More

    ಅಧಿವೇಶನಕ್ಕೆ ಮುನ್ನ ನಿಗಮ-ಮಂಡಳಿಗೆ ನೇಮಕ?

    ಬೆಂಗಳೂರು: ಬಾಕಿ ಇರುವ ನಿಗಮ-ಮಂಡಳಿಗಳ ನೇಮಕ ಪ್ರಕ್ರಿಯೆಗಳನ್ನು ವಿಧಾನಸಭಾ ಅಧಿವೇಶನಕ್ಕೂ ಮುನ್ನ ಮುಗಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಶಾಸಕರ ನೇಮಕದ ಬಳಿಕ ಬಾಕಿ ಉಳಿದಿರುವ ನಿಗಮ-ಮಂಡಳಿಗಳ ಮೇಲೆ ಕಣ್ಣಿಟ್ಟಿರುವ ಕಾರ್ಯಕರ್ತರು, ಆಪ್ತ ಶಾಸಕರ ಮೂಲಕ ಪ್ರಭಾವ ಬೀರುತ್ತಿದ್ದಾರೆ.

    ಮುಖ್ಯಮಂತ್ರಿ, ಬಿಜೆಪಿ ಮತ್ತು ಸಚಿವರ ಕಚೇರಿಗೆ ನಿತ್ಯವೂ ಶಿಫಾರಸು ಪತ್ರಗಳು ಹರಿದು ಬರುತ್ತಿದ್ದು, ತಮಗೆ ಆಸಕ್ತಿ ಇರುವ ನಿಗಮಗಳಿಗೆ ನೇಮಕ ಮಾಡಿಕೊಡಬೇಕು. ಪ್ರಾದೇಶಿಕ ಮತ್ತು ಜಾತಿ ಆಧಾರದ ಮೇಲೆ ತಮಗೆ ಮಾನ್ಯತೆ ನೀಡಬೇಕು ಎನ್ನುವ ನಿಟ್ಟಿನಲ್ಲೂ ಪತ್ರಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ನೀಟ್, ಜೆಇಇ ನಡೆಸಲು ಬೆಂಬಲ ಸೂಚಿಸಿದ ಉತ್ತರ ಪ್ರದೇಶ

    ಸಚಿವರು ಸಹ ಕೆಲ ಕಾರ್ಯಕರ್ತರಿಗೆ ಶಿಫಾರಸು ಮಾಡಿ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ. ನೇಮಕ ಪ್ರಕ್ರಿಯೆ ಸಂಬಂಧ ಬಂದಿರುವ ಶಿಫಾರಸು ಪತ್ರಗಳನ್ನು ಪಟ್ಟಿ ಮಾಡಲಾಗುತ್ತಿದ್ದು, ಮುಖ್ಯಮಂತ್ರಿಗೆ ತಲುಪಿಸಲಿದ್ದಾರೆ.

    ಮುಂದಿನ 50 ವರ್ಷ ಕಾಲ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೇ ಮುಂದುವರಿಯಲಿದೆ ಹೀಗಾದ್ರೆ…: ಗುಲಾಂ ನಬಿ ಆಜಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts