More

    ಈಶಾನ್ಯ ರಾಜ್ಯಗಳ ಅಭಿವೃದ್ಧಿ ಆದ್ಯತೆ: ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ ಅಭಿಮತ

    ಉಳ್ಳಾಲ: ಈಶಾನ್ಯ ರಾಜ್ಯಗಳ ಶ್ರೇಯಸ್ಸಿಗೆ ಆದ್ಯತೆ ನೀಡುವುದು ಅಗತ್ಯ ಎಂದು ನಾಗಾಲ್ಯಾಂಡ್ ಮಾಜಿ ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದರು.
    ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಘಟಕ ಹಾಗೂ ನಮಸ್ತೆ ಕೇಂದ್ರದ ಆಶ್ರಯದಲ್ಲಿ ಗುರುವಾರ ಆವಿಷ್ಕಾರ್ ಸಭಾಂಗಣದಲ್ಲಿ ನಡೆದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ಈಶಾನ್ಯ ರಾಜ್ಯಗಳನ್ನು ಮುಖ್ಯವಾಹಿನಿಗೆ ಸೇರಿಸಿಕೊಳ್ಳದಿದ್ದರೆ ಮುಂದೆಯೂ ಅಭಿವೃದ್ಧಿಯಿಂದ ವಂಚಿತವಾಗಲಿದೆ. ಅಲ್ಲಿನ ನಾಗರಿಕರನ್ನು ಸಮಾನವಾಗಿ ಪರಿಗಣಿಸದೇ ದೂರ ಇಡಲಾಗಿತ್ತು. ನಿರಂತರ ಪ್ರಯತ್ನ ಹಾಗೂ ಕಾಳಜಿಯ ಫಲವಾಗಿ ಈಗ ಅಭಿವೃದ್ಧಿ ಪಥದಲ್ಲಿದೆ. ನಾನು ರಾಜ್ಯಪಾಲನಾಗಿದ್ದಾಗ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯವನ್ನು ಜತೆ ಸೇರಿಸಿಕೊಂಡು ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಮೀಜೋರಾಂ, ಮಣಿಪುರ, ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ತ್ರಿಪುರ ರಾಜ್ಯಗಳ ಶ್ರೇಯಸ್ಸಿಗಾಗಿ ‘ನಮಸ್ತೆ’ ಕೇಂದ್ರ ಸ್ಥಾಪಿಸಿದ ಫಲವಾಗಿ ಸಾಕಷ್ಟು ಶೈಕ್ಷಣಿಕ ಅಭಿವೃದ್ಧಿ ಕಾಣುವಂತಾಗಿದೆ ಎಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸತೀಶ ಕುಮಾರ್ ಭಂಡಾರಿ ಮಾತನಾಡಿ, ಪ್ರಪಂಚದ ಅತ್ಯುತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ರಾಷ್ಟ್ರ ಎನ್ನುವ ಕೀರ್ತಿ ಭಾರತದ್ದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಆಂತರಿಕ ಹಾಗೂ ಬಾಹ್ಯ ಕಂಟಕಗಳು ಎದುರಾಗಿದ್ದು, ಭಾರತದ ಯುವಕರು ಒಗ್ಗಟ್ಟಾಗುವುದು ಇದಕ್ಕೆ ಪರಿಹಾರ. ಪ್ರಜಾಪ್ರಭುತ್ವದ ಆಶಯಗಳನ್ನು ಅರ್ಥೈಸಿಕೊಂಡು ದೇಶವನ್ನು ಕಟ್ಟಿ, ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭ ಪಿ.ಬಿ.ಆಚಾರ್ಯ ಅವರು ಈಶಾನ್ಯ ರಾಜ್ಯಗಳನ್ನು ಪರಿಚಯಿಸುವ 5 ಕೃತಿಗಳನ್ನು ವಿಶ್ವವಿದ್ಯಾಲಯಕ್ಕೆ ಕೊಡುಗೆ ನೀಡಿದರು. ಕುಲಸಚಿವೆ ಪ್ರೊ.ಅಲ್ಕಾ ಕುಲಕರ್ಣಿ ಸ್ವಾಗತಿಸಿದರು. ಪ್ರೊ.ಅನಿರ್ಬಾನ್ ಚಕ್ರವರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕುಮಾರ ಶೆಟ್ಟಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts