More

    ಅರಬ್ ರಾಷ್ಟ್ರದಲ್ಲೇ ಮುಂದಿನ ಐಪಿಎಲ್, ಭಾರತ-ಇಂಗ್ಲೆಂಡ್ ಸರಣಿ?

    ದುಬೈ: ಬಿಸಿಸಿಐ ವತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನಡುವೆ ಶನಿವಾರ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ. ಇದರನ್ವಯ ಮುಂದಿನ ದಿನಗಳಲ್ಲೂ ಭಾರತದಲ್ಲಿ ಕರೊನಾ ಹಾವಳಿ ಮುಂದುವರಿದರೆ, ಮುಂದಿನ ವರ್ಷದ ಐಪಿಎಲ್ 14ನೇ ಆವೃತ್ತಿಯ ಟೂರ್ನಿ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಸಹಿತ ಭಾರತ ತಂಡದ ತವರಿನ ಪಂದ್ಯಗಳಿಗೆ ಯುಎಇ ಬದಲಿ ತಾಣವಾಗಿರುತ್ತದೆ.

    ಇಸಿಬಿ ಜತೆಗೆ ಎಂಒಯುಗೆ ಸಹಿ ಹಾಕಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಶನಿವಾರ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಮುನ್ನ ಟ್ವಿಟರ್‌ನಲ್ಲಿ ೋಷಿಸಿದ್ದಾರೆ. ಒಪ್ಪಂದದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಖಜಾಂಚಿ ಅರುಣ್ ಧುಮಾಲ್ ಕೂಡ ಹಾಜರಿದ್ದರು.

    2021ರ ಐಪಿಎಲ್ ಟೂರ್ನಿಯನ್ನೂ ಯುಎಇಯಲ್ಲೇ ನಡೆಸುವ ಬಗೆಗಿನ ಒಪ್ಪಂದದ ಬಗ್ಗೆ ಅಧಿಕೃತವಾಗಿ ಬಿಸಿಸಿಐನಿಂದ ಯಾವುದೇ ನೀಡಲಾಗಿಲ್ಲ. ಆದರೆ ಮುಂದಿನ ಐಪಿಎಲ್‌ಗೆ ಇನ್ನು 6 ತಿಂಗಳು ಮಾತ್ರ ಸಮಯಾವಕಾಶವಿದ್ದು, ಆಗಲೂ ಭಾರತದಲ್ಲಿ ಕರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದಿದ್ದರೆ ಮತ್ತೆ ಯುಎಇಯಲ್ಲೇ ಟೂರ್ನಿ ನಡೆಸುವ ಬಗ್ಗೆ ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ. ಮುಂದಿನ ಐಪಿಎಲ್ 2021ರ ಮಾರ್ಚ್ ಅಂತ್ಯದಿಂದ ಮೇವರೆಗೆ ನಡೆಯುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಐಪಿಎಲ್ ಪಂದ್ಯಗಳಿಗೆ ಮಾಧ್ಯಮದವರಿಗೂ ಪ್ರವೇಶವಿಲ್ಲ

    ಇನ್ನು ಮುಂದಿನ ಐಪಿಎಲ್ ಟೂರ್ನಿಗೆ ಮುನ್ನ ಭಾರತ ತಂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಒಳಗೊಂಡ ಟೂರ್ನಿ ಆಡಬೇಕಿದೆ. ಡಿಸೆಂಬರ್-ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿ ತವರಿಗೆ ಮರಳಿದ ಬಳಿಕ ಭಾರತ ತಂಡ ಈ ಸರಣಿ ಆಡಬೇಕಾಗಿದೆ. ಆದರೆ ಆಗಲೂ ಭಾರತದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದಿರದಿದ್ದರೆ, ಯುಎಇಯಲ್ಲೇ ಇಂಗ್ಲೆಂಡ್ ವಿರುದ್ಧದ ಸರಣಿಗೆ ಆತಿಥ್ಯ ವಹಿಸುವ ಪ್ಲ್ಯಾನ್ ಬಿ ಆಯ್ಕೆಯನ್ನು ಬಿಸಿಸಿಐ ಸಿದ್ಧಪಡಿಸಿಟ್ಟುಕೊಂಡಿದೆ.

    PHOTO | ಟ್ವಿಟರ್‌ನಲ್ಲಿ ‘ವೆಲ್‌ಕಂ ಬ್ಯಾಕ್ ಧೋನಿ’ ಭರ್ಜರಿ ಟ್ರೆಂಡಿಂಗ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts