More

    ಮೇ 11,12ರಂದು ಚಾಕೋಲೇಟ್ ಸ್ಟ್ರೀಟ್-2024 ಕಾರ್ಯಕ್ರಮ

    ಮಂಗಳೂರು: ನಿಟ್ಟೆ ಇನ್‌ಸ್ಟಿಟ್ಯೂಟ್ ಆ್ ಕಮ್ಯುನಿಕೇಷನ್ ವತಿಯಿಂದ ಮೇ 11 ಮತ್ತು 12ರಂದು ಇಲ್ಲಿನ ಪಾಂಡೇಶ್ವರದ ಫಿಜಾ ಬೈ ನೆಕ್ಸಸ್‌ನ ಮೂರನೇ ಮಹಡಿಯಲ್ಲಿ ಐದನೇ ಆವೃತ್ತಿಯ ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಕಾರ್ಯಕ್ರಮ ಆಯೋಜಕ ಡಾ.ಅನೀಶ ಕುಮಾರನ್ ಅವರು, ಮೇ 11ರಂದು ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಚಾಕೋಲೇಟ್ ಸ್ಟ್ರೀಟ್ 2024 ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಗೃಹ ಬೇಕರ್‌ಗಳು ಹಾಗೂ 5 ನವೀನ ನವೋದ್ಯಮಿಗಳು ಭಾಗವಹಿಸುತ್ತಿದ್ದಾರೆ. ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ಸ್ಥಳೀಯರಿಗೆ ವೇದಿಕೆಗಳನ್ನು ಚಾಕೋಲೇಟ್ ಸ್ಟ್ರೀಟ್ ಕಲ್ಪಿಸಲಿದೆ ಎಂದರು.

    ವಿದ್ಯಾರ್ಥಿಗಳಾದ ಹನೂಶ್ಯಾ, ಶ್ರೀನಿವಾಸ್, ಬ್ರಿಯಾನ್ ಬಾನ್ಸ್, ಅಮೆಯಾ ದಾಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts