More

    ಅಮೆರಿಕ ಹೈಸ್ಕೂಲ್​ನಲ್ಲಿ ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ: ಇದು ಕನ್ನಡಿಗರ ಹೆಮ್ಮೆ..!

    ಅಮೆರಿಕ ಶಾಲೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ವಿದೇಶಿ ಭಾಷೆಯನ್ನಾಗಿ ಕನ್ನಡ ಕಲಿಯಲು ಅವಕಾಶ ಮಾಡಿಕೊಟ್ಟಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ.

    ಎಲ್ಲಾದರೂ ಇರು…ಹೇಗಾದರೂ ಇರು…ಕನ್ನಡವ ಮರೆಯದಿರು ಎಂಬ ನಾಣ್ಣುಡಿಯಂತೆ ನಮ್ಮ ಕರ್ನಾಟಕದಿಂದ ಸಾವಿರಾರು ಮೈಲಿ ದೂರವಿರುವ ಉತ್ತರ ಅಮೆರಿಕಾದ ನಾರ್ತ್ ಕರೋಲಿನಾ ರಾಜ್ಯದ ರಾಜಧಾನಿ ರೇಲಿಗ್​ ಭಾಗದ ಪ್ರಸಿದ್ಧ ವೇಕ್​ ಕೌಂಟಿ (Wake County) ಪಬ್ಲಿಕ್ ಸ್ಕೂಲ್ ನಮ್ಮ ಸಿರಿಗನ್ನಡವನ್ನು ಒಂದು ವಿದೇಶಿ ಭಾಷೆಯಾಗಿ ಹೈಸ್ಕೂಲ್​ ವಿದ್ಯಾರ್ಥಿಗಳಿಗೆ ಕಲಿಸಲು ಮುಂದಾಗಿದೆ. ಯುಎಸ್ಎ ಕನ್ನಡವನ್ನು ಹೈಸ್ಕೂಲ್​ಗಳಿಗೆ ಗ್ರೇಡ್ ಪಾಯಿಂಟ್ ರಹಿತ (ನಾನ್​ ಜಿಪಿಎ) ಎಂದು ಅನುಮೋದಿಸಿದೆ.

    ಸ್ಥಳೀಯ ನಾರ್ತ್ ಕರೋಲಿನಾ ಕನ್ನಡ-ಕಲಿ ಶಾಲೆ ತಂಡ ಮತ್ತು ಕನ್ನಡ ಅಕಾಡೆಮಿಯ ವರ್ಷಕ್ಕೂ ಹೆಚ್ಚಿನ ಸತತ ಪ್ರಯತ್ನದಿಂದ ಇದೇ ನವೆಂಬರ್ 2020 (ರಾಜ್ಯೋತ್ಸವದ) ತಿಂಗಳಿನಲ್ಲಿ ಇದಕ್ಕೆ ಅನುಮೋದನೆ ಕೊಟ್ಟಿರುವುದು ಇಲ್ಲಿನ ಎಲ್ಲಾ ಕನ್ನಡಿಗರಿಗೆ, ಭಾರತೀಯರಿಗೆ ಹೆಚ್ಚಿನ ಸಂತೋಷವನ್ನು ತಂದಿದೆ ಮತ್ತು ಮುಂದಿನ ಪೀಳಿಗೆಯವರಿಗೆ ಇದು ಖಂಡಿತ ಉಪಯೋಗವಾಗುವುದು ಅಂದರೆ ಅತಿಶಯೋಕ್ತಿಯಲ್ಲ.

    ಉತ್ತರಮ ಪ್ರಯತ್ನದೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದ ನಾರ್ತ್ ಕರೋಲಿನಾ ಕನ್ನಡ-ಕಲಿ, ಕನ್ನಡ ಅಕಾಡೆಮಿ ಹಾಗೂ ವೇಕ್ ಕೌಂಟಿ ತಂಡಕ್ಕೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

    ಅಮೆರಿಕ ಹೈಸ್ಕೂಲ್​ನಲ್ಲಿ ವಿದೇಶಿ ಭಾಷೆಯಾಗಿ ಕನ್ನಡ ಕಲಿಕೆ: ಇದು ಕನ್ನಡಿಗರ ಹೆಮ್ಮೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts