More

    ಅಸಂವಿಧಾನಿಕವಾಗಿ ಮಸೂದೆ ಮಂಡನೆ ಸರಿಯಲ್ಲ

    ಕೊಪ್ಪಳ: ರೈತ ವಿರೋಧಿ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಸಂವಿಧಾನಿಕವಾಗಿ ಮಂಡನೆ ಮಾಡಿದ್ದು, ವಿರೊಧಿಸಿದ 8 ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಆರೋಪಿಸಿ ಎಎಪಿ ಜಿಲ್ಲಾ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಲೋಕಸಭೆಯಲ್ಲಿ ಬಹುಮತ ಪಡೆದಿರುವ ಬಿಜೆಪಿಗೆ ರಾಜ್ಯ ಸಭೆಯಲ್ಲಿ ಬಹುಮತವಿಲ್ಲ. ಸಂಸತ್ತಿನ ಸಂಪ್ರದಾಯಗಳನ್ನು ಮುರಿದು, ರೈತ ವಿರೋಧಿ ಮಸೂದೆಗಳನ್ನು ರಾಜ್ಯ ಸಭೆಯಲ್ಲಿ ಅಸಂವಿಧಾನಿಕವಾಗಿ ಅಂಗೀಕರಿಸಲಾಗಿದೆ. ಇದು ಪ್ರಜಾಪ್ರಭುತ್ವದ ವಿಶ್ವಾಸಾರ್ಹತೆಗೆ ಧಕ್ಕೆ ತರಿಲಿದೆ. ಸರ್ಕಾರದ ನಡೆಯನ್ನು ರಾಜ್ಯ ಸಭೆ ಪ್ರತಿಪಕ್ಷ ಸದಸ್ಯರು ವಿರೋಧಿಸಿದ್ದಾರೆ. ಅದು ಅವರ ಕಾನೂನಾತ್ಮಕ ಹಕ್ಕು. ಇದನ್ನೇ ನೆಪವಾಗಿ ಎಎಪಿ ಸಂಸದ ಸಂಜಯ್ ಸಿಂಗ್ ಸೇರಿ 8 ಸದಸ್ಯರನ್ನು ಒಂದು ವಾರ ಅಮಾನತು ಮಾಡಿರುವು ಖಂಡನೀಯವೆಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಷ್ಟ್ರಪತಿಗಳು ರೈತ ವಿರೊಧಿ ಮಸೂದೆಗಳಿಗೆ ಅಂಕಿತ ಹಾಕಬಾರದು. ಸಂವಿಧಾನ ವಿರೋಧಿಯಾಗಿ ಜಾರಿ ಮಾಡಿರುವ ಕಾನೂನುಗಳನ್ನು ತಿರಸ್ಕರಿಸಬೇಕು. 8 ರಾಜ್ಯ ಸಭಾ ಸದಸ್ಯರ ಅಮಾನತು ಆದೇಶವನ್ನು ಹಿಂಪಡೆಯುವಂತೆ ಸಭಾಧ್ಯಕ್ಷರಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಎಎಪಿ ಜಿಲ್ಲಾಧ್ಯಕ್ಷ ಹುಸೇನ್‌ಸಾಬ್ ಗಂಗನಾಳ, ತಾಲೂಕು ಅಧ್ಯಕ್ಷ ಶರಣಪ್ಪ ಸಜ್ಜಿಹೊಲ, ಪ್ರ.ಕಾ.ಶಿವರಾಜ ಪೂಜಾರಿ, ಯುವ ಘಟಕ ತಾಲೂಕು ಅಧ್ಯಕ್ಷ ವೀರೇಶ ಬಡಿಗೇರ, ಲೋಹಿತ್ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts