More

    ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಮತ್ತೊಮ್ಮೆ ಗಲ್ಲು ಫಿಕ್ಸ್​: ಮಾ.20ರಂದು ನೇಣಿಗೇರಿಸುವಂತೆ ದೆಹಲಿ ಕೋರ್ಟ್ ಆದೇಶ

    ನವದೆಹಲಿ: ನಿರ್ಭಯಾ ಅತ್ಯಾಚಾರ ಅಪರಾಧಿ ಪವನ್​ ಗುಪ್ತಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ತಿರಸ್ಕರಿಸಿದ ಬೆನ್ನಲ್ಲೇ ಇಂದು ದೆಹಲಿ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ಹೊಸ ಡೆತ್​ ವಾರೆಂಟ್ ಜಾರಿಗೊಳಿಸಿದೆ.

    ನಿರ್ಭಯಾ ಅತ್ಯಾಚಾರ ಅಪರಾಧಿಗಳನ್ನು ಮಾ.20ರಂದು ಮುಂಜಾನೆ 5.30ಕ್ಕೆ ಗಲ್ಲಿಗೇರಿಸುವಂತೆ ಕೋರ್ಟ್ ಹೊಸ ಆದೇಶ ನೀಡಿದೆ.

    ಗಲ್ಲುಶಿಕ್ಷೆ ಈಗಾಗಲೇ ಮೂರು ಬಾರಿ ಮುಂದೂಡಲ್ಪಟ್ಟಿದೆ. ಮಾರ್ಚ್​ 3ರಂದು ನಿಗದಿಯಾಗಿ ಮರಣದಂಡನೆಗೆ ದೆಹಲಿ ನ್ಯಾಯಾಲಯ ಮಾ.2ರಂದು ತಡೆ ನೀಡಿತ್ತು. ಪವನ್​ ಗುಪ್ತಾ ಅರ್ಜಿ ವಿಚಾರಣೆ ನಿಮಿತ್ತ ಈ ನಿರ್ಧಾರ ತೆಗೆದುಕೊಂಡಿತ್ತು.

    ರಾಷ್ಟ್ರಪತಿಯವರು ಪವನ್​ ಗುಪ್ತಾನ ಕ್ಷಮಾದಾನ ಅರ್ಜಿಯನ್ನು ವಜಾ ಮಾಡುತ್ತಿದ್ದಂತೆ, ಹೊಸ ಡೆತ್​ ವಾರೆಂಟ್​ ಜಾರಿ ಮಾಡುವಂತೆ ದೆಹಲಿ ಸರ್ಕಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅಪರಾಧಿಗಳ ಎಲ್ಲ ಕಾನೂನು ಪ್ರಕ್ರಿಯೆಗಳೂ ಮುಗಿದಿವೆ ಎಂದು ಹೇಳಿತ್ತು.

    ಇಂದು ಕೂಡ ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್​ ಅವರು ಡೆತ್​ ವಾರಂಟ್​ ನಿಗದಿ ಮಾಡಬಾರದು ಎಂದು ವಾದ ಮಂಡಿಸಿದರು. ರಾಷ್ಟ್ರಪತಿಗಳು ದಯಾ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಪವನ್​ ಗುಪ್ತಾ ಸುಪ್ರೀಂಕೋರ್ಟ್​ ಮೆಟ್ಟಿಲೇರುತ್ತಾರಾ ಎಂದು ಅವರ ಬಳಿ ವಿಚಾರಣೆ ನಡೆಸಲು ಸಮಯ ನೀಡಬೇಕು ಎಂದು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts