Zeenat Aman| ‘ದಮ್ ಮಾರೋ ದಮ್’ನಲ್ಲಿ ಮತ್ತೇರಿಸಿಕೊಂಡಿದ್ದೆ.. ಅಸಲಿ ಸಂಗತಿ ಬಿಚ್ಚಿಟ್ಟ ನಟಿ

Untitled-design-2024-09-24T144710.417
Published on

ಮುಂಬೈ: ಬಾಲಿವುಡ್​ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಜೀನತ್ ಅಮನ್(Zeenat Aman) ಕೂಡ ಒಬ್ಬರು. ಈ ನಟಿ 70ರ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಮಾದಕ ನಟನೆಯಿಂದ ಪ್ರೇಕ್ಷಕರನ್ನು ಹುಚ್ಚರನ್ನಾಗಿ ಮಾಡಿದ್ದರು. ಇಂದಿಗೂ ಜೀನತ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಿರಿಯ ನಟಿ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ತಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಸದ್ಯ ನಟಿ ಹರೇ ರಾಮ ಹರೇ ಕೃಷ್ಣ ಚಿತ್ರದ 'ದಮ್ ಮಾರೋ ದಮ್' ಹಾಡಿನ ಚಿತ್ರೀಕರಣದ ಸಮಯದಲ್ಲಿ ಆಸಕ್ತಿಕರ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

1971ರ ಸಮಯದಲ್ಲಿ ಹಿಟ್​​ ಆಗಿದ್ದ ದಮ್ ಮಾರೋ ದಮ್ ಹಾಡಿನಲ್ಲಿ ಜೀನತ್ ಅಮಾನ್ ಹಿಪ್ಪಿಗಳ ನಡುವೆ ಕುಡಿದು ಹೋಗುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ದೇವ್ ಆನಂದ್ ಅವರ ಸಹೋದರಿಯ ಪಾತ್ರವನ್ನು ಜೀನತ್ ನಿರ್ವಹಿಸಿದ್ದಾರೆ. ಸಿನಿಮಾಕ್ಕಾಗಿ ದೇವ್ ಆನಂದ್​ ಅವರು ಸಿನಿಮಾಗಾಗಿ ತುಂಬಾ ಶ್ರಮಿಸಿದ್ದಾರೆ. ದೇವ್​ ಆನಂದ್​ ಅವರು ದೃಶ್ಯಗಳು ನೈಜವಾಗಿ ಕಾಣಬೇಕೆಂದ ಬಯಸಿದ್ದರು. ಇದಕ್ಕಾಗಿ ಚಿಲ್ಲಮ್ ಅನ್ನು ಧೂಮಪಾನ ಮಾಡಲು ನಿರ್ಧರಿಸಿದರು ಎಂದು ತಿಳಿಸಿದರು.

ಕಠ್ಮಂಡುವಿನಲ್ಲಿ ದಮ್ ಮಾರೋ ದಮ್ ಚಿತ್ರೀಕರಣ ನಡೆಸುತ್ತಿದ್ದೇವು. ದೇವ್​ ಆನಂದ್​​ ಈ ಹಾಡಿಗಾಗಿ ಬೀದಿಗಳಿಂದ ಕೆಲವು ಹಿಪ್ಪಿಗಳನ್ನು ಆಯ್ಕೆ ಮಾಡಿ ಕರೆತಂದಿದ್ದರು. ಹಿಪ್ಪಿಗಳು ಬಾಲಿವುಡ್ ಚಿತ್ರದಲ್ಲಿ ಕೆಲಸ ಮಾಡಲು ತುಂಬಾ ಸಂತೋಷವಾಗಿದ್ದರು. ನೇಪಾಳದಲ್ಲಿ ಅವರು ತಮ್ಮ ಚಿಲ್ಲಮ್‌ಗಳಲ್ಲಿ ಹ್ಯಾಶಿಶ್ ಪ್ಯಾಕ್​​​ಗಳನ್ನು ಹೊಂದಿದ್ದರು ಮಾತ್ರವಲ್ಲದೆ ಅವರಿಗೆ ಉಚಿತ ಆಹಾರವನ್ನು ಸಹ ಪಡೆಯುತ್ತಿದ್ದರು ಎಂದು ತಿಳಿಸಿದರು.

ಸದ್ಯ ಅವರ ಪಾತ್ರದ ಬಗ್ಗೆ ತಿಳಿಸಿದರ ಅವರು, ನನಗೆ ಆಗ ಕೇವಲ 20 ವರ್ಷ ವಯಸ್ಸಾಗಿತ್ತು. ಟೇಕ್​ಗಾಗಿ ಹಿಪ್ಪಿಗಳ ಬಳಿ ಇದ್ದ ಚಿಲ್ಲಮ್​ನಿಂದ ಲಾಂಗ್ ಪಫ್​ಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ಟೇಕ್​ ನಂತರ ಪಫ್​ ಪಡೆಯುತ್ತಿದ್ದರು. ಚಿತ್ರೀಕರಣದ ಅಂತ್ಯದ ವೇಳೆಗೆ ಅಮಲೇರಿತ್ತು. ಆ ಸ್ಥಿತಿಯಲ್ಲಿ ನಾನು ಹೋಟೆಲ್‌ಗೆ ಹಿಂತಿರುಗುವ ಸ್ಥಿತಿಯಲ್ಲಿಯೂ ಇರಲಿಲ್ಲ. ಹೋಟೆಲ್​ಗೆ ಹಿಂತಿರುಗಿದಾಗ ತಲೆ ಸುತ್ತುವ ಮತ್ತು ಅಹಿತಕರ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ.

ಆ ಸ್ಥಿತಿ ನೋಡಿ ನನ್ನ ತಾಯಿ ಪ್ರತಿಕ್ರಿಯಿಎ ಹೀಗಿತ್ತು ಎಂದ Zeenat Aman:

ಚಿತ್ರೀಕರಣ ಸಮಯದಲ್ಲಿ ಏನಾಯಿತು ಎಂದು ನನ್ನ ತಾಯಿಗೆ ತಿಳಿದಾಗ ಅವರು ಕೋಪಗೊಂಡರು. ನನಗೆ ಡ್ರಗ್ಸ್ ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಂಡದ ಸಿಬ್ಬಂದಿಗೆ ಬೈದರು. ಅದೃಷ್ಟವಶಾತ್​​ ನಾನು ಅವರ ಕೋಪದಿಂದ ಪಾರಾದೆ ಎಂದು ಜೀನತ್​​ ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net