More

    ನಾರ್ವೆ ಬರಹಗಾರ ಜಾನ್​ ಫಾಸ್ಸೆಗೆ ಒಲಿದ 2023ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್​ ಪ್ರಶಸ್ತಿ

    ನವದೆಹಲಿ: ನಾರ್ವೆಯ ಖ್ಯಾತ ಬರಹಗಾರ ಮತ್ತು ನಾಟಕಕಾರ ಜಾನ್​ ಫಾಸ್ಸೆ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ 2023ನೇ ಸಾಲಿನ ನೊಬೆಲ್​ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

    ಮಾತನಾಡದವರ ಧ್ವನಿಯಾಗಿರುವ ಫಾಸೆ ಅವರ ಅದ್ಭುತ ನಾಟಕಗಳಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ಸ್ವೀಡಿಶ್​ ಅಕಾಡೆಮಿ ತಿಳಿಸಿದೆ. ಅಕಾಡೆಮಿಯ ಖಾಯಂ ಕಾರ್ಯದರ್ಶಿ ಮ್ಯಾಟ್ಸ್ ಮಾಲ್ಮ್ ಅವರು ಸ್ಟಾಕ್‌ಹೋಮ್‌ನಲ್ಲಿ ಪ್ರಶಸ್ತಿಯನ್ನು ಘೋಷಿಸಿದ್ದಾರೆ.

    ಫಾಸ್ಸೆ ಅವರ ಕೆಲಸವು ಅವರ ನಾರ್ವೇಜಿಯನ್ ಹಿನ್ನೆಲೆಯ ಭಾಷೆ ಮತ್ತು ಸ್ವಭಾವದಲ್ಲಿ ಬೇರೂರಿದೆ. ಫಾಸ್ಸೆ ಅವರ ಹಲವಾರು ನಾಟಕಗಳು, ಕಾದಂಬರಿಗಳು, ಕವನ ಸಂಕಲನಗಳು, ಪ್ರಬಂಧಗಳು, ಮಕ್ಕಳ ಪುಸ್ತಕಗಳು ಮತ್ತು ಭಾಷಾಂತರಗಳನ್ನು ಒಳಗೊಂಡ ಹಲವು ಕೃತಿಗಳನ್ನು ಗೌರವಿಸಿ ಈ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ನೊಬೆಲ್ ಸಾಹಿತ್ಯ ಸಮಿತಿಯ ಅಧ್ಯಕ್ಷ ಆಂಡರ್ಸ್ ಓಲ್ಸನ್ ತಿಳಿಸಿದ್ದಾರೆ.

    Nobel prize'

    ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ; ಮನೀಶ್​ ಸಿಸೋಡಿಯಾ ಪಾತ್ರದ ಕುರಿತು ಪುರಾವೆ ಕೇಳಿದ ಸುಪ್ರೀಂ ಕೋರ್ಟ್

    64 ವರ್ಷದ ಜಾನ್ ಫಾಸ್ಸೆ ಅವರು ಎರಡು ಡಜನ್‌ಗಿಂತಲೂ ಹೆಚ್ಚು ನಾಟಕಗಳನ್ನು ಬರೆದಿದ್ದು, ನಾಲ್ಕು ದಶಕಗಳ ಕಾಲ ಕಾದಂಬರಿಗಳು, ಪ್ರಬಂಧಗಳು, ಕವನ ಸಂಕಲನಗಳು ಮತ್ತು ಮಕ್ಕಳ ಪುಸ್ತಕಗಳನ್ನು ಕೂಡ  ಪ್ರಕಟಿಸಿದ್ದಾರೆ. ಇವರ ಲೇಖನ, ಬರಹಗಳು 40 ಭಾಷೆಗಳಲ್ಲೂ ಭಾಷಾಂತರಗೊಂಡಿವೆ.

    ನೊಬೆಲ್​ ಪ್ರಶಸ್ತಿಯು 10 ಲಕ್ಷ ಅಮೆರಿಕನ್ ಡಾಲರ್ ಮೊತ್ತ​ ಹಾಗೂ 18 ಕ್ಯಾರೆಟ್​ ಚಿನ್ನದ ಪದಕವನ್ನು ಒಳಗೊಂಡಿದೆ. ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯ ವಿಜೇತರ ಹೆಸರನ್ನೂ ಇನ್ನಷ್ಟೇ ಘೋಷಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts