More

    ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ಎನ್​ಐಎ ದಾಳಿ: ಐವರು ಯುವಕರ ಬಂಧನ

    ನವದೆಹಲಿ: ಇಸ್ಲಾಮಿಕ್​ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆನ್ನಲಾದ ವ್ಯಕ್ತಿಗಳ ಗುಂಪೊಂದರ ಮೇಲೆ ನಿಗಾ ಇಟ್ಟಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಸೋಮವಾರ ದಿಢೀರನೇ ದೆಹಲಿ, ಕೇರಳ ಮತ್ತು ಕರ್ನಾಟಕ ಸೇರಿದಂತೆ ದೇಶದ 10 ಕಡೆಗಳಲ್ಲಿ ದಾಳಿ ಮಾಡಿದೆ.

    ಕೇವಲ 48 ಗಂಟೆಗಳ ಹಿಂದೆ ಎನ್​ಐಎ ದಾಖಲಿಸಿಕೊಂಡ ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿಢೀರ್​ ದಾಳಿ ನಡೆದಿದೆ. ಸುಮಾರು 6 ರಿಂದ 7 ಮಂದಿ ಗುಂಪನ್ನು ತನಿಖಾ ಸಂಸ್ಥೆ ಕೆಲವು ದಿನಗಳಿಂದ ಮೇಲ್ವಿಚಾರಣೆ ನಡೆಸುತ್ತಿತ್ತು. ಈ ಸಂಬಂಧ ಎನ್​ಐಎ ಕೇಸ್​ ದಾಖಲಿಸಿಕೊಂಡಿತ್ತು.

    ಇದನ್ನೂ ಓದಿರಿ: ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

    ಮೂಲಗಳ ಪ್ರಕಾರ ಸದ್ಯದ ದಾಳಿಯಲ್ಲಿ ಐವರು ಆರೋಪಿಗಳನ್ನ ಎನ್​ಐಎ ಬಂಧಿಸಿದೆ. ಪ್ರಭಾವಶಾಲಿ ಮುಸ್ಲಿಂ ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ನೇರವಾಗಿ ಟಾರ್ಗೆಟ್​ ಮಾಡುತ್ತಿರುವ ಪಾಕಿಸ್ತಾನ, ಅವರನ್ನು ಆನ್​ಲೈನ್​ ಮೂಲಕವೇ ನೇಮಕ ಮಾಡಿಕೊಂಡು ತರಬೇತಿ ನೀಡಿ ಸ್ಥಳೀಯ ದಾಳಿಗಳನ್ನು ನಡೆಸಲು ಪಾಕ್​ ಪ್ಲಾನ್​ ಮಾಡುತ್ತಿರುವುದು ಬೆಳಕಿಗೆ ಬಂದಿದೆ. (ಏಜೆನ್ಸೀಸ್​)

    ಜಯಲಲಿತಾ ಸಾವಿಗೆ ಯಾರು ಹೊಣೆ? ಸ್ಫೋಟಕ ಹೇಳಿಕೆ ನೀಡಿದ ಸಿಎಂ ಪಳನಿಸ್ವಾಮಿ!

    ಗೂಗಲ್ ಉದ್ಯೋಗಿ ಸಿ.ಡಿ. ವಿಜಯಕುಮಾರ್ ಈಗ ಕೃಷಿಕ!

    ಬಿಗ್​ಬಾಸ್​ ಸೀಸನ್-8ರಿಂದ ನಿರ್ಮಲಾ ಚನ್ನಪ್ಪ ಔಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts