More

    ಏನೇ ಆಗಲಿ ನಾನೆಂದಿಗೂ ಆರ್​ಸಿಬಿ ಬಿಡುವುದಿಲ್ಲವೆಂದು ಭಾವುಕರಾದ ಕೊಹ್ಲಿ: ಎಬಿಡಿಯಿಂದಲೂ ಅಭಿಮಾನಿಗಳಿಗೆ ಸಂದೇಶ

    ನವದೆಹಲಿ: ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್​ ಶುಕ್ರವಾರ ಇನ್​ಸ್ಟಾಗ್ರಾಂನಲ್ಲಿ ಲೈವ್​ ಚಾಟ್​ ನಡೆಸಿ, ತಮ್ಮ ತಂಡದ ಪರ ಮಾತನಾಡಿದರು. ಅಲ್ಲದೆ, ಕರೊನಾ ವಿರುದ್ಧ ಹೋರಾಡಲು ನಿಧಿ ಸಂಗ್ರಹಕ್ಕೆ ಮುಂದಾದರು.

    ವಿಡಿಯೋ ಆರಂಭದಲ್ಲೇ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ ಉಭಯ ಆಟಗಾರರು ಇಂತಹ ಕಷ್ಟದ ಸಮಯದಲ್ಲಿ ಧೈರ್ಯವಾಗಿರಿ, ವೈರಸ್​ನಿಂದ ಸಂಕಷ್ಟಕ್ಕೀಡಾಗಿರುವ ಜನರು ಅದರಿಂದ ಹೊರಬರಲು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿದರು.

    ಅಂದಹಾಗೆ 2016ರ ಐಪಿಎಲ್​ ಆವೃತ್ತಿಯಲ್ಲಿ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 248 ರನ್​ಗಳ ಬೃಹತ್​ ಮೊತ್ತವನ್ನು ಕಲೆಹಾಕಿತ್ತು. ಈ ಪಂದ್ಯದಲ್ಲಿ ಕೊಹ್ಲಿ-ಡಿವಿಲಿಯರ್ಸ್​ 229 ರನ್​ಗಳ ಅತ್ಯಧಿಕ ಜತೆಯಾಟ ಆಡಿದ್ದರು. ಇಬ್ಬರು ಸಹ ಸೆಂಚುರಿ ಬಾರಿಸಿದ್ದರು. ಇದು ಉಭಯ ಆಟಗಾರರಿಗೂ ಮತ್ತು ಅಭಿಮಾನಿಗಳಿಗೂ ಸ್ಮರಣೀಯ ಆಟವಾಗಿದೆ. ಹೃದಯಸ್ಪರ್ಶಿ ಘಟನೆಯನ್ನು ನೆನಪಿಸಿ, ಕೊಹ್ಲಿ ಮತ್ತು ಡಿವಿಲಿಯರ್ಸ್ ತಮ್ಮ ಬ್ಯಾಟ್ಸ್​, ಜರ್ಸಿ ಮತ್ತು ಗ್ಲೋವ್ಸ್​ಗಳನ್ನು ಹರಾಜಿಗಿಡಲು ನಿರ್ಧರಿಸಿದ್ದಾರೆ. ಇದರಿಂದ ಬಂದ ಹಣವನ್ನು ಕರೊನಾ ವಿರುದ್ಧ ಹೋರಾಡಲು ಭಾರತ ಮತ್ತು ದಕ್ಷಿಣ ಆಫ್ರಿಕಾಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ​

    ಇದೇ ವೇಳೆ ಆರ್​ಸಿಬಿ ತಂಡದ ಬಗ್ಗೆ ಭಾವುಕರಾದ ಕೊಹ್ಲಿ, ಹಲವು ಏರಿಳಿತಗಳಲ್ಲೂ ನಮಗೆ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಆರ್​ಸಿಬಿ ಪರ ಆಡಿದ್ದರ ಅನುಭವ ಹಂಚಿಕೊಂಡ ಕೊಹ್ಲಿ, ಅದೊಂದು ಅತಿವಾಸ್ತವಿಕವಾಗಿದ್ದು, ಐಪಿಎಲ್​ನಲ್ಲಿ ಮತ್ತೊಂದು ತಂಡದಲ್ಲಿ ಆಡುವುದಿಲ್ಲ ಎಂದು ವಾಗ್ದಾನ ಮಾಡಿ, ಏನೇ ಆಗಲಿ ನಾನೆಂದಿಗೂ ಆರ್​ಸಿಬಿಯನ್ನು ಬಿಡುವುದೇ ಇಲ್ಲ ಎಂದು ಡಿವಿಲಿಯರ್ಸ್​ಗೆ ಹೇಳಿದರು. ಅಂದಹಾಗೆ ಕೊಹ್ಲಿ 2011ರಿಂದಲೂ ಆರ್​ಸಿಬಿಯಲ್ಲೇ ಇದ್ದಾರೆ.

    ಇದೇ ವೇಳೆ ಕೊಹ್ಲಿ ಮತ್ತು ತಮ್ಮ ನಡುವಿನ ಸ್ನೇಹದ ಬಗ್ಗೆ ಹೇಳಿಕೊಂಡ ಡಿವಿಲಿಯರ್ಸ್ ನಮ್ಮಿಬ್ಬರ ಸ್ನೇಹ ಸಮಯರಹಿತ ಎಂದರೆ, ಕೊಹ್ಲಿ, ನಮ್ಮ ಗೆಳೆತನ ನಂಬಿಕೆಯ ಅಡಿಪಾಯದ ಮೇಲಿದೆ ಎಂದು ತಿಳಿಸಿದರು.​ (ಏಜೆನ್ಸೀಸ್​)

    ಲಾಕ್​ಡೌನ್​ನಲ್ಲಿ ಇನ್ನಷ್ಟು ವಿನಾಯಿತಿ ನೀಡಿದ ಕೇಂದ್ರ ಸರ್ಕಾರ; ಆದರೆ ಷರತ್ತುಗಳು ಅನ್ವಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts