More

    ಸೋಂಕಿತರಿಗೆ ಹಾಸ್ಪಿಟಲ್ ಸೌಲಭ್ಯ ಸಿಗ್ತಿಲ್ಲ; ವಾರ್ಡ್ ಕಮಿಟಿ ಸಭೆಯಲ್ಲಿ ಪುರಸಭೆ ಸದಸ್ಯ ರವೀಂದ್ರ ಆರೋಪ

    ದೇವನಹಳ್ಳಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪುರಸಭಾ ಸದಸ್ಯರು, ಬಿಎಲ್‌ಒಗಳ ಮತ್ತು ಸ್ವಯಂಸೇವಕರ ಕರೊನಾ ಟಾಸ್‌‌ಕೆೆರ್ಸ್ ಸಭೆಯನ್ನು ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಮತ್ತು ತಾಲೂಕು ಕಚೇರಿ ಚುನಾವಣಾ ಶಿರಸ್ತೇದಾರ್ ಮಂಜುನಾಥ್ ಉಪಸ್ಥಿತಿಯಲ್ಲಿ ಮಂಗಳವಾರ ನಡೆಸಲಾಯಿತು.

    ನಾವು ಮತ್ತು ಪುರಸಭಾ ಅಧಿಕಾರಿಗಳೇ ಮಾತನಾಡುವುದರಲ್ಲಿ ಅರ್ಥವಿಲ್ಲ. ಇಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆ ಮುಖ್ಯಸ್ಥರಾದ ತಹಸೀಲ್ದಾರ್ ಇರಬೇಕು ಎಂದು ಬಿಎಲ್‌ಒ ಎನ್ನಲಾಗುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪುರಸಭಾ ಸದಸ್ಯರು ಹೇಳಿದರು.

    ಸೋಂಕಿತರಿಗೆ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನ, ಹಾಸ್ಪಿಟಲ್ ಸೌಲಭ್ಯ ಸಿಗುತ್ತಿಲ್ಲ. ದ್ವಿತೀಯ ಸಂಪರ್ಕ ಹೊಂದಿದವರಿಗೆ ಕ್ವಾರಂಟೈನ್ ಮಾಡಿದರೂ ಅವರಿಗೆ ಊಟ, ನೀರು ಮತ್ತು ಮನೆಯಲ್ಲಿ ಹೋಂ ಕ್ವಾರಂಟೈನ್ ಆದವರಿಗೆ ದಿನಸಿ ವಿತರಿಸುತ್ತಿಲ್ಲ ಎಂದು ಸದಸ್ಯ ಜಿ.ಎ.ರವೀಂದ್ರ ಒತ್ತಾಯಿಸಿದರು. ಇದಕ್ಕೆ ಸದಸ್ಯರು ಧ್ವನಿಗೂಡಿಸಿದರು.

    ವಾರ್ಡ್ ಕಮಿಟಿ ಸಭೆ ಇನ್ನು ಮುಂದೆ ಪ್ರತಿವಾರ ನಡೆಯಲಿದ್ದು, ಮುಂದಿನ ಸಭೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆಸಲಾಗುವುದು. ಯಾವುದೇ ವಾರ್ಡ್‌ನಲ್ಲಿ ಕರೊನಾ ಸಂಬಂಧಿತ ಅಥವಾ ಆರೋಗ್ಯ ಸಂಬಂಧಿತ ಕರೆಗಳಿದ್ದರೆ ಆಯಾ ವಾರ್ಡ್ ಕಮಿಟಿ ಸಮಸ್ಯೆ ಬಗೆಹರಿಸಬೇಕಾಗುತ್ತದೆ. ಕರೊನಾ ನಿರಾಶ್ರಿತರ ವಸತಿ ಎಂಬ ಆ್ಯಪ್ ಅನ್ನು ಎಲ್ಲರೂ ಬಳಸಬೇಕು ಎಂದು ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಹೇಳಿದರು.

    ಬಹಳಷ್ಟು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಶಿಕ್ಷಕರಿಗೆ ಆ್ಯಪ್‌ಗಳನ್ನು ಬಳಸುವಂತಹ ಮೊಬೈಲ್ ಇರುವುದಿಲ್ಲ. ಸಮೀಕ್ಷೆಗೆ ಹೋಗುವ ಬಿಎಲ್‌ಒಗಳಿಗೆ ಸುರಕ್ಷತಾ ಪರಿಕರಗಳನ್ನು ನೀಡುತ್ತಿಲ್ಲ. ಇದರ ಬಗ್ಗೆ ಗಮನಹರಿಸಬೇಕು ಎಂದು ಬಿಎಲ್‌ಒ ಗೀತಾ ಹಾದಿಮನಿ ಅಧಿಕಾರಿಗಳ ಗಮನಕ್ಕೆ ತಂದರು.

    ದೇವನಹಳ್ಳಿ ಪಟ್ಟಣದ ಕೋವಿಡ್ ಉಸ್ತುವಾರಿ ಡಾ.ನೀತುರಾಣಿ ಮಾತನಾಡಿದರು. ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಸಮುದಾಯ ಅಭಿವೃದ್ಧಿ ಅಧಿಕಾರಿ ಬೈರಪ್ಪ, ಶಿರಸ್ತೇದಾರ್ ಮಂಜುನಾಥ್, ಪೊಲೀಸ್ ಇಲಾಖೆ ಗಿರೀಶ್, ಆರೋಗ್ಯ ಸಹಾಯಕಿಯರಾದ ಹೇಮಾ, ಶ್ರುತಿ, ಇಂಜಿನಿಯರ್ ಗಜೇಂದ್ರ, ಪರಿಸರ ಅಭಯಂತ ನೇತ್ರಾವತಿ, ಸದಸ್ಯರಾದ ಮುನಿಕೃಷ್ಣ, ರೇಖಾ, ವೇಣುಗೋಪಾಲ್, ಸೊಸೈಟಿ ಡಿ.ಆರ್.ಬಾಲರಾಜ್, ಜಿ.ಸುರೇಶ್, ಎಸ್.ನಾಗೇಶ್ ಮತ್ತು ಬೂತ್ ಲೆವೆಲ್ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts