More

    ಎಲ್ಲೂ ಅತಿಥಿ ಉಪನ್ಯಾಸಕ ಸೇವೆ ಕಾಯಂಗೊಳಿಸಿಲ್ಲ: ಡಾ.ಸುಧಾಕರ್

    ಬೆಂಗಳೂರು: ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಲು ಸಾಧ್ಯವಿಲ್ಲ. ಏನೋ ಸಮಾಧಾನ ಮಾಡಲು ಹೊರಟರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳಾಗುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಪಾದಯಾತ್ರೆ ನಡೆಸುತ್ತಿರುವುದು ಸರ್ಕಾರದ ಗಮನದಲ್ಲಿದೆ. ಈ ಉಪನ್ಯಾಸಕರ ಕಾಯಂಗೆ ಬಹಳಷ್ಟು ಕಾನೂನು ತೊಡಕುಗಳಿವೆ. ರೋಸ್ಟರ್, ಕಲ್ಯಾಣ ಕರ್ನಾಟಕ ಮೀಸಲಾತಿಗಳು ಅಡ್ಡ್ಡಿಯಾಗುತ್ತವೆ. ಬೇರೆ ಯಾವ ರಾಜ್ಯದಲ್ಲೂ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿಲ್ಲ. ಕಾಯಂಗೊಳಿಸಿದ ಉದಾಹರಣೆ ಇದ್ದರೆ ಕೊಡಿ, ಪರಿಶೀಲಿಸುತ್ತೇನೆ ಎಂದು ಕೇಳಿದ್ದೇನೆ. ಆದರೆ ಯಾರೂ ಕೊಟ್ಟಿಲ್ಲ. ವಿವಿಧ ಸಂಘಟನೆಗಳು ವಿವಿಧ ಬೇಡಿಕೆ ಇಟ್ಟಿವೆ. ಸರ್ಕಾರ ಸಾಧ್ಯವಾದಷ್ಟು ಬೇಡಿಕೆಗಳಿಗೆ ಸ್ಪಂದಿಸಿದೆ. 60 ವರ್ಷ ಪೂರೈಸಿದವರಿಗೆ 5 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ. ಅಂತಹ ಅತಿಥಿ ಉಪನ್ಯಾಸಕರು ಈಗಾಗಲೇ 25 ಮಂದಿ ಇದ್ದಾರೆ. ಉಪನ್ಯಾಸಕರ ನೇಮಕ ಸಂದರ್ಭದಲ್ಲಿ 5 ವರ್ಷ ಸೇವೆ ಸಲ್ಲಿಸಿದವರಿಗೆ ಕೃಪಾಂಕ ಕೊಡಲು ತೀರ್ಮಾನಿಸಲಾಗಿದೆ.

    9 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಪೈಕಿ ಸೋಮವಾರ 3 ,500ಕ್ಕೂ ಅಧಿಕ ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ. 6 ಸಾವಿರದಷ್ಟು ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಶೀಘ್ರವೇ ಇದಕ್ಕೊಂದು ಪರಿಹಾರ ಒದಗಿಸಲಿದೆ ಎಂದು ಸುಧಾಕರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts