More

    ಮೂವತ್ತೆರಡು ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ

    ಅಳವಂಡಿ: ನಿಲೋಗಿಪುರ ಗ್ರಾಮದಿಂದ ಕೊಪ್ಪಳ ಹಾಗೂ ಕುಕನೂರು ತಾಲೂಕಿನ 32 ಹಳ್ಳಿಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿವ ನೀರಿನ ಯೋಜನೆಯ ಮುಖ್ಯ ಗೇಟ್‌ವಾಲ್ವ್ ಸಮಸ್ಯೆಯಿಂದಾಗಿ ಜಲ ಸಮಸ್ಯೆ ತಲೆದೋರಿದ್ದು, ಜನ ಪರದಾಡುವಂತಾಗಿದೆ.

    ಬೇಸಿಗೆ ಆರಂಭದಲ್ಲೇ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಜನ, ಜಾನುವಾರುಗಳು ಪರಿತಪಿಸುವಂತಾಗಿದೆ. ಕೊಪ್ಪಳ ಹಾಗೂ ಕುಕನೂರ ತಾಲೂಕಿನ 32 ಹಳ್ಳಿಗಳಿಗೆ ನಿಲೋಗಿಪುರ ಹತ್ತಿರದ ತುಂಗಭದ್ರಾ ನದಿ ನೀರನ್ನು ಶುದ್ಧೀಕರಿಸಿ ಪಂಪ್ ಮುಖಾಂತರ ಪೂರೈಸಲಾಗುತ್ತಿದೆ. ಆದರೆ, ಈ ಯೋಜನೆ ನಾಮ್‌ಕೇವಾಸ್ತೆ ಎಂಬಂತಾಗಿದೆ.

    ನಿರಂತರ ನೀರು ಪೂರೈಕೆಯಲ್ಲಿ ಎಡವಿದ್ದು, ಜನರು ಪರದಾಡುವಂತಾಗಿದೆ. ನೀರು ಪೂರೈಕೆ ಕೇಂದ್ರ ಅವ್ಯವಸ್ಥೆಯಿಂದ ಕೂಡಿದ್ದು, ಯಾವುದೇ ತಾಂತ್ರಿಕ ಸಮಸ್ಯೆಯಾದಲ್ಲಿ ಕೆಲ ದಿನಗಳವರೆಗೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಇಲ್ಲಿ ಹೆಚ್ಚುವರಿ ಸಲಕರಣೆ ಇಲ್ಲದ ಕಾರಣ ಏನಾದರೂ ರಿಪೇರಿಗೆ ಬಂದರೆ ಮರಳಿ ಜೋಡಿಸಲು ಹಲವು ದಿನಗಳೇ ಬೇಕು. ಅಲ್ಲಿವರೆಗೂ ನಿವಾಸಿಗಳಿಗೆ ಬವಣೆ ತಪ್ಪಿದ್ದಲ್ಲ.

    MAIN-GATE-WALV
    ನಿಲೋಗಿಪುರ ಬಹುಗ್ರಾಮ ಯೋಜನೆಯ ಮುಖ್ಯ ಗೇಟ್‌ವಾಲ್ವ್ ದುರಸ್ತಿಯಲ್ಲಿರುವುದು.

    ಶುದ್ಧ ಕುಡಿವ ನೀರಿನ ಘಟಕ ಕೂಡ ಬಂದ್

    ಕಳೆದ ಐದಾರು ದಿನಗಳಿಂದ ನಿಲೋಗಿಪುರದಲ್ಲಿನ ಯಂತ್ರಾಗಾರದಲ್ಲಿ ನೀರು ಪೂರೈಸುವ 300 ಎಂಎಂ ಮುಖ್ಯ ಗೇಟ್‌ವಾಲ್ವ್ ಸೀಳಿದ್ದು, ಅದನ್ನು ಬದಲಿಸಿಲ್ಲ. ಹೀಗಾಗಿ ನೀರು ಪೂರೈಕೆ ಸ್ಥಗಿತಗೊಂಡಿದೆ. ಮುಖ್ಯವಾಗಿ ಕೊಪ್ಪಳ ತಾಲೂಕಿನ ಮುರ್ಲಾಪುರ, ಅಳವಂಡಿ, ಕವಲೂರು, ಗುಡಗೇರಿ, ಹಟ್ಟಿ ಮುಂತಾದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಮುರ್ಲಾಪುರ, ಗುಡಗೇರಿ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೂಡ ಬಂದ್ ಆಗಿದ್ದರಿಂದ ಜನ ನೀರಿಗಾಗಿ ಕೃಷಿಹೊಂಡ ಹಾಗೂ ಕೆರೆ ಕಟ್ಟೆಗಳನ್ನು ಅವಲಂಬಿಸಿದ್ದಾರೆ.

    ಇದನ್ನೂ ಓದಿ:

    ನಿಲೋಗಿಪುರ ಗ್ರಾಮದಿಂದ ನೀರು ಪೂರೈಸುವ ಜಾಕ್‌ವೆಲ್‌ನಲ್ಲಿ 300 ಎಂಎಂ ಗೇಟ್‌ವಾಲ್ವ್ ದುರಸ್ತಿಯಲ್ಲಿದ್ದು, ಪುಣೆಯಿಂದ ತರಿಸಲಾಗುತ್ತಿದೆ. ಇದು ಹುಬ್ಬಳ್ಳಿಗೆ ಬಂದಿದ್ದು, ಇನ್ನೆರಡು ದಿನದೊಳಗೆ ನೀರು ಪೂರೈಕೆ ಆರಂಭಿಸಲಾಗುವುದು. ಈ ಜಾಕ್‌ವೆಲ್‌ನಲ್ಲಿ ಯಾವುದೇ ಹೆಚ್ಚುವರಿ ಉಪಕರಣ ಇಲ್ಲದಿರುವುದರಿಂದ ಬೇರೆ ಕಡೆ ತರಿಸಿ ಜೋಡಿಸುವುದು ಅನಿವಾರ್ಯ.

    ಬಸವರಾಜ ಅಮರಾವತಿ, ಉಪ ಗುತ್ತಿಗೆದಾರ

    ಸದ್ಯ ಬೇಸಿಗೆ ಆರಂಭವಾಗಿದ್ದು ನದಿಯಿಂದ ನೀರು ಪೂರೈಕೆ ಬಂದ್ ಆಗಿದೆ. ಕಳೆದ ಐದಾರು ದಿನಗಳಿಂದ ಜನರಿಗೆ ಬಹಳ ತೊಂದರೆಯಾಗಿದೆ. ಸಂಬಂಧಪಟ್ಟವರು ತಕ್ಷಣ ದುರಸ್ತಿ ಕಾರ್ಯ ಕೈಗೊಂಡು ನೀರು ಪೂರೈಸಬೇಕು.
    ಮಹೇಶ ಯರಾಶಿ, ಕವಲೂರು ಗ್ರಾಮಸ್ಥ

    ಐದಾರು ದಿನಗಳಿಂದ ನೀರು ಬಂದಿಲ್ಲ. ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಬೋರ್‌ವೆಲ್ ನೀರು ಸಹ ಇಲ್ಲ. ಪ್ರತಿದಿನ ಕೆರೆಗಳಿಗೆ ಹೋಗಿ ನೀರು ತರಬೇಕಾಗಿದೆ.
    ಯಮನೂರಪ್ಪ ಹರಿಜನ, ಮುರ್ಲಾಪುರ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts