿನ ರೈತಸಮುದಾಯದವರ ಗಮನ ಸೆಳೆಯಲು ಕೇಜ್ರಿವಾಲ್​ ರೈತರ ಸಮಸ್ಯೆಗಳಿಗೆ ಮುಕ್ತಿ ಹಾಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಅದನ್ನೇ ಉತ್ಪ್ರೇಕ್ಷೆ ಮಾಡಿರುವ ಕೇಜ್ರಿವಾಲ್​ ಪಂಜಾಬಿನಲ್ಲಿ ಎಎಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಒಬ್ಬನೂ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

    ಇದನ್ನೂ ಓದಿ: ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಇನ್​ಸ್ಪೆಕ್ಟರ್ ಈಗ ಸೆಲ್ಯೂಟ್ ಹೊಡೀತಾರೆ: ಅಕೈ ಪದ್ಮಶಾಲಿ

    ಕೇಜ್ರಿವಾಲ್​ರ ಈ ರೀತಿಯಾದ ಭಾಷಣದ ವಿಡಿಯೋ ತುಣಕನ್ನು ಪೋಸ್ಟ್​ ಮಾಡಿರುವ ಎಎಪಿಯ ಅಧಿಕೃತ ಟ್ವಿಟರ್​ ಖಾತೆ​, ಅದೇ ಮಾತನ್ನು ಪುನರುಚ್ಚರಿಸಿದೆ. “ನಾನು ಪೂರ್ಣ ಜವಾಬ್ದಾರಿಯಿಂದ ಹೇಳ್ತಾ ಇದ್ದೀನಿ. ಪಂಜಾಬಿನಲ್ಲಿ ಫೆಬ್ರವರಿಯಲ್ಲಿ ಚುನಾವಣೆ ಇದೆ. ಮಾರ್ಚ್​ ತಿಂಗಳಲ್ಲಿ ಫಲಿತಾಂಶ ಬಂದುಬಿಡುತ್ತದೆ. ಏಪ್ರಿಲ್​ 1 ರಿಂದ ಒಬ್ಬನೂ ರೈತ ಆತ್ಮಹತ್ಯೆ ಮಾಡಿಕೊಳ್ಳಲು ನಾವು ಬಿಡುವುದಿಲ್ಲ. ಅದಕ್ಕಾಗಿ ಏನೇ ಮಾಡಬೇಕಾದರೂ ಸರಿ” ಎಂದು ವಿಡಿಯೋದಲ್ಲಿ ಕೇಜ್ರಿವಾಲ್​ ಉತ್ಸಾಹದ ಮಾತನ್ನಾಡಿರುವುದನ್ನು ಕಾಣಬಹುದು.

    ಜೊತೆಗೆ, “ಏನು ಇಷ್ಟು ದೊಡ್ಡ ಮಾತು ಹೇಳುತ್ತಾನಲ್ಲ ಅಂದ್ಕೋಬೇಡಿ. ನಾನು ಏನು ಹೇಳುತ್ತೇನೋ ಅದನ್ನೇ ಮಾಡುತ್ತೇನೆ” ಎಂದಿರುವ ಕೇಜ್ರಿವಾಲ್​, 70 ವರ್ಷಗಳಲ್ಲಿ ಮಾಡದೇ ಇರುವ ಕೆಲಸವನ್ನು ತಮ್ಮ ಪಕ್ಷ ಮಾಡುತ್ತದೆ ಎಂದಿದ್ದಾರೆ. ಈ ರೀತಿಯ ಪ್ರಣಾಳಿಕೆಯನ್ನು ಚುನಾವಣೆಯಲ್ಲಿ ಇಟ್ಟುಕೊಳ್ಳುವುದು ಮೆಚ್ಚುವಂಥ ವಿಷಯವೇ ಆದರೂ, ಇದು ನಿಜವಾಗಲೂ ಸಾಧಿಸಬಲ್ಲ ಗುರಿಯೇ ಎಂದು ಹಲವು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ.

    ಕೇಜ್ರಿವಾಲ್​ರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಒಬ್ಬರು, “ನಿಮಗೆ ಸಾಧ್ಯವಾಗುವಂತಹ ಪ್ರಾಮಿಸ್​ ಮಾಡಿ…. ಆಮೇಲೆ ಸೆಂಟರ್​ ಸೆಂಟರ್​ ಅನ್ನಬೇಡಿ” ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬರು, ದೆಹಲಿಯಲ್ಲಿ ಕರೊನಾದಿಂದ ಸಾವುಗಳಾಗುತ್ತಿದ್ದ ಸಮಯದಲ್ಲಿ ಎಲ್ಲಿದ್ದಿರಿ? ಆಕ್ಸಿಜನ್ ಸಿಲಿಂಡರ್ ಇರಲಿಲ್ಲ, ಚಿಕಿತ್ಸೆ ಇರಲಿಲ್ಲ. ಪಂಜಾಬಿನ ಜನರನ್ನು ಮೂರ್ಖರೆಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

    ಕಾಶ್ಮೀರ: ಮತ್ತೊಬ್ಬ ನಾಗರೀಕನ ಹತ್ಯೆಗೆ ಸಜ್ಜಾಗಿದ್ದ ಉಗ್ರನ ಅಂತ್ಯ

    ಎಬಿಸಿಡಿ ಬರೆಯಲು ಸೆಣಸಾಡಿದ ಇಂಗ್ಲಿಷ್​​​ ಶಿಕ್ಷಕ! ಪೋಷಕರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts