More

    ದಯಾ ಅರ್ಜಿಯನ್ನು ತಿರಸ್ಕರಿಸಿದ ರಾಷ್ಟ್ರಪತಿ ಅವರ ವಿಧಾನವನ್ನು ಪ್ರಶ್ನಿಸಿ ಮತ್ತೆ ಕೋರ್ಟ್​ಗೆ ಹೋದ ನಿರ್ಭಯಾ ಪ್ರಕರಣದ ಆರೋಪಿ

    ನವದೆಹಲಿ: ದಯಾ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ಅವರ ವಿಧಾನವನ್ನು ಪ್ರಶ್ನಿಸಿ ನಿರ್ಭಯಾ ಪ್ರಕರಣದ ಅಪರಾಧಿ ಮುಕೇಶ್​ ಕುಮಾರ್​ ಸಿಂಗ್​ ಶನಿವಾರ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಫೆಬ್ರವರಿ 1ರಂದು ನಿಗದಿಯಾಗಿರುವ ಮರಣದಂಡನೆಯನ್ನು ರದ್ದುಗೊಳಿಸಲು ಕೋರಿದ್ದಾನೆ.

    ಶತ್ರುಘ್ನ ಚೌಹಾಣ್​ ಎಂಬುವವರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ದಯಾ ಅರ್ಜಿಯನ್ನು ತಿರಸ್ಕರಿಸಿದ ವಿಧಾನವನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿದೆ ಎಂದು ಮುಕೇಶ್ ಸಿಂಗ್ ಪರ ವಕೀಲೆ ವೃಂದಾ ಗ್ರೋವರ್ ತಿಳಿಸಿದ್ದಾರೆ.

    ಜನವರಿ 22ಕ್ಕೆ ಮರಣ ದಂಡನೆ ಜಾರಿಗೆ ಆದೇಶಿಸಿದ ನಂತರ ಅಪರಾಧಿಗಳಲ್ಲಿ ಇಬ್ಬರು ಕ್ಯುರೇಟಿವ್​ ಅರ್ಜಿ ಸಲ್ಲಿಸಿದ್ದರು. ಇದನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿತ್ತು.

    ಮುಕೇಶ್​ ಸಿಂಗ್​ ಅವನ ದಯಾ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ ನಂತರ ಮರಣದಂಡನೆಯನ್ನು ಫೆಬ್ರವರಿ 1ರ ಬೆಳಗ್ಗೆ 6ಕ್ಕೆ ಜಾರಿಗೊಳಿಸಲು ಕೋರ್ಟ್​ ಆದೇಶಿಸಿತ್ತು. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts