More

    ನಿವೃತ್ತಿ ಮಾತು ಸದ್ಯಕ್ಕಿಲ್ಲ ಎಂದ ಯುನಿವರ್ಸಲ್ ಬಾಸ್

    ನವದೆಹಲಿ: 2021 ಹಾಗೂ 2022ರ ಟಿ20 ವಿಶ್ವಕಪ್ ಆಡಲು ಸನ್ನದ್ಧವಾಗುತ್ತಿದ್ದು, ನಿವೃತ್ತಿ ಮಾತು ಸದ್ಯಕ್ಕಿಲ್ಲ ಎಂದು ‘ಯುನಿವರ್ಸಲ್ ಬಾಸ್’ ಖ್ಯಾತಿಯ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹೇಳಿದ್ದಾರೆ. ಪದೆ ಪದೇ ನಿವೃತ್ತಿ ಮಾತು ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ 41 ವರ್ಷದ ಗೇಲ್, ಇನ್ನೂ ಐದು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದೇನೆ. 45 ವರ್ಷಕ್ಕೂ ಮೊದಲೇ ನಿವೃತ್ತಿಯಾಗುವ ಯೋಚನೆ ಇಲ್ಲ. ಮತ್ತೆ 2 ವಿಶ್ವಕಪ್ ಆಡುವ ತೀರ್ಮಾನ ಮಾಡಿದ್ದೇನೆ’ ಎಂದು ಹೇಳಿದ್ದಾರೆ. 2021ರಲ್ಲಿ ಭಾರತದಲ್ಲಿ ಹಾಗೂ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ.

    ಇದನ್ನೂ ಓದಿ: VIDEO: ಮುಂದುವರಿದ ಶ್ರೀಶಾಂತ್ ಸ್ಲೆಡ್ಜಿಂಗ್ ಆಟ..!

    ಅಲ್ಟಿಮೇಟ್ ಕ್ರಿಕೆಟ್ ಚಾಲೆಂಜ್ (ಯುಕೆಸಿ) ಕ್ರಿಕೆಟ್ ಟೂರ್ನಿಯಲ್ಲೂ ಕ್ರಿಸ್ ಗೇಲ್ ಭಾಗಿಯಾಗುತ್ತಿದ್ದಾರೆ. ದುಬೈನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತದ ಯುವರಾಜ್ ಸಿಂಗ್, ಇಂಗ್ಲೆಂಡ್‌ನ ಇವೊಯಿನ್ ಮಾರ್ಗನ್, ಕೆವಿನ್ ಪೀಟರ್ಸೆನ್, ವೆಸ್ಟ್ ಇಂಡೀಸ್‌ನ ಆಂಡ್ರೆ ರಸೆಲ್ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಕೂಡ ಪಾಲ್ಗೊಳ್ಳಲಿದ್ದಾರೆ. 16 ಪಂದ್ಯಗಳ ಈ ನೂತನ ಮಾದರಿಯ ಟೂರ್ನಿಯಲ್ಲಿ ಒಂದು ತಂಡದಲ್ಲಿ ಕೇವಲ ಒಬ್ಬ ಆಟಗಾರನಿದ್ದು, ಪ್ರತಿ ಪಂದ್ಯದಲ್ಲೂ 15 ಎಸೆತಗಳ 4 ಇನಿಂಗ್ಸ್ ಇರಲಿದೆ. ಇಬ್ಬರ ನಡುವೆ ಈ ಪಂದ್ಯ ನಡೆಯಲಿದೆ. ಹೆಚ್ಚು ರನ್‌ಗಳಿಸಿದವರನ್ನು ಕಡೆಯಲ್ಲಿ ವಿಜೇತರು ಎಂದು ಘೋಷಿಸಲಾಗುತ್ತದೆ.

    ಇದನ್ನೂ ಓದಿ: ಸಿಂಹದ ಮರಿ ದತ್ತು ಪಡೆದ ವಸಿಷ್ಠ ಸಿಂಹ

    ಚುಟುಕು ಕ್ರಿಕೆಟ್‌ನಲ್ಲಿ ದೈತ್ಯ ಬ್ಯಾಟ್ಸ್‌ಮನ್ ಎನಿಸಿರುವ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ನೆಚ್ಚಿನ ಆಟಗಾರ ಎನಿಸಿದ್ದಾರೆ. 411 ಟಿ20 ಪಂದ್ಯಗಳಿಂದ 22 ಶತಕ, 85 ಅರ್ಧಶತಕ ಸೇರಿದಂತೆ 13,584 ಬಾರಿಸಿದ್ದು, 1001 ಸಿಕ್ಸರ್ ಸಿಡಿಸಿದ್ದಾರೆ. ಎರಡು ಬಾರಿ ಟಿ20 ವಿಶ್ವಕಪ್ ಜಯಿಸಿದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದರು.

    ಇವತ್ತೆಷ್ಟು ಮಕ್ಕಳು ಹುಟ್ಟುತ್ತವೆ ಗೊತ್ತಾ? ಅಬ್ಬಾ.. ಭಾರತದಲ್ಲೇ ಹೈಯೆಸ್ಟು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts