More

    22,825 ಮೆ.ಟನ್ ಸ್ಟೀಲ್ ಕಾರ್ಗೋ ನಿರ್ವಹಣೆ: ನವ ಮಂಗಳೂರು ಬಂದರು ಹೊಸ ಸಾಧನೆ

    ಮಂಗಳೂರು: ನವ ಮಂಗಳೂರು ಬಂದರಿನಲ್ಲಿ ಮೊದಲ ಬಾರಿಗೆ 22,825 ಮೆಟ್ರಿಕ್ ಟನ್ ಸ್ಟೀಲ್ ಕಾರ್ಗೋ ನಿರ್ವಹಣೆ ಮಾಡಲಾಗಿದೆ. ದೇಶದ ಮುಂಚೂಣಿ ಉದ್ದಿಮೆ ಜೆಎಸ್‌ಡಬ್ಲುೃ ಲಿ. ಇಷ್ಟು ಪ್ರಮಾಣದ ಸರಕನ್ನು ರಫ್ತು ಮಾಡಿದೆ.

    ಎಚ್‌ಆರ್/ಸಿಆರ್ ಕಾಯಿಲ್, ಸ್ಲಾೃಬ್, ಬಿಲೆಟ್ಸ್, ಟಿಎಂಟಿ ಮೊದಲಾದವುಗಳನ್ನು ಈಜಿಪ್ಟ್‌ನ ಡ್ಯಾಮಿಯೆಟ್ಟ, ಇಟಲಿಯ ಮರ್ಗೇರಾ ಮತ್ತು ಸ್ಪೈನ್‌ನ ಸಗುಂಟೋ ಬಂದರಿಗೆ ಸಾಗಿಸಲು ಕಳೆದ ಭಾನುವಾರ ಕಾರ್ಗೋ ಹಡಗು ಎಂ.ವಿ.ಮಿನಿಯಾನ್ ಗ್ರೇಸ್ ಬಂದರಿನ 3ನೇ ಬರ್ತ್‌ಗೆ ಆಗಮಿಸಿದೆ. ಶುಕ್ರವಾರ ಎಲ್ಲ ಸರಕುಗಳ ಲೋಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಬಂದರಿನಲ್ಲಿ ಹಡಗಿಗೆ ಎಲ್ಲ ಸೌಕರ್ಯ ಒದಗಿಸಿ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಎನ್‌ಎಂಪಿಟಿ ಪ್ರಕಟಣೆ ತಿಳಿಸಿದೆ.

    ಮಂಗಳೂರು ಬಂದರು ಮೊದಲ ಬಾರಿ ಇಷ್ಟು ಪ್ರಮಾಣದ ಸ್ಟೀಲ್ ಕಾರ್ಗೋ ನಿರ್ವಹಿಸಿದೆ. ಆನ್‌ಲೈನ್ ಗೇಟ್ ಅಡ್ಮಿಷನ್, ಉನ್ನತ ಸ್ಟೋರೇಜ್ ಸೌಲಭ್ಯ, ಉತ್ತಮ ಸೇವೆ ಮೊದಲಾದವುಗಳಿಂದ ಇದು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲೂ ಇತರ ರಫ್ತುದಾರರಿಗೂ ಇದೇ ಮಾದರಿಯ ಸೇವೆ ನೀಡುವಲ್ಲಿ ಮುತುವರ್ಜಿ ವಹಿಸಲಿದೆ ಎಂದು ಎನ್‌ಎಂಪಿಟಿ ಅಧ್ಯಕ್ಷ ಎ.ವಿ.ರಮಣ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts