More

    ಮುಂದಿನ ವಾರ ದ್ವಿತೀಯ ಪಿಯುಸಿ ಫಲಿತಾಂಶ

    ಬಂಟ್ವಾಳ: ಮುಂದಿನ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ಆಗಸ್ಟ್ ಎರಡನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

    ಪೊಳಲಿ ಕ್ಷೇತ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪರಿಸ್ಥಿತಿ ತಿಳಿಯಾದ ಬಳಿಕ ಪೋಷಕರ ಅಭಿಪ್ರಾಯ ಪಡೆದು ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನ ಕೈಗೊಳ್ಳಲಿದ್ದೇವೆ. ಶಾಲೆಗಳ ಶುಲ್ಕ ಏರಿಕೆ ಮಾಡದಂತೆ ಸುತ್ತೋಲೆ ಕಳುಹಿಸಿದ್ದೇವೆ. ಈ ಕುರಿತು ದೂರುಗಳಿದ್ದರೆ ಪಾಲಕರು ಸಹಾಯವಾಣಿ ಮೂಲಕ ನೀಡಬಹುದು ಎಂದು ಸ್ಪಷ್ಟಪಡಿಸಿದರು.

    ಸಂದಿಗ್ಧ ಪರಿಸ್ಥಿತಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ದೇಶದ ಗಮನ ಸೆಳೆದಿದೆ. 13ರಿಂದ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಮೌಲ್ಯಮಾಪನ ನಡೆಯಲಿದೆ. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ಅಗತ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಬಳಿಕ ಕೇಂದ್ರ ಸರ್ಕಾರ ಒಂದಷ್ಟು ಮಾನದಂಡ ಪ್ರಕಟಿಸಿತು. ಆದರ ಆಧಾರದಲ್ಲಿ ಮಕ್ಕಳಿಗೆ ಒತ್ತಡ ಆಗದಂತೆ ಜೂ.27ಕ್ಕೆ ನಾವು 2ನೇ ಆದೇಶ ನೀಡಿದ್ದೆವು. ಆದರೆ ಹೈಕೋರ್ಟ್ ನಮ್ಮ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿತು. ಆನ್‌ಲೈನ್ ಶಿಕ್ಷಣ ಪ್ರತಿ ಮಗುವಿನ ಮೂಲ ಹಕ್ಕು ಎಂದಿತು. ಹೀಗಾಗಿ ಆ ತೀರ್ಪನ್ನು ಅಧ್ಯಯನ ಮಾಡಲಿದ್ದೇವೆ. ಚಂದನ, ದೂರದರ್ಶನದ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಹೇಳಿದರು.

    17ರಂದು 7 ಮಾಜಿ ಶಿಕ್ಷಣ ಸಚಿವರೊಂದಿಗೆ ಚರ್ಚೆ: ಆನ್‌ಲೈನ್ ಶಿಕ್ಷಣದ ಕುರಿತು ಸಾಕಷ್ಟು ದೂರಗಳ ಜತೆ ಪೋಷಕರಲ್ಲಿ ಗೊಂದಲಗಳಿವೆ. ಹೀಗಾಗಿ ಆನ್‌ಲೈನ್ ಶಿಕ್ಷಣದ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರ ಜತೆಗೆ ಜು.17ರಂದು ಸಭೆ ನಡೆಸಲಿದ್ದೇವೆ ಎಂದು ಸುರೇಶ್ ಕುಮಾರ್ ಹೇಳಿದರು. ಖಾಸಗಿ ಶಾಲೆಗಳ ಶಿಕ್ಷಕರು ಸಂಬಳವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರಿಗೆ ನೆರವಾಗುವ ದೃಷ್ಟಿಯಿಂದ ರಾಜ್ಯದ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಕರ ಸಂಘಗಳ ಅಧ್ಯಕ್ಷರ ಜತೆ ಮಾತುಕತೆ ನಡೆಸಲಾಗಿದೆ. ಅವರು ತಮ್ಮ ಸಂಬಳದಿಂದ ನೆರವು ನೀಡುವುದಕ್ಕೆ ಪೂರಕ ಸ್ಪಂದನೆ ವ್ಯಕ್ತಪಡಿಸಿದ್ದು, ನಾವು ಕೂಡ ಅದಕ್ಕೆ ಒಂದಷ್ಟು ಮೊತ್ತವನ್ನು ಸೇರಿಸಿ ನೆರವನ್ನು ನೀಡಲಿದ್ದೇವೆ ಎಂದರು.

    ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಪೊಳಲಿ ತಾಯಿ ನಮ್ಮ ಮಕ್ಕಳಿಗೆಲ್ಲ ಆಶೀರ್ವಾದ ಮಾಡಿ, ಪರೀಕ್ಷೆ ಯಶಸ್ವಿಯಾಗುವಂತೆ ಹಾರೈಸಿದ್ದಾಳೆ. ಹೀಗಾಗಿ ಎಲ್ಲ ಮಕ್ಕಳ ಪರವಾಗಿ ತಾಯಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ.
    | ಎಸ್.ಸುರೇಶ್ ಕುಮಾರ್ ಶಿಕ್ಷಣ ಸಚಿವ

    ಕೌಶಿಕ್, ನೀನೇ ಸ್ಫೂರ್ತಿ ಎಂದ ಸಚಿವರು: ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್, ಕಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಬಂಟ್ವಾಳ ಎಸ್‌ವಿಎಸ್ ದೇವಳ ವಿದ್ಯಾಸಂಸ್ಥೆ ವಿದ್ಯಾರ್ಥಿ ಕೌಶಿಕ್‌ನನ್ನು ಭೇಟಿಯಾಗಿ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. 10 ನಿಮಿಷ ಆತನೊಂದಿಗೆ ಮಾತನಾಡಿದ ಸಚಿವರು, ‘ಕೌಶಿಕ್ ನೀನೇ ನಮಗೆ ಸ್ಫೂರ್ತಿ’ ಎನ್ನುತ್ತ ಪರೀಕ್ಷೆ ಹೇಗಿತ್ತು ಎಂದು ಕೇಳಿದರು. ಕೌಶಿಕನ ತಾಯಿ, ಶಾಸಕ ರಾಜೇಶ್ ನಾಕ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts