More

    ಉದಾಸೀನ ತೋರಿದರೆ ಅಪಾಯ ಗ್ಯಾರಂಟಿ

    ನಿಡಗುಂದಿ: ಜಗತ್ತು ಕರೊನಾದಿಂದ ತತ್ತರಿಸಿದ್ದರೂ ಭಾರತಕ್ಕೆ ವ್ಯಾಪಕವಾಗಿ ಈ ರೋಗ ಹರಡದ ಪರಿಣಾಮ ನಾವೆಲ್ಲ ಹೆಚ್ಚೆಚ್ಚು ಅಪಾಯದಿಂದ ದೂರ ಉಳಿದಿದ್ದೇವೆ. ಆದರೆ, ತಜ್ಞರ ಸಲಹೆಗಳನ್ನು ಉದಾಸೀನ ತೋರಿದರೆ ಮುಂದಿನ ದಿನಗಳಲ್ಲಿ ರೋಗದಿಂದ ಹೆಚ್ಚು ಅಪಾಯ ಕಟ್ಟಿಟ್ಟಬುತ್ತಿ ಎಂದು ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು. ಪಟ್ಟಣದ ರುದ್ರೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ತಯಾರಿಸಿದ ಆಹಾರ ಸಾಮಗ್ರಿ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

    ಈ ರೋಗದಿಂದ ಜಗತ್ತಿನ ಅನೇಕ ಬಲಿಷ್ಠ ರಾಷ್ಟ್ರಗಳು ಆರ್ಥಿಕ ಹಿನ್ನ್ನಡೆ ಕಂಡಿವೆ. ಅದರಂತೆ ನಮ್ಮ ದೇಶ ಕೂಡ ಆರ್ಥಿಕವಾಗಿ ಕುಗ್ಗಿದೆ. ರೋಗದ ಭಾದೆ ಇನ್ನೂ ಎರಡ್ಮೂರು ತಿಂಗಳು ಉಳಿಯಲಿದ್ದು, ಜನತೆ ಸರ್ಕಾರದ ಆದೇಶಗಳನ್ನು ಪಾಲಿಸುತ್ತ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
    ದೇಶದ ಅನೇಕ ಉದ್ಯಮಿಗಳು ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುತ್ತಿರುವುದು ಪ್ರೇರಣಾದಾಯಕ. ಡಿಸಿಸಿ ಬ್ಯಾಂಕಿನಿಂದ 25 ಸಾವಿರ ಕಿಟ್‌ಗಳನ್ನು ಕ್ಷೇತ್ರದಲ್ಲಿ ವಿತರಿಸಿಸಲಾಗುವುದು. ಪ್ರಥಮವಾಗಿ ಈ ಕ್ಷೇತ್ರದಲ್ಲಿ ಕಿಟ್ ವಿತರಣೆಗೆ ಚಾಲನೆ ನೀಡಲಾಗಿದ್ದು, ಮುಂದೆ ಜಿಲ್ಲೆಯಲ್ಲಿ ವಿಸ್ತರಿಸಲಾಗುವುದು ಎಂದು ಹೇಳಿದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಜಿ. ಪಾಟೀಲ ಮಾತನಾಡಿ, ಕರೊನಾ ಬಗ್ಗೆ ನಿರ್ಲಕ್ಷೃವಹಿಸಿದರೇ ನಮಗೂ ಒಕ್ಕರಿಸುವ ಸಾಧ್ಯತೆ ಇದೆ. ಪ್ರತಿಯೊಬ್ಬರು ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಸರ್ಕಾರದ ನಿಯಮಗಳನ್ನು ಪಾಲಿಸಿ ಕರೊನಾ ಗೆಲ್ಲಲ್ಲು ಸಹಕರಿಸಬೇಕು ಎಂದರು.

    ಸರ್ಕಾರಕ್ಕೆ ಡಿಸಿಸಿ ಬ್ಯಾಂಕ್ ವತಿಯಿಂದ 1 ಕೋಟಿ ರೂ. ನೆರವು ನೀಡಿದ್ದು, ಇನ್ನೂ ಹೆಚ್ಚಿನ ನೆರವು ನೀಡಲು ಶ್ರಮಿಸಲಾಗುತ್ತಿದೆ. ಸದ್ಯ ಪ್ರತಿ ಕುಟುಂಬಕ್ಕೆ ಹದಿನೈದು ದಿನಕ್ಕಾಗುವಷ್ಟು ದಿನಸಿ ಕಿಟ್ ನೀಡಲಾಗುತ್ತಿದೆ. ಕಿಟ್ ದುರ್ಬಳಕೆಯಾಗದೆ ನೈಜ ಲಾನುಭವಿಗಳಿಗೆ ತಲುಪಿಸುವಲ್ಲಿ ಸ್ಥಳೀಯರು ಶ್ರಮಿಸಬೇಕು ಎಂದರು. ಯರನಾಳ ವೀರಕ್ತಮಠದ ಸಂಗನಬಸವ ಶ್ರೀಗಳು, ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀಗಳು, ವೀರಶೈವ ಮಹಾಸಭಾದ ಮುಖ್ಯಸ್ಥ ವಿ.ಸಿ. ನಾಗಠಾಣ ಮಾತನಾಡಿದರು.
    ಕಾಂಗ್ರೆಸ್ ಮುಖಂಡ ಈರಣ್ಣ ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತಾ ಪಾಟೀಲ, ಚಂದ್ರಶೇಖರಗೌಡ ಪಾಟೀಲ, ಸಿದ್ದಣ್ಣ ನಾಗಠಾಣ, ಸಂಗಮೇಶ ಬಳಿಗಾರ, ಸಂಗಮೇಶ ಕೆಂಭಾವಿ, ಶಂಕರ ರೇವಡಿ, ಶಂಕರ ವಡವಡಗಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts