More

    ಸ್ವ-ಇಚ್ಛೆಯಿಂದ ಕತ್ತಲಲ್ಲಿದ್ದಾರೆ ಗ್ರಾಮಸ್ಥರು: ಕಾರಣ ಈ ಪುಟ್ಟ ಹಕ್ಕಿ..!

    ಶಿವಗಂಗಾ (ತಮಿಳುನಾಡು): ಒಂದಿಷ್ಟೊತ್ತು ಮನೆಯಲ್ಲಿ ವಿದ್ಯುತ್‌ ಇಲ್ಲದಿದ್ದರೆ ತಲೆ ಕೆಡುತ್ತದೆ. ಅಂಥದ್ದರಲ್ಲಿ ಒಂದಲ್ಲ, ಎರಡಲ್ಲ… 35 ದಿನಗಳಿಗಿಂತಲೂ ಹೆಚ್ಚಿನ ದಿನ ಕರೆಂಟೇ ಇಲ್ಲ ಎಂದರೆ ಸ್ಥಿತಿ ಹೇಗಿರುತ್ತದೆ?

    ವಿದ್ಯುತ್‌ ಕೊರತೆ ಉಂಟಾದಾಗ ಗ್ರಾಮಗಳಲ್ಲಿ ಕರೆಂಟ್‌ ತೆಗೆಯುವುದು ಹೊಸದೇನಲ್ಲ. ಆದರೆ ಈ ಗ್ರಾಮದಲ್ಲಿ ವಿದ್ಯುತ್‌ ನಿಗಮವು ಕರೆಂಟ್‌ ತೆಗೆದಿಲ್ಲ, ಬದಲಿಗೆ ಗ್ರಾಮಸ್ಥರೇ ಕತ್ತಲಿನಲ್ಲಿ ದಿನದೂಡುತ್ತಿದ್ದಾರೆ. ಈಗಾಗಲೇ 35 ದಿನಗಳು ಕತ್ತಲಿನಲ್ಲಿಯೇ ಜೀವನ ಮಾಡುತ್ತಿದ್ದು, ಇನ್ನೂ ಕೆಲವು ದಿನ ಇರಲು ಖುಷಿಯಿಂದ ಒಪ್ಪಿಕೊಂಡಿದ್ದಾರೆ.

    ಇಂಥದ್ದೊಂದು ಅಚ್ಚರಿ ನಡೆದಿರುವುದು ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಗ್ರಾಮದಲ್ಲಿ. ಅಷ್ಟಕ್ಕೂ ಗ್ರಾಮಸ್ಥರು ಇಂಥದ್ದೊಂದು ನಿರ್ಧಾರಕ್ಕೆ ಬರಲು ಕಾರಣ, ಪುಟ್ಟದೊಂದು ಹಕ್ಕಿ!

    ಹೌದು! ಇಂಡಿಯನ್ ರಾಬಿನ್ ಪ್ರಬೇಧದ ಹಕ್ಕಿ ಇಲ್ಲಿ ಗೂಡು ಕಟ್ಟಿದೆ. ಆದರೆ ಅದು ಗ್ರಾಮದ ಸ್ವಿಚ್ ಬೋರ್ಡ್ ಮೇಲೆ ಗೂಡು ಕಟ್ಟಿ, ಎರಡು ಮೊಟ್ಟೆಯನ್ನು ಇಟ್ಟಿದೆ‌. ಇಡೀ ಗ್ರಾಮಕ್ಕೆ ವಿದ್ಯುತ್‌ ಪೂರೈಕೆ ಆಗುವುದು ಇಲ್ಲಿಂದಲೇ. ಒಂದು ವೇಳೆ ಸ್ವಿಚ್‌ ಆನ್‌ ಮಾಡಲು ಹೋದರೆ ಭಯದಿಂದ ಹಕ್ಕಿ ಹಾರಿಹೋಗುವ ಇಲ್ಲವೇ ಅದರ ಮೊಟ್ಟೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಅದೇ ಕಾರಣಕ್ಕೆ ತಾಯಿ ಹಕ್ಕಿ ಮೊಟ್ಟೆಗಳಿಗೆ ಕಾವು ನೀಡುವರೆಗೆ ಅವುಗಳಿಗೆ ಏಕಾಂತ ಒದಗಿಸಲು ಗ್ರಾಮಸ್ಥರು ನಿರ್ಧರಿಸಿ ಇಂಥದ್ದೊಂದು ಕ್ರಮ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಪಾಂಪಿಯೋ ಇರುವೆ ಇದ್ದಂತೆ… ಆಳವಾಗಿ ಬೇರೂರಿರುವ ಮರವನ್ನು ಅಲ್ಲಾಡಿಸಲು ಯತ್ನಿಸುತ್ತಿದ್ದಾರೆ…

    ಗ್ರಾಮದ 20 ವರ್ಷದ ಕರುಪ್ಪುರಾಜ ಎನ್ನುವ ಯುವಕ ಈ ಹಕ್ಕಿಯನ್ನು ನೋಡಿದ್ದ. ನಂತರ ಗ್ರಾಮದಲ್ಲಿ ಇರುವ ಇತರರಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸುವ ಮೂಲಕ ಹಕ್ಕಿಗೆ ಹಾನಿ ಮಾಡದಂತೆ ಹೇಳಿದ್ದಾನೆ. ಆತನ ಮಾತನ್ನು ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ.

    ಹಕ್ಕಿಗಳ ಗೂಡನ್ನು ಕಂಡರೆ ಕಿತ್ತೆಸೆಯುವ, ಅವುಗಳಿಗೆ ಬೇಕಂತಲೇ ಹಾನಿಯುಂಟುಮಾಡುವ ಮನಸ್ಥಿತಿ ಇರುವವರ ನಡುವೆ ಈ ಗ್ರಾಮದ ಜನರು ಮಾದರಿಯಾಗಿದ್ದಾರೆ. ಇಡೀ ಗ್ರಾಮಕ್ಕೆ ಗ್ರಾಮವೇ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವ ಕಾರಣ, ಇಷ್ಟು ಒಳ್ಳೆಯವರೂ ಇಂದಿನ ದಿನಗಳಲ್ಲಿ ಇರುತ್ತಾರೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.

    ಯುವತಿಯ ತಬ್ಬಿದ ಡೆಲಿವರಿ ಬಾಯ್‌: ಶೌಚಗೃಹಕ್ಕೆ ಹೋಗಿ ವಿಚಿತ್ರ ವರ್ತನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts