More

    ತರಗತಿ ಶುರುವಾದ್ರೂ ಸಿಗದ ಪುಸ್ತಕ: ಪಿಯು ವಿದ್ಯಾರ್ಥಿಗಳ ಪರದಾಟ, ಪಾಠ ಮಾಡಲು ಉಪನ್ಯಾಸಕರಿಗೂ ಕಷ್ಟ

    ಬೆಂಗಳೂರು: ರಾಜ್ಯದಲ್ಲಿ ಪಿಯು ತರಗತಿಗಳು ಆರಂಭವಾಗಿ ತಿಂಗಳು ಸಮೀಪಿಸುತ್ತಿದ್ದರೂ ವಿದ್ಯಾರ್ಥಿಗಳು ಮಾತ್ರ ಇನ್ನೂ ಪಠ್ಯಪುಸ್ತಕವನ್ನೇ ನೋಡಿಲ್ಲ! ಪರಿಣಾಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತಿದ್ದು, ಉಪನ್ಯಾಸಕರಿಗೂ ಪುಸ್ತಕವಿಲ್ಲದೆ ಬೋಧನೆ ಮಾಡುವ ಕೆಲಸ ಸವಾಲಾಗಿ ಮಾರ್ಪಟ್ಟಿದೆ.

    ಪಠ್ಯಪುಸ್ತಕ ಸಮಸ್ಯೆಯಿಂದಾಗಿ ಹಲವೆಡೆ ಉಪನ್ಯಾಸಕರು ಮಕ್ಕಳಿಗೆ ಹೋಮ್​ ವರ್ಕ್​ ಕೊಡುವುದನ್ನೇ ನಿಲ್ಲಿಸಿದ್ದಾರೆ.
    ಪಿಯು ಪಠ್ಯಪುಸ್ತಕದ ಮುದ್ರಣ ಮತ್ತು ಮಾರಾಟದ ಹಕ್ಕನ್ನು ಕರ್ನಾಟಕ ಪಠ್ಯಪುಸ್ತಕ ಸಂಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದೆ. ಆದರೆ ಸಂ ಇನ್ನೂ ಶಾಲಾ ಮಕ್ಕಳ ಪಠ್ಯಪುಸ್ತಕದ ಮುದ್ರಣದಲ್ಲೇ ತೊಡಗಿರುವುದರಿಂದ ಪಿಯು ಪಠ್ಯಪುಸ್ತಕ ಪ್ರಕ್ರಿಯೆ ವಿಳಂಬ ಮಾಡಿದೆ.

    ರಾಜ್ಯದಲ್ಲಿ ಆ.23ರಿಂದ ಪಿಯು ಕಾಲೇಜುಗಳು ಆರಂಭವಾಗಿದ್ದು, ಶೇ.76 ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ. 2021&22ನೇ ಸಾಲಿನ ಶೈಕ್ಷಣಿಕ ವರ್ಷ ಒಂದೂವರೆ ತಿಂಗಳು ವಿಳಂಬವಾಗಿ ಆರಂಭವಾಗಿದೆ. ಪಠ್ಯಪುಸ್ತಕ ಸಂ ನಿಗದಿತ ಸಮಯದಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ನೀಡಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅಜಿರ್ ಸಲ್ಲಿಕೆಯಾಗಿದ್ದು, ಸೆ.30ರೊಳಗೆ ಸಂಪೂರ್ಣ ಪುಸ್ತಕ ನೀಡುವಂತೆ ಸಂಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ.

    ಟೆಂಡರ್​ ವಿಳಂಬ
    ಸಾಮಾನ್ಯವಾಗಿ ಜೂನ್​ನಲ್ಲಿ ಟೆಂಡರ್​ ಕರೆದು ಮುದ್ರಣಕ್ಕೆ ಕಾರ್ಯದೇಶ ನೀಡಲಾಗುತ್ತಿತ್ತು. ಜುಲೈ ಮೊದಲವಾರದಲ್ಲಿ ಮಾರುಕಟ್ಟೆಯಲ್ಲಿ ಪಠ್ಯಪುಸ್ತಕ ದೊರೆಯುತ್ತಿತ್ತು. ಆದರೆ, ಈ ಬಾರಿ ಕರೊನಾ ಕಾರಣದಿಂದ ಭೌತಿಕ ತರಗತಿಗಳ ಆರಂಭ ವಿಳಂಬವಾದ ಕಾರಣ ಪಠ್ಯಪುಸ್ತಕ ಮುದ್ರಣ ಕಾರ್ಯವೂ ತಡವಾಗಿದೆ. ಇತ್ತೀಚೆಗಷ್ಟೇ ಟೆಂಡರ್​ ಕರೆದಿದ್ದು, ಕಡಿಮೆ ಬಿಡ್​ ಮಾಡಿದ ಕಂಪನಿ ಗುರುತಿಸಿ ಕಾರ್ಯಾದೇಶವನ್ನು ನೀಡಬೇಕಿದೆ. ಕಾರ್ಯಾದೇಶ ಪಡೆದು ಕಂಪನಿ ನಿಗದಿತ ಅವಧಿಯಲ್ಲಿ ಪಠ್ಯಪುಸ್ತಕ ಮುದ್ರಣ ಮಾಡಿ ಅದು ಮಾರುಕಟ್ಟೆಗೆ ಬಂದು ವಿದ್ಯಾರ್ಥಿಗಳ ಕೈ ಸೇರುವ ವೇಳೆಗೆ ಅರ್ಧ ಶೈಕ್ಷಣಿಕ ವರ್ಷ ಮುಗಿದಿರುತ್ತದೆ.

    ಜೆರಾಕ್ಸ್​ ಪ್ರತಿ ಅವಲಂಬನೆ
    ಪಠ್ಯಪುಸ್ತಕವನ್ನು ಖಾಸಗಿ ಕಂಪನಿಗಳು ಮುದ್ರಿಸಿ ಮಾರಾಟ ಮಾಡುವಂತಿಲ್ಲ. ಆದರೆ, ಕೆಲವು ಪ್ರಕಾಶನಗಳು ಜೆರಾಕ್ಸ್​ ಅಥವಾ ಪಠ್ಯಪುಸ್ತಕದ ಸ್ಟಾ್​ ಕಾಪಿ ಡೌನ್​ಲೋಡ್​ ಮಾಡಿ ಮುದ್ರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಉಪನ್ಯಾಸಕರ ಒತ್ತಡ ಹಾಗೂ ಮಾರುಕಟ್ಟೆಗೆ ಪಠ್ಯಪುಸ್ತಕ ವಿಳಂಬವಾಗಿರುವುದರಿಂದ ವಿದ್ಯಾರ್ಥಿಗಳು ಈ ಪಠ್ಯಪುಸ್ತಕವನ್ನೇ ಖರೀದಿಸುತ್ತಿದ್ದಾರೆ. ಈ ರೀತಿ ಖಾಸಗಿ ಪ್ರಕಾಶನದ ಪಠ್ಯಪುಸ್ತಕ ಖರೀದಿಸಿದ ಮೇಲೆ ಸರ್ಕಾರ ಪಠ್ಯಪುಸ್ತಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರಿಂದ ಸರ್ಕಾರಕ್ಕೆ ಆದಾಯ ಕೂಡ ಕಡಿಮೆಯಾಗಲಿದೆ.

    91 ಟೈಟಲ್​ ಪುಸ್ತಕ ಅವಶ್ಯಕ
    ಪದವಿ ಪೂರ್ವ ಶಿಕ್ಷಣ ಇಲಾಖೆ 191 ಶೀಷಿರ್ಕೆಯ ಪುಸ್ತಕ ಹೊಂದಿದೆ. ಈ ಪೈಕಿ 2021&22ನೇ ಸಾಲಿಗೆ 91 ಶೀಷಿರ್ಕೆಗಳ ಮುದ್ರಣದ ಅವಶ್ಯಕತೆ ಇದೆ. ಪ್ರತಿ ವರ್ಷ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.40 ಪಠ್ಯಪುಸ್ತಕವನ್ನು ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪದ್ಧತಿಯನ್ನು ಇಲಾಖೆ ರೂಢಿಸಿಕೊಂಡು ಬಂದಿದೆ. ಈ ವರ್ಷ ಎಸ್ಸೆಸ್ಸೆಲ್ಸಿ ಪರೀೆ ಬರೆದ ಎಲ್ಲ ವಿದ್ಯಾರ್ಥಿಗಳು ಅಂದರೆ, 8.71 ಲಕ್ಷ ವಿದ್ಯಾರ್ಥಿಗಳು ಪಾಸ್​ ಆಗಿದ್ದು, ಪ್ರವೇಶದ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಬಾರಿ ಶೇ.50 ಪಠ್ಯಪುಸ್ತಕವನ್ನು ಮುದ್ರಿಸಲು ಇಲಾಖೆ ನಿರ್ಧರಿಸಿದೆ.

    ತರಗತಿಗಳಲ್ಲಿ ವಿದ್ಯಾರ್ಥಿಗಳ ಬಳಿ ಪಠ್ಯಪುಸ್ತಕ ಇಲ್ಲದ ಮೇಲೆ ನಾವು ಬೋಧಿಸಿ ಏನು ಪ್ರಯೋಜನ?. ಪಠ್ಯಪುಸ್ತಕ ಎಲ್ಲರಿಗೂ ತಕ್ಷಣವೇ ಸಿಗುವಂತಾಗಬೇಕು ಎನ್ನುತ್ತಾರೆ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್​. ನಿಂಗೇಗೌಡ,

    ಪಠ್ಯಪುಸ್ತಕ ಸಂದ ಅಂಕಿ&ಅಂಶಗಳ ಪ್ರಕಾರ ಈಗಾಗಲೇ, ಮಾರುಕಟ್ಟೆಯಲ್ಲಿ 1 ಲಕ್ಷ ಪಠ್ಯಪುಸ್ತಕ ಲಭ್ಯವಿದೆ. ಅವಶ್ಯಕ ಪುಸ್ತಕವನ್ನು ಮುದ್ರಿಸಿ ನೀಡುವುದಕ್ಕೆ ಸಂವು ಮುಂದಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್​. ಸ್ನೇಹಲ್​ ಮಾಹಿತಿ ನೀಡಿದರು.

    ಪ್ರತಿ ನಿತ್ಯ ವಿದ್ಯಾರ್ಥಿಗಳು ಪುಸ್ತಕದ ಮಳಿಗೆಗೆ ಬಂದು ಪಠ್ಯಪುಸ್ತಕ ಕೇಳುತ್ತಿದ್ದಾರೆ. 41 ಟೈಟಲ್​ಗಳ ಪಠ್ಯಪುಸ್ತಕ ಮುದ್ರಣ ಮಾಡಿ ನೀಡಬೇಕು ಎನ್ನುತ್ತಾರೆ ರಾಜ್ಯ ಪಠ್ಯಪುಸ್ತಕ ಮಾರಾಟ ಸಂಘದ ಮಾಜಿ ಅಧ್ಯಕ್ಷ ಸತ್ಯನಾರಾಯಣ ಮೂರ್ತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts