More

    5 ನಿಮಿಷದಲ್ಲಿ ಒಂದು ಮೈಲಿ ದೂರ ಓಡಿದ 9 ತಿಂಗಳ ತುಂಬು ಗರ್ಭಿಣಿ!

    ಕ್ಯಾಲಿಫೋರ್ನಿಯಾ: ಗರ್ಭಿಣಿಯರು ವಿಶ್ರಾಂತಿ ಪಡೆದುಕೊಳ್ಳಬೇಕು. ಸಣ್ಣಪುಟ್ಟ ಕೆಲಸ ಹಾಗೂ ವ್ಯಾಯಾಮ ಮಾಡುತ್ತೀರಿ ಎಂದು ವೈದ್ಯರು ಸೂಚಿಸುತ್ತಾರೆ. ಗರ್ಭಿಣಿಯರು ವಿಶ್ರಾಂತಿಗೆ ಜಾರುವುದೇ ಹೆಚ್ಚು. ಆದರೆ 9 ತಿಂಗಳು ಗರ್ಭಿಣಿಯೊಬ್ಬರು ಒಂದು ಮೈಲಿ ಓಡುವ ಮೂಲಕ ಸುದ್ದಿಯಲ್ಲಿದ್ದಾರೆ.

    30 ವರ್ಷದ ಮಕೆನ್ನಾ ಮೈಲರ್ ಅವರು ತುಂಬು ಗರ್ಭಿಣಿ. ಈಕೆ ಮಹಿಳಾ ಅಥ್ಲಿಟ್‌, ಓರ್ವ ವೃತ್ತಿಪರ ಓಟಗಾರ್ತಿ ಆಗಿದ್ದು, ಕ್ಯಾಲಿಫೋರ್ನಿಯಾದಲ್ಲಿ ನಡೆದ ಓಟದ ಸ್ಪರ್ಧೆಯೊಂದರಲ್ಲಿ ಒಂದು ಮೈಲು ದೂರವನ್ನು ಕೇವಲ 4 ನಿಮಿಷ 17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

    ಇದನ್ನೂ ಓದಿ: ಗದಗ ಜಿಲ್ಲೆಯ ಚೆಕ್ ಪೋಸ್ಟ್​​ನಲ್ಲಿ 4 ಕೆ.ಜಿ ಚಿನ್ನಾಭರಣ ಜಪ್ತಿ!

    2020ರಲ್ಲಿ ತಮ್ಮ ಮೊದಲ ಪ್ರಗ್ನೆನ್ಸಿಯಲ್ಲಿಯೂ ನಿರಂತರವಾಗಿ ರನ್ನಿಂಗ್ ಅಭ್ಯಾಸ ನಡೆಸಿದ್ದರು. ಹೀಗಾಗಿ  ಗರ್ಭಿಣಿಯಾಗಿದ್ದಾಗಲೂ ಓಡಲು ಸಾಧ್ಯವಾಗಿದೆ. ಈ ಹಿಂದೆ 5 ನಿಮಿಷ 25 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಇದೀಗ ತಮ್ಮ ಎರಡನೇ ಪ್ರಯತ್ನದಲ್ಲಿ, ಈ ಮೊದಲು ನಿರ್ಮಿಸಿದ್ದ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಪತ್ನಿ ಮೇಲೆ ಕುಡಗೋಲಿನಿಂದ 35 ಬಾರಿ ಹಲ್ಲೆ ನಡೆಸಿದ ಪತಿಗೆ ಜೀವಾವಧಿ ಶಿಕ್ಷೆ
    ಮಕೆನ್ನಾ ಮೈಲರ್, ಸಾಮಾನ್ಯವಾಗಿ 5 ಕಿಲೋ ಮೀಟರ್ ಹಾಗೂ 10 ಕಿಲೋ ಮೀಟರ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಲೇ ಬಂದಿದ್ದಾರೆ. ಇದೀಗ ತಮ್ಮ ಎರಡನೇ ಪ್ರಗ್ನೆನ್ಸಿಯ ಪ್ರಯತ್ನದಲ್ಲಿ ಕೇವಲ 4 ನಿಮಿಷ 17 ಸೆಕೆಂಡ್‌ಗಳಲ್ಲಿ ಒಂದು ಮೈಲು ಗುರಿ ತಲುಪುವ ಮೂಲಕ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಗರ್ಭಿಣಿಯಾಗಿದ್ದಾಗ ಕಠಿಣ ಅಭ್ಯಾಸವನ್ನು ನಡೆಸಬಾರದು ಎಂದು ನನ್ನ ಸುತ್ತಮುತ್ತಲಿನ ಜನರು ಹೇಳುತ್ತಲೇ ಇದ್ದರು. ಆದರೆ ನಾನು ಅವರ ಮಾತನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಎಲ್ಲರೂ ಸುಮ್ಮನಾಗಿದ್ದಾರೆ. ನಾನು ಗರ್ಭಿಣಿಯಾಗುವುದಕ್ಕಿಂತ ಮುಂಚಿನಿಂದಲೂ ರನ್ನಿಂಗ್ ಮಾಡುತ್ತಿದ್ದೆ. ಹೀಗಾಗಿಯೇ ಪ್ರಗ್ನೆನ್ಸಿಯಾದಾಗಲೂ ನೆರವಿಗೆ ಬಂತು ಎಂದು ಮಕೆನ್ನಾ ಮೈಲರ್ ಹೇಳಿದ್ದಾರೆ.

    ಅಂಗಡಿಗಳ ಮೇಲೆ ಸಿಸಿಬಿ ದಾಳಿ; 8.90 ಲಕ್ಷ ರೂ. ಮೌಲ್ಯದ ಇ-ಸಿಗರೇಟ್ ಜಪ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts