More

    ಸಿಎಂ ನಿವಾಸ ಆಸ್ಪತ್ರೆಯಾಯ್ತು; ಸಾರ್ವಜನಿಕರಿಗಾಗಿ ಅಲ್ಲ; ಸಂಬಂಧಿಗೆ ಕರೊನಾ ಸೋಂಕು

    ಮೂರು ಪಾಳಿಯಲ್ಲಿ ವೈದ್ಯರು, ದಾದಿಯರ ನಿಯೋಜನೆ; ವೆಂಟಿಲೇಟರ್​ ಸಮೇತ ಆಸ್ಪತ್ರೆಯೇ ಅಲ್ಲಿ ಸ್ಥಾಪನೆಯಾಗಿದೆ….

    ಇದ್ಯಾವುದೋ ಕೋವಿಡ್ ಅಧಿಕವಿರುವ ಪ್ರದೇಶದಲ್ಲಿ ಜನರಿಗೆ ನಿರಂತರವಾಗಿ ಚಿಕಿತ್ಸೆ ನೀಡಲು ಆರಂಭಿಸಲು ಮಾಡಲಾಗಿರುವ ವ್ಯವಸ್ಥೆ ಅಲ್ಲ. ಬದಲಾಗಿ ಸಿಎಂ ಅಧಿಕೃತ ನಿವಾಸದಲ್ಲಿ ಕೈಗೊಳ್ಳಲಾಗಿರುವ ತುರ್ತು ವ್ಯವಸ್ಥೆ. ಅಂದರೆ, ಸಿಎಂ ಕರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದೇನಲ್ಲ…., ಸಿಎಂ ಹತ್ತಿರದ ಸಂಬಂಧಿಯೊಬ್ಬರಲ್ಲಿ ಕಂಡು ಬಂದಿರುವ ಸೋಂಕಿನ ಪರಿಣಾಮವಿದು.

    ಇದನ್ನೂ ಓದಿ; ಮೊದಲ ಹಂತದಲ್ಲಿ 375 ಜನರ ಮೇಲೆ ದೇಶೀಯ ಲಸಿಕೆ ಕೊವಾಕ್ಸಿನ್​ ಪ್ರಯೋಗ; 13ರವರೆಗೆ ನೋಂದಣಿಗೆ ಅವಕಾಶ

    ಪಟನಾದಲ್ಲಿರುವ ಸಿಎಂ ನಿತೀಶ್​ಕುಮಾರ್​ ಅಧಿಕೃತ ನಿವಾಸವೀಗ ಆಸ್ಪತ್ರೆಯಾಗಿ ಬದಲಾಗಿದೆ. ಸರ್ಕಾರಿ ಪಟನಾ ಮೆಡಿಕಲ್​ ಕಾಲೇಜಿನ ವೈದ್ಯರನ್ನು ಮೂರು ಪಾಳಿಯಲ್ಲಿ ಇಲ್ಲಿ ನಿಯೋಜಿಸಲಾಗಿದೆ. ಇಲ್ಲಿರುವ ತಾತ್ಕಾಲಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ಸೌಲಭ್ಯ ಕಲ್ಪಿಸಲಾಗಿದೆ. ಆರೋಗ್ಯ ಇಲಾಖೆಯ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ಈ ಎಲ್ಲ ವಿವರಗಳಿವೆ.

    ಹಾಗೆಂದು ಕರೊನಾ ಪೀಡಿತವಾಗಿರುವ ಸಿಎಂ ಸಂಬಂಧಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿಲ್ಲ. ಅವರನ್ನು ಪಟನಾದ ಏಮ್ಸ್​ ಆಸ್ಪತ್ರೆಯ ವಿಶೇಷ ವಾರ್ಡ್​ನಲ್ಲಿ ದಾಖಲಿಸಲಾಗಿದೆ.

    ಇದನ್ನೂ ಓದಿ; ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

    ಸಾಮಾನ್ಯ ಜನರಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಆದರೆ, ಸಿಎಂ ನಿವಾಸ ಆಸ್ಪತ್ರೆಯಾಗಿ ಬದಲಾಗಿದೆ. ಸಿಎಂ ಕೋವಿಡ್​ ಪರೀಕ್ಷೆ ಫಲಿತಾಂಶ 2 ತಾಸಿನಲ್ಲಿ ಗೊತ್ತಾದರೆ, ಸಾಮಾನ್ಯ ಜನರು ವಾರಗಟ್ಟಲೇ ಕಾಯಬೇಕಾಗಿದೆ ಎಂದು ವಿಪಕ್ಷ ನಾಯಕ ತೇಜಶ್ವಿ ಯಾದವ್​ ಟೀಕಿಸಿದ್ದಾರೆ.

    ಕರೊನಾ ಕೊನೆಯಾಗೋದು ಹೇಗೆ? ಲಸಿಕೆ ಸಿಗದಿದ್ದರೆ ಬೇರೆ ದಾರಿ ಏನಿದೆ? ಇಲ್ಲಿದೆ ಕುತೂಹಲಕಾರಿ ವಿಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts