More

    ದಸರಾ ಮುಗಿಯುವವರೆಗೂ ಶಾಲೆ ಆರಂಭ ಆಗಲ್ಲ?

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಕರೊನಾ ಸೋಂಕಿನ ಭೀತಿಯಿಂದಾಗಿ ದಸರಾವರೆಗೂ ಶಾಲೆಯನ್ನು ಆರಂಭ ಮಾಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

    ಶಾಲೆ ಆರಂಭಿಸುವ ಕುರಿತಂತೆ ಎಲ್ಲಾ ಪಾಲಕರ ಅಭಿಪ್ರಾಯ ಪಡೆಯಲು ಸರ್ಕಾರ ಇದಾಗಲೇ ಎಲ್ಲಾ ಶಾಲೆಗಳಿಗೂ ಸೂಚಿಸಿತ್ತು. ಅದರಂತೆ ಶಾಲೆಗಳ ಆಡಳಿತ ಮಂಡಳಿಯು ಅಭಿಪ್ರಾಯ ಸಂಗ್ರಹಿಸಿದೆ. ಈ ಪೈಕಿ ಶೇ.80ಕ್ಕಿಂತ ಹೆಚ್ಚಿನ ಪಾಲಕರು ತಮ್ಮ ಮಕ್ಕಳನ್ನು ಸದ್ಯ ಶಾಲೆಗೆ ಕಳುಹಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಮೊದಲೇ ಸರ್ಕಾರ ತಿಳಿಸಿರುವ ಒಂದು ವೇಳೆ ಸರ್ಕಾರ ಶಾಲೆಗಳನ್ನು ಆಗಸ್ಟ್​ನಿಂದ ಆರಂಭಿಸಿದರೂ ತಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಕರ್ನಾಟಕ ಸಂಪೂರ್ಣವಾಗಿ ಕರೊನಾಮುಕ್ತವಾದ ಮೇಲೆಯೇ ಶಾಲೆಗೆ ಮಕ್ಕಳನ್ನು ಕಳುಹಿಸುವುದಾಗಿ ಬಹುತೇಕ ಎಲ್ಲಾ ಪಾಲಕರು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಅಕ್ಕನ ನಿಶ್ಚಿತಾರ್ಥದಲ್ಲಿ ಸಂಭ್ರಮದಿಂದ ಓಡಾಡಿದ್ದವಳಿಗೆ ಮರುದಿನವೇ ಕಾದಿತ್ತು ಕೊವಿಡ್​-19 ಶಾಕ್​ !

    ಅಪ್ಪ-ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವ ಅದರಲ್ಲಿಯೂ ಸರ್ಕಾರಿ ಸೇವೆಯಲ್ಲಿ ಇರುವವರ ಪೈಕಿ ಇನ್ನುಳಿದ ಶೇ.20ರಷ್ಟು ಪಾಲಕರು ತಾವು ಆಗಸ್ಟ್​ನಿಂದ ಕಳುಹಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಮನೆಯಲ್ಲಿ ಮಕ್ಕಳು ಒಬ್ಬರೇ ಇರುವ ಕಾರಣ ಅವರನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಎನ್ನುವುದು ಅವರ ಗೋಳು.

    ಆದರೆ ಬಹುಸಂಖ್ಯೆಯಲ್ಲಿ ಪಾಲಕರು ಹಿಂದೇಟು ಹಾಕಿರುವ ಕಾರಣ ಸರ್ಕಾರ ಶಾಲೆಗಳ ಆರಂಭವನ್ನು ದಸರಾವರೆಗೂ ಮುಂದೂಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

    ಸುಮಾರು 32 ಶೈಕ್ಷಣಿಕ ಜಿಲ್ಲೆಗಳ ಪೈಕಿ ಶೇ.80ರಷ್ಟು ಪಾಲಕರು ಆಗಸ್ಟ್​ನಿಂದ ಶಾಲೆಗಳನ್ನು ಪುನರಾರಂಭಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸರ್ಕಾರ ಅನಿವಾರ್ಯವಾಗಿ ಸರ್ಕಾರಿ, ಖಾಸಗಿ ಅನುದಾನ, ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಬಹುತೇಕ ದಸರಾ ಹಬ್ಬ ಮುಗಿದ ನಂತರವೇ ಪುನರಾರಂಭಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಇನ್ನು ಪದವಿ,ಪದವಿಪೂರ್ವ, ಪ್ರೌಢಶಾಲೆ, ಹಿರಿಯ, ಕಿರಿಯ ಪ್ರಾಥಮಿಕ ಶಾಲೆಗಳನ್ನು ಪರಿಸ್ಥಿತಿಗನುಗುಣವಾಗಿ ಆರಂಭಿಸುವುದು ಹಾಗೂ ನರ್ಸರಿ ಶಾಲೆಗಳನ್ನು ಜನವರಿವರೆಗೂ ತೆರೆಯದಂತೆ ಸರ್ಕಾರದಿಂದ ಶೀಘ್ರವೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

    ರಾಷ್ಟ್ರಪತಿ, ಪ್ರಧಾನಿ, ಸಚಿವರಿಗೆ ಹಣ್ಣು ಕೊಂಡೊಯ್ದ ಅಧಿಕಾರಿಗೆ ಕರೊನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts