ಬೈಲಹೊಂಗಲ: ಬೆಳವಡಿ ಗ್ರಾಪಂ ವ್ಯಾಪ್ತಿಯ ಕೆ.ಬಿ. ಪಟ್ಟಿಹಾಳ ಕ್ರಾಸ್ ಹತ್ತಿರದ ಮುಲ್ಲಾನ ಮಡ್ಡಿ ಸ್ಥಳದಲ್ಲಿ ವಾಸಿಸುತ್ತಿರುವ ಅಲೆಮಾರಿ ಬುಡಕಟ್ಟು ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಪದಾಧಿಕಾರಿಗಳು ಎಸಿ ಪ್ರಭಾವತಿ ಕೀರಪುರ, ಬೆಳವಡಿ ಪಿಡಿಒ ಉಸ್ಮಾನ್ ನದಾಫ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಮಾರುತಿ ಕೊಂಡೂರ ಮಾತನಾಡಿ, 20 ವರ್ಷಗಳಿಂದ 20ಕ್ಕೂ ಹೆಚ್ಚು ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಉಪ ಜೀವನ ನಡೆಸುತ್ತಿವೆ. ಮಕ್ಕಳ ಶಿಕ್ಷಣಕ್ಕಾಗಿ ವಿದ್ಯುತ್, ದಾರಿದೀಪ, ಕುಡಿಯಲು ನೀರಿನ ವ್ಯವಸ್ಥೆ ಇರುವುದಿಲ್ಲ. ಬಡ ಜನರ ಜೀವನ ದುಸ್ತರವಾಗಿದ್ದು, ಅಲೆಮಾರಿ ಜನಾಂಗಕ್ಕೆ ವಾಸಕ್ಕೆ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.
ದುರ್ಗಪ್ಪ ಕುಂದ್ರೋಲ, ಹುಸೇನಿ ದೇವರಶಟ್ಟಿ, ಯಲ್ಲಪ್ಪ ಮೋಗಸಲಿ, ನಾಗರಾಜ ಸಿದ್ನಲ, ಫಕೀರವ್ವ ದೇವರಶೆಟ್ಟಿ, ಅಶ್ವಿನಿ ಕುಂದ್ರೋಲ, ಯಮನಕ್ಕ ದೇವರಶಟ್ಟಿ, ಮಂಜುಳಾ ಸಿದ್ನಾಲ, ಅಕ್ಕವ ಸಮಟಿ, ಭೀಮಕ್ಕ ದೇವರಶಟ್ಟಿ, ಯಲ್ಲವ್ವ ದುರ್ಗಮರ್ಗಿ, ಸೋಣವ್ವ ದುರ್ಗಮರ್ಗಿ, ಮಂಜಾವ್ವ ಕೊನಪೊಲಾ ಇತರರು ಇದ್ದರು.