
ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ಪಂಚಾಯತ್‌ರಾಜ್ ಅಭಿವೃದ್ಧಿ ಅಽಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿ೦ದ ನ. 8ರಿಂದ ಅಸಹಕಾರ ಚಳವಳಿ ನಡೆಸಲಾಗುವುದು ಎಂದು ಸಂಘದ ಜಿಲ್ಲಾ ಅಧ್ಯಕ್ಷೆ ಪುಷ್ಪಾವತಿ ಮೇದಾರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೦ರಿಂದ ಈವರೆಗೆ ಇಲಾಖೆಗೆ ದೊರೆತ ರಾಜ್ಯ- ರಾಷ್ಟç ಮಟ್ಟದ ಪ್ರಶಸ್ತಿಗಳು ಪಿಡಿಒಗಳ ಕಾರ್ಯವೈಖರಿಯ ಪ್ರತಿಫಲ. ಆದರೆ, ಪಿಡಿಒಗಳ ವೈಯಕ್ತಿಕ ಬದುಕು ಕತ್ತಲೆಯ ಕೂಪವಾಗಿದೆ. ಇದಕ್ಕೆ ಹಿರಿಯ ಅಽಕಾರಿಗಳೇ ಕಾರಣ ಎಂದರು.
ಪಿಡಿಒ ಹುದ್ದೆ ಸೃಷ್ಟಿಯಾಗಿ 13 ವರ್ಷಗಳಾದರೂ ಕಾನೂನುಬದ್ಧ ಜ್ಯೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ತಾಲೂಕು ಪಂಚಾಯಿತಿಗಳಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗಳಿಗೆ ಬಡ್ತಿ ನೀಡಲು ವಿಳಂಬ ಮಾಡಲಾಗುತ್ತಿದೆ. ಪಿಡಿಒಗಳ ಹುದ್ದೆಗಳನ್ನು ಬಿ ವೃಂದಕ್ಕೆ ಮೇಲ್ದರ್ಜೆಗೆ ಏರಿಸಬೇಕು. ಸಾಮಾನ್ಯ ವರ್ಗಾವಣೆ ಅವಽ ಮುಗಿದರೂ ನಿಯಮ ಮೀರಿ ನಿರಂತರ ವರ್ಗಾವಣೆ ಮಾಡುತ್ತಿರುವುದು ಹಾಗೂ ಹಲವಾರು ಬಾಽತ ನೌಕರರಿಗೆ ಸ್ಥಳ ನಿಯುಕ್ತಿ ಮಾಡದೆ, ವೇತನ ತಡೆ ಹಿಡಿಯಲಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಆಗ್ರಹಿಸಿ ನ. ೮ರಿಂದ ಮೂಲ ಸೌಲಭ್ಯ ಹೊರತುಪಡಿಸಿ ಇಲಾಖೆಯೊಂದಿಗೆ ಅಸಹಕಾರ ನೀಡುವ ಮೂಲಕ ಪ್ರತಿಭಟಿಸಲಾಗುವುದು. ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಾಟ್ಸಾಪ್ ಗ್ರುಪ್‌ಗಳಿಂದ ಹೊರಬಂದು ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದರು.
ಮೊದಲ ಹಂತದ ಹೋರಾಟಕ್ಕೆ ಸ್ಪಂದನೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಎದುರು ಅನಿರ್ದಿಷ್ಟಾವಽ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಪದಾಽಕಾರಿಗಳಾದ ಬಿ.ಎ. ಮಡಿವಾಳರ, ತನ್ವೀರ ಡಿ., ಶೈಲಾ ನೀಲಗಾರ ಸುದ್ದಿಗೋಷ್ಠಿಯಲ್ಲಿದ್ದರು.