More

    ಸುವರ್ಣ ಸಾರ್ಥಕ ಸಮಾಜದ ಕಾರ್ಯಕ್ರಮವಲ್ಲ: ಆಯನೂರು ಮಂಜುನಾಥ

    ಶಿವಮೊಗ್ಗ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರಿಗೆ ಸಾರ್ಥಕ ಸುವರ್ಣ ಅಭಿನಂದನೆಯನ್ನು ಮಲೆನಾಡು ವೀರಶೈವ ಲಿಂಗಾಯತ ಮಠಾಧೀಶರು ಬಿಜೆಪಿಯ ಸ್ಪಾನ್ಸರ್ ಆಗಿ ಮಾಡಿದ್ದಾರೆಯೇ ಹೊರತು ಅದು ಸಮಾಜದ ಕಾರ್ಯಕ್ರಮ ಆಗಿರಲಿಲ್ಲ. ಆ ಸಮಾರಂಭಕ್ಕೆ ನಮಗೆ ಆಹ್ವಾನವೂ ಇರಲಿಲ್ಲ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಹೇಳಿದರು.

    ಮಠಾಧೀಶರು ರಾಜಕಾರಣಿಗಳ ಜನ್ಮದಿನವನ್ನು ಆಚರಿಸುವ ಸಂಸ್ಕೃತಿ ಬೆಳೆದಿದೆ. ರಾಜಕಾರಣಿಗಳ ಓಲೈಕೆ ಮಾಡಿದ್ದಾರೆ. ಅವರಿಗೆ ನಿಜವಾಗಿಯೂ ಸಾಧಕರನ್ನು ಸನ್ಮಾನಿಸುವುದಾಗಿದ್ದರೆ ಎಂಎಲ್ಸಿ ಎಸ್.ರುದ್ರೇಗೌಡ ಅವರನ್ನು ಮೊದಲು ಅಭಿನಂದಿಸಬೇಕಿತ್ತು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕೆಪಿಎಸ್‌ಸಿ ಅಧ್ಯಕ್ಷರಾಗಿ ಸಾಕಷ್ಟು ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಬೆಕ್ಕಿನಕಲ್ಮಠ ಕಟ್ಟಡ ಪೂರ್ಣಗೊಳಿಸಿದ ಶ್ರೇಯವೂ ಅವರಿಗೆ ಸಲ್ಲುತ್ತದೆ. ದೇಶದಲ್ಲಿರುವ ಫೌಂಡ್ರಿಯಲ್ಲಿರುವ ಎಲ್ಲ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಸಮಾಜದ ಸನ್ಮಾನ ಆಗಿದ್ದರೆ ನಮ್ಮನ್ನೂ ಆಹ್ವಾನಿಸುತ್ತಿದ್ದರು. ಅದರಲ್ಲಿ ಭಾಗವಹಿಸುವುದಕ್ಕೆ ನನಗೆ ಯಾವುದೇ ಸಂಕೋಚ ಇರಲಿಲ್ಲ ಎಂದರು.
    ಬಿಜೆಪಿಗೆ ಮೊದಲ ಬಾರಿಗೆ ಸಂಸತ್ ಸ್ಥಾನ ತಂದು ಕೊಟ್ಟವ ನಾನು. ನಾಲ್ಕು ಸದನಗಳಿಗೆ ಹೋಗಿ ಬಂದಿದ್ದೇನೆ. ನಾವೆಲ್ಲ ಮಠಾಧೀಶರ ಕಣ್ಣಿಗೆ ಕಂಡಿಲ್ಲ. ಕೇವಲ ಸಿಎಂ ಮಗ ಎಂಬ ಕಾರಣಕ್ಕೆ ಅಭಿನಂದಿಸಿದ್ದಾರೆ ಅಥವಾ ಮಠಗಳಿಗೆ ದೇಣಿಗೆ ನೀಡಿದ್ದಾರೆ ಎಂಬ ಅನುಮಾನವಿದೆ. ಬಿಜೆಪಿಯ ಪ್ರಾಯೋಜಿತ ಕಾರ್ಯಕ್ರಮ ಅದಾಗಿದೆ. ಅದರ ಬಗ್ಗೆ ನಮ್ಮ ವಿರೋಧವಿಲ್ಲ. ಮಠಾಧೀಶರು ಬಿಜೆಪಿ ಪ್ರಚಾರಕರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts