More

    ದಯಾ ಅರ್ಜಿಯೊಂದಿಗೆ 170 ಪುಟಗಳ ವೈಯಕ್ತಿಕ ಡೈರಿ ಲಗ್ಗತ್ತಿಸಿ ರಾಷ್ಟ್ರಪತಿಗೆ ಹಸ್ತಾಂತರಿಸುವಂತೆ ದೆಹಲಿ ಕೋರ್ಟ್​ ಮೆಟ್ಟಿಲೇರಿದ ನಿರ್ಭಯಾ ಅತ್ಯಾಚಾರ ಅಪರಾಧಿ

    ನವದೆಹಲಿ: ದಯಾ ಅರ್ಜಿ ಜತೆ 170 ಪುಟಗಳ ವೈಯಕ್ತಿಕ ಡೈರಿಯನ್ನು ಲಗ್ಗತ್ತಿಸಿ ಶೀಘ್ರವೇ ರಾಷ್ಟ್ರಪತಿಗೆ ಹಸ್ತಾಂತರಿಸುವಂತೆ ತಿಹಾರ್​ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ವಿನಯ್​ ಶರ್ಮಾ ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ.

    ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರಿಗೆ ಸಲ್ಲಿಸಿರುವ ದಯಾ ಅರ್ಜಿಯನ್ನು ಇನ್ನೂ ಅಧಿಕಾರಿಗಳು ಹಸ್ತಾಂತರಿಸಿಲ್ಲ. ಅಲ್ಲದೆ ಆ ಅರ್ಜಿಯೊಂದಿಗೆ ನಾನು ಬರೆದಿರುವ ಡೈರಿಯನ್ನು ಲಗ್ಗತ್ತಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಆತ ಅರ್ಜಿಯಲ್ಲಿ ಕೋರಿದ್ದಾನೆ.

    ನಿರ್ಭಯಾ ಅತ್ಯಾಚಾರಿಗಳಿಗೆ ಫೆಬ್ರವರಿ 1ರಂದು ನೇಣಿಗೇರಿಸಲು ಸಿದ್ಧತೆ ನಡೆಯುತ್ತಿರುವಾಗಲೇ ಅಪರಾಧಿ ವಿನಯ್​ ಶರ್ಮಾ ರಾಷ್ಟ್ರಪತಿಗೆ ದಯಾ ಅರ್ಜಿ ಸಲ್ಲಿಸಿದ್ದಾನೆ.

    ಮತ್ತೊಬ್ಬ ಅಪರಾಧಿ ಮುಖೇಶ್​ ಸಿಂಗ್​ ರಾಷ್ಟ್ರಪತಿಗಳಿಗೆ ದಯಾ ಅರ್ಜಿ ಸಲ್ಲಿಸಿದ್ದ. ಕೇವಲ 4 ದಿನಗಳಲ್ಲೇ ರಾಷ್ಟ್ರಪತಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಆತನ ನಂತರ ಈಗ ವಿನಯ್​ ಶರ್ಮಾ ದಯಾ ಅರ್ಜಿ ಸಲ್ಲಿಸುತ್ತಿದ್ದಾನೆ.

    ವಿನಯ್ ಶರ್ಮಾ ಪರವಾಗಿ ವಕೀಲ ಎಪಿ ಸಿಂಗ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಜ.22ರಂದು ವಿನಯ್​ ಶರ್ಮಾ ದಯಾ ಅರ್ಜಿ ಜತೆ 170 ಪುಟಗಳ ವೈಯಕ್ತಿ ಡೈರಿಯನ್ನು ಲಗ್ಗತ್ತಿಸಬೇಕು ಎಂದು ಕೋರಿದ್ದ. ಆತನ ಮನವಿಯನ್ನು ನಾನು ಜೈಲು ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ಜೈಲು ಅಧಿಕಾರಿಗಳು ಇನ್ನು ಡೈರಿಯೊಂದಿಗೆ ದಯಾ ಅರ್ಜಿ ಹಸ್ತಾಂತರಿಸಿಲ್ಲ ಎಂದು ಅವರು ಕೋರ್ಟ್​ ಗಮನಕ್ಕೆ ತಂದರು.

    ವಿನಯ್ ಶರ್ಮಾನ ವೈದ್ಯಕೀಯ ದಾಖಲೆಗಳು, ಸೆರೆಯಲ್ಲಿರುವ ದಾಖಲೆ, ಜೈಲಿನಲ್ಲಿದ್ದ ವೇಳೆ ಕೆಲಸ ಮಾಡಿ ಗಳಿಸಿದ ಹಣ, ತಿಹಾರ್​ ಒಲಂಪಿಕ್ಸ್​ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಆತ ಪಾಲ್ಗೊಂಡಿದ್ದ ದಾಖಲೆಗಳು ಕೂಡ ಇವೆ.

    ಸಾಮೂಹಿಕ ಅತ್ಯಾಚಾರ ಸಾಬೀತಾಗಿ ಪವನ್ (25) ವಿನಯ್ ಶರ್ಮಾ (26), ಮುಖೇಶ್ ಕುಮಾರ್ (32) ಮತ್ತು ಅಕ್ಷಯ್ ಕುಮಾರ್ ಸಿಂಗ್ (31) ಎಂಬ ನಾಲ್ವರು ಅಪರಾಧಿಗಳಿಗೆ ಕೋರ್ಟ್​ ಮರಣ ದಂಡನೆ ಶಿಕ್ಷೆ ವಿಧಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts