ನಟ ಯಶ್​​ ಕಾರಿಗೆ ಮಗನಿಂದ ವಾಹನ ಪೂಜೆ!

Yatharv Yash
Published on

ಬೆಂಗಳೂರು: ನಟ ರಾಕಿಂಗ್ ಸ್ಟಾರ್​​ ಅವರು ತಮ್ಮ ಕಾರುಗಳಿಗೆ ವಾಹನ ಪೂಜೆ ಮಾಡಿದ್ದಾರೆ. ಈಗಾಗಲೇ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ನಟ ಯಶ್, ಮನೆಯಲ್ಲೇ ತಮ್ಮ ಎಲ್ಲಾ ವಾಹನಗಳಿಗೂ ಪೂಜೆ ಮಾಡಿದ್ದಾರೆ. ಯಶ್​ ಅವರ ಕಾರುಗಳಿಗೆ ಪೂಜೆ ನೆರವೇರಿಸಿದ್ದು ಅವರ ಪುತ್ರ ಯಥರ್ವ್​ ಯಶ್.!

ಹೌದು, ವಾಹನ ಪೂಜೆಯ ವೇಳೆ ಯಶ್​ ಪುತ್ರ ತಂದೆಯ ಕಾರುಗಳಿಗೆ ಪೂಜೆ ಮಾಡಿದ್ದಾರೆ. ಅಷ್ಟೇ ಅಲ್ಲ ತನ್ನ ಸೈಕಲ್​ಗೂ ಪೂಜೆ ಮಾಡಿದ್ದಾರೆ. ಯಥರ್ವ್​ ಯಶ್​ ಪೂಜೆ ಮಾಡಿ ಅಪ್ಪನ ಕಾರು ಹಾಗೂ ತನ್ನ ಸೈಕಲ್​ಗೆ ಆರತಿ ಮಾಡಿದ್ದಾರೆ.

ಯಥರ್ವ್​ ಯಶ್​ ತಮ್ಮ ಮನೆಯಲ್ಲಿ ವಾಹನ ಪೂಜೆ ಮಾಡುತ್ತಿರುವ ವಿಡಿಯೋವನ್ನು ಇದೀಗ ರಾಧಿಕಾ ಪಂಡಿತ್ ತಮ್ಮ ಇನ್ಸ್​​ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ನಮ್ಮ ಮನೆಯಲ್ಲೂ ವಾಹನ ಪೂಜೆ ನಡೆಯಿತು ಎಂಬುವುದನ್ನು ತಿಳಿಸದ್ದಾರೆ. ಯಶ್​ ಮಗ ವಾಹನ ಪೂಜೆ ಮಾಡುತ್ತಿರುವ ವಿಡಿಯೋ ನೋಡಿದ ಅವರ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net