More

    ಸಿಧುಮೂಸೆವಾಲ ಹತ್ಯೆಯ ಆರೋಪಿ ಪರ ವಕಾಲತ್ತು ವಹಿಸಲು ಸಿಗುತ್ತಿಲ್ಲ ವಕೀಲರು: ಆರೋಪಿ ತಂದೆಯಿಂದ ಕೋರ್ಟ್​ ಮೊರೆ!

    ನವದೆಹಲಿ: ಪಂಜಾಬ್​ನ ಖ್ಯಾತ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಪರ ವಾದ ಮಂಡಿಸಲು ವಕೀಲರೇ ಸಿಗುತ್ತಿಲ್ಲ. ಹೀಗೆಂದು ಅವರ ತಂದೆಯೇ ಹೇಳಿಕೊಂಡಿದ್ದಾರೆ.

    ಆದ್ದರಿಂದ ಬಿಷ್ಣೋಯ್ ತಂದೆ ಪಂಜಾಬ್ ಪೊಲೀಸರ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯನ್ನು ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

    ಗಾಯಕನ ಹತ್ಯೆ ಪ್ರಕರಣದಲ್ಲಿ ಯಾವುದೇ ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು ಸ್ಥಳೀಯ ವಕೀಲರ ಸಂಘ ನಿರ್ಧಾರಿಸಲಾಗಿರುವುದರಿಂದ ಅವರ ತಂದೆ ಈ ಕ್ರಮ ಕೈಗೊಂಡಿದ್ದಾರೆ. ನ್ಯಾಯಾಲಯದಲ್ಲಿ ಜುಲೈ 11ರಂದು ಪ್ರಕರಣದ ವಿಚಾರಣೆ ನಡೆಸಲಿದೆ.
    ಪಂಜಾಬ್‌ನ ಮಾನ್ಸಾ ನ್ಯಾಯಾಲಯದಲ್ಲಿ ದರೋಡೆಕೋರರ ಪರ ವಕೀಲರನ್ನು ಹುಡುಕಲಾಗುತ್ತಿಲ್ಲ ಎಂದು ಲಾರೆಲ್ಸ್ ತಂದೆ ಲವಿಂದರ್ ಬಿಷ್ಣೋಯ್ ಪರ ವಕೀಲ ಸಂಗ್ರಾಮ್ ಸಿಂಗ್ ಮನವಿಯಲ್ಲಿ ತಿಳಿಸಿದ್ದಾರೆ.

    ಲಾರೆನ್ಸ್ ಬಿಷ್ಣೋಯಿಯನ್ನು ಪಂಜಾಬ್‌ಗೆ ವರ್ಗಾಯಿಸಲು ಕಾರಣವಾದ ದೆಹಲಿ ನ್ಯಾಯಾಲಯ ಹೊರಡಿಸಿದ ಟ್ರಾನ್ಸಿಟ್ ರಿಮಾಂಡ್ ಅನ್ನು ಬಿಷ್ಣೋಯ್ ಅವರ ತಂದೆ ಪ್ರಶ್ನಿಸಿದ್ದಾರೆ. ಬಿಷ್ಣೋಯಿಯನ್ನು ರಾಷ್ಟ್ರ ರಾಜಧಾನಿಯಲ್ಲೂ ವಿಚಾರಣೆ ನಡೆಸಬಹುದು ಎಂದು ಅವರ ತಂದೆ ಹೇಳಿದ್ದಾರೆ.

    ಈ ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ಪೀಠವು, ಪಂಜಾಬ್‌ನಲ್ಲಿ ಕೊಲೆ ನಡೆದಾಗ, ಪಂಜಾಬ್ ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದ್ದಾರೆ. ಕಾನೂನು ಸಹಾಯಕ್ಕಾಗಿ ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಮತ್ತು ಅರ್ಜಿಯನ್ನು ಜುಲೈ 11ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ. (ಏಜೆನ್ಸೀಸ್​)

    ವಿಕ್ರಾಂತ್​ ರೋಣ ಚಿತ್ರದ ಟ್ರೇಲರ್​ ಶೇರ್​ ಮಾಡಿದ ಬಿಗ್​​ ಬಿ! ಧನ್ಯವಾದ ತಿಳಿಸಿದ ಕಿಚ್ಚ ಸುದೀಪ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts