More

    ಹಿಜಾಬ್​ ವಿವಾದ: ಹೈಕೋರ್ಟ್​ನಿಂದ ಮಹತ್ವದ ಸೂಚನೆ; ಶಾಲಾ-ಕಾಲೇಜು ಆರಂಭಿಸಿ, ಆದರೆ…

    ಬೆಂಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವ ಸಂಬಂಧ ಉಂಟಾದ ವಿವಾದ ಹಿಜಾಬ್​-ಕೇಸರಿ ಸಂಘರ್ಷವಾಗಿ ಮಾರ್ಪಟ್ಟು ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು ಬಹುತೇಕ ಎಲ್ಲರಿಗೂ ತಿಳಿದಿರುವಂಥದ್ದೇ.

    ಹಿಜಾಬ್ ವಿವಾದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಪೀಠ ಬುಧವಾರ ಸಿಜೆ ಅಂಗಳಕ್ಕೆ ರವಾನಿಸಿದ ಬೆನ್ನಲ್ಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಸೇರಿ ಮೂವರು ನ್ಯಾಯ ಮೂರ್ತಿಗಳನ್ನೊಳಗೊಂಡ ಪೂರ್ಣಪೀಠ ರಚನೆಯಾಗಿದೆ.

    ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಹಾಗೂ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರನ್ನೊಳಗೊಂಡ ಈ ಪೂರ್ಣಪೀಠ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಇಂದು ನಡೆಸಿದೆ.

    ಇದನ್ನೂ ಓದಿ: ಮತ್ತೊಂದು ವೃದ್ಧ ದಂಪತಿಯ ಬರ್ಬರ ಕೊಲೆ: ಇಲ್ಲೂ ಬೇರೆ ಬೇರೆ ಕೋಣೆಗಳಲ್ಲಿ ಹತ್ಯೆ!

    ಸದ್ಯ ಪ್ರಕರಣ ಸಂಬಂಧ ಶಾಲಾ-ಕಾಲೇಜುಗಳಿಗೆ ರಜೆ ನೀಡಿರುವ ವಿಚಾರವಾಗಿ ಪ್ರಸ್ತಾಪಿಸಿದ ಪೂರ್ಣಪೀಠ, ಶಾಲೆ-ಕಾಲೇಜುಗಳನ್ನು ಆರಂಭಿಸುವಂತೆ ಸೂಚನೆ ನೀಡಿದೆ. ಆದರೆ ಪ್ರಕರಣ ಇನ್ನೂ ಇತ್ಯರ್ಥವಾಗದ್ದರಿಂದ ಮುಂದಿನ ಆದೇಶದವರೆಗೂ ಯಾವ ವಿದ್ಯಾರ್ಥಿಗೂ ಹಿಜಾಬ್​ ಅಥವಾ ಕೇಸರಿ ಶಾಲು ಸೇರಿ ಧಾರ್ಮಿಕ ಉಡುಪು ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಇಲ್ಲ ಎಂದು ಹೇಳಿದೆ.

    ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts