More

    ಜಿಲ್ಲೆಯಲ್ಲಿ 1,59,970 ಹೆಕ್ಟೇರ್ ಬೆಳೆ ಹಾನಿ; ರೈತರಿಗೆ ಇನ್ನೂ ಬಂದಿಲ್ಲ ಬೆಳೆ ಹಾನಿ ಪರಿಹಾರ

    ಮಂಜುನಾಥ ಎಸ್. ಅಂಗಡಿ ಧಾರವಾಡ
    ರಾಜ್ಯದ 216 ತಾಲೂಕುಗಳಲ್ಲಿ ಮುಂಗಾರು ಕೈ ಕೊಟ್ಟಿದೆ. ಅದೇರೀತಿ ಜಿಲ್ಲೆಯ ಎಂಟೂ ತಾಲೂಕುಗಳನ್ನು ಬರಪೀಡಿತ ಎಂದು ೋಷಿಸಲಾಗಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಬರ ಅಧ್ಯಯನಕ್ಕೆ ಬಂದು 2 ತಿಂಗಳಾಗುತ್ತ ಬಂದರೂ ಸಂತ್ರಸ್ತ ರೈತರಿಗೆ ಈವರೆಗೂ ಬೆಳೆ ಹಾನಿ ಪರಿಹಾರ ಕೈ ಸೇರಿಲ್ಲ.
    ಆರಂಭದಲ್ಲಿ ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂಗೋಳ, ನವಲಗುಂದ ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆಯಾಗಿದ್ದವು. ಪರಿಷ್ಕೃತ ಪಟ್ಟಿಯಲ್ಲಿ ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕುಗಳನ್ನು ಎನ್‌ಡಿಆರ್‌ಎ್- ಎಸ್‌ಡಿಆರ್‌ಎ್ ಮಾನದಂಡಗಳ ಅನ್ವಯ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ 1,59,970 ಹೆಕ್ಟೇರ್ ಹಾನಿಯಾಗಿರುವ ವರದಿಯಾಗಿದೆ.
    2019ರಿಂದ 2022ರವರೆಗೆ ಜಿಲ್ಲೆಯಲ್ಲಿ ಅತಿವೃಷ್ಟಿ ಕಾಡಿತ್ತು. 2023ರ ಮುಂಗಾರಿನಲ್ಲಿ ಅನಾವೃಷ್ಟಿ ಕಾಡಿದೆ. ಜಿಲ್ಲೆಯಲ್ಲಿ ಮಳೆ ಅಭಾವದ ಕಾರಣ 2,18,000 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿತ್ತು. ರಾಜ್ಯಕ್ಕೆ ಮುಂಗಾರು ತಡವಾಗಿ ಪ್ರವೇಶಿಸಿದ್ದಲ್ಲದೆ, ಮಳೆ ಸಮರ್ಪಕವಾಗಿ ಸುರಿಯದಿದ್ದರೂ ರೈತರು ಮುಂಗಾರು ಬಿತ್ತನೆ ಮಾಡಿದ್ದರು.
    ಧಾರವಾಡ ತಾಲೂಕಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ 44,531 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 31,439 ಹೆಕ್ಟೇರ್, ಹುಬ್ಬಳ್ಳಿ ನಗರ ತಾಲೂಕು 6,314 ಹೆಕ್ಟೇರ್, ಕುಂದಗೋಳ 37,900 ಹೆಕ್ಟೇರ್, ನವಲಗುಂದ 39,786 ಹೆಕ್ಟೇರ್ ಸೇರಿ ಒಟ್ಟು  1,59,970 ಹೆಕ್ಟೇರ್ ಬೆಳೆ ಹಾನಿಯಾಗಿದೆ.
    * ಬರ ಅಧ್ಯಯನ ನಡೆದು 2 ತಿಂಗಳು:
    ಜಿಲ್ಲಾಡಳಿತವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಬೆಳೆ ಹಾನಿ ವರದಿ ಅನ್ವಯ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಅ. 7ರಂದು ಜಿಲ್ಲೆಗೆ ಆಗಮಿಸಿ ವಿವಿಧ ಬೆಳೆಗಳನ್ನು ವೀಕ್ಷಿಸಿದ್ದರು. ಮುಂಗಾರು ಶೇಂಗಾ, ಈರುಳ್ಳಿ, ಹತ್ತಿ, ಸೋಯಾಬಿನ್, ಕಬ್ಬು, ಗೋವಿನಜೋಳ, ಹೆಸರು, ಮೆಣಸಿನಕಾಯಿ ಸೇರಿ ವಿವಿಧ ಬೆಳೆಗಳ ಹಾನಿಯನ್ನು ಕೇಂದ್ರ ತಂಡ ಖುದ್ದು ವೀಕ್ಷಿಸಿತ್ತು. ಅದಾಗಿ 2 ತಿಂಗಳಾಗುತ್ತ ಬಂದರೂ ಹಾನಿ ಪರಿಹಾರ ಜಮೆಯಾಗಿಲ್ಲ.
    * ಕಂದಾಯ ಇಲಾಖೆಯಿಂದ ದಾಖಲೆ ಸಂಗ್ರಹ:
    ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ರೈತರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಎ್ಐಡಿಯನ್ನು ಕಡ್ಡಾಯಗೊಳಿಸಲಾಗಿದ್ದು, ರೈತರಿಂದ ಪಹಣಿಪತ್ರ, ಆಧಾರ್‌ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಪ್ರತಿಯನ್ನು ಪಡೆದಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳು ಪರಿಹಾರ ಎಂಟ್ರಿಗಾಗಿ ಜಿಲ್ಲಾಧಿಕಾರಿಯ ಆಜ್ಞೆಗಾಗಿ ಕಾಯುತ್ತಿದ್ದಾರೆ.

    ಜಿಲ್ಲೆಯ 8 ತಾಲೂಕುಗಳು ಬರಪೀಡಿತವಾಗಿದ್ದು, ಕೇಂದ್ರ ತಂಡ ಈಗಾಗಲೇ ಬರ ಅಧ್ಯಯನ ಮಾಡಿದೆ. ಜಿಲ್ಲೆಗೆ ಅಗತ್ಯವಿರುವ ಬೆಳೆ ಹಾನಿ ಪರಿಹಾರದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಮಟ್ಟದಲ್ಲಿ ಬೆಳೆ ಹಾನಿ ಪರಿಹಾರ ಬಿಡುಗಡೆಯಾದ ನಂತರ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.
    – ಡಾ. ಕಿರಣಕುಮಾರ ಎಂ, ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts