More

    ಜಾತಿ ಆಧಾರದ ಮೇಲೆ ಮತ ಕೇಳಲ್ಲ: ಕೆ.ಎನ್.ರಾಜಣ್ಣ

    ಮಧುಗಿರಿ: ಶಿರಾ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಅಹಿಂದ ವರ್ಗದ ಮತಗಳು ಕಾಂಗ್ರೆಸ್‌ಗೆ ಗೆಲುವು ತಂದುಕೊಡಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

    ಪಟ್ಟಣದಲ್ಲಿ ಭಾನುವಾರ ವಾಸವಿ ವಿವಿಧ್ದೋದ್ದೇಶ ಸಹಕಾರಿ ಬ್ಯಾಂಕ್ ಕಟ್ಟಡ ಹಾಗೂ ಲಾಕರ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿರಾ ಉಪಚುನಾವಣೆಯಲ್ಲಿ ಜಾತಿ ಆಧಾರದ ಮೇಲೆ ಮತ ಕೇಳುವುದಿಲ್ಲ. ಬದಲಾಗಿ ಜಯಚಂದ್ರ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸಲಾಗುವುದು. ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ನಮ್ಮ ಜಿಲ್ಲೆಯವರೇ ಆಗಿದ್ದು, ಉತ್ತಮ ಹಿನ್ನಲೆವುಳ್ಳವರಾಗಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿಯೂ ಸಾಕಷ್ಟು ಅನುಭವವಿರುವ ಇವರ ಗೆಲುವಿಗೆ ಕಾಂಗ್ರೆಸ್‌ನ ಎಲ್ಲ ಮುಖಂಡರು ಬೆಂಬಲಕ್ಕೆ ನಿಂತಿದ್ದಾರೆ ಎಂದರು.

    ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ತಿಮ್ಮರಾಜು, ಲಾಲಾಪೇಟ್ ಮಂಜುನಾಥ್, ಎಂ.ವಿ.ಮಂಜುನಾಥ್ ಆಚಾರ್, ರಾಧಿಕಾ ಆನಂದ್, ಮಾಜಿ ಸದಸ್ಯ ಎಂ.ಎಸ್.ಶಂಕರನಾರಾಯಣ್, ಬ್ಯಾಂಕ್‌ನ ಅಧ್ಯಕ್ಷ ಎ.ರಮೇಶ್, ಪದಾಧಿಕಾರಿಗಳಾದ ಕೆ.ಎಂ.ವಿಕ್ರಂ, ಎಂ.ಕೆ.ನಾಗರಾಜು, ಟಿ.ಎನ್. ಪಾರ್ಥಸಾರಥಿ, ಕೆ.ಎನ್.ಸುರೇಂದ್ರನಾಥ್, ಕೆ.ಸಿ.ಅಶ್ವತ್ಥನಾರಾಯಣ ಶೆಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts