ಜಗತ್ತಿನಲ್ಲಿ ಹಲ್ಲುಜ್ಜುವ ಬ್ರಷ್‌ಗಳಿಗಿಂತ ಅಧಿಕ ಸ್ಮಾರ್ಟ್‌ಫೋನ್‌ಗಳಿವೆ!: ಲೆಕ್ಕ ಕೇಳಿದ್ರೆ ತಲೆ ಗಿರ್​ ಅನ್ನೋದು ಗ್ಯಾರಂಟಿ | Smartphones

dk - 2025-02-09T191556.269
Published on

Smartphones: ಇತ್ತೀಚಿನ ದಿನಗಳಲ್ಲಿ ಮೊಬೈಲ್​ಪೋನ್​ ಮತ್ತು ಇಂಟರ್​ನೆಟ್​ ಇಲ್ಲದೆ ಜಗತ್ತನ್ನು ಊಹಿಸಿಕೊಳ್ಳುವುದಕ್ಕೂ ಅಸಾಧ್ಯವಾಗಿದೆ.

ಇಂದಿನ ಅತ್ಯಾಧುನಿಕ ಯುಗದಲ್ಲಿ ಹಳ್ಳಿಯಿಂದ ನಗರದಲ್ಲಿನ ಪ್ರತಿಯೊಬ್ಬರಲ್ಲಿ ಸ್ಮಾರ್ಟ್​ಫೋನ್​ಗಳಿವೆ. ಇದು ಉದ್ಯೋಗ ಹೆಚ್ಚಿಸುವುದರ ಜತೆ ಅದಾಯ ಮೂಲವನ್ನು ಹೆಚ್ಚಿಸುತ್ತಿದೆ. ಹೀಗಾಗಿ, ಇಂದು ಹಲ್ಲುಜ್ಜುವ ಬ್ರಷ್‌ಗಳಿಗಿಂತ ಅಧಿಕ ಸ್ಮಾರ್ಟ್‌ಫೋನ್‌ಗಳಿವೆ ಎಂದು ನಿಮಗೆ ತಿಳಿದಿಯೇ?. ಹೌದು ಜಗತ್ತಿನಲ್ಲಿ ಎಷ್ಟು ಸ್ಮಾರ್ಟ್​ಪೋನ್​ಗಳಿವೆ ಎಂದು ತಿಳಿದರೆ ತಲೆ ಗಿರ್​ ಅನ್ನೋದು ಗ್ಯಾರಂಟಿ!.

ಟೂತ್ ಬ್ರಷ್ ಗಿಂತ ಹೆಚ್ಚು ಮೊಬೈಲ್?

ಪ್ರಪಂಚದಾದ್ಯಂತ ಪ್ರತಿಯೊಬ್ಬ ಪುರುಷ ಮತ್ತು ಮಗು ಬಳಸುವ ಹಲ್ಲುಜ್ಜುವ ಬ್ರಷ್‌ಗಳ ಸಂಖ್ಯೆಗಿಂತ ಹೆಚ್ಚಿನ ಮೊಬೈಲ್ ಫೋನ್‌ಗಳು ಲಭ್ಯವಿದೆ ಎಂದರೆ ನೀವು ಆಚ್ಚರಿಯಾಗುತ್ತೆ. ಹೌದು, ಇದನ್ನು ಹೇಳುತ್ತಿರುವುದು ನಾವಲ್ಲ, ಕೆಲ ವರದಿಗಳ ಉಲ್ಲೇಖ ಇಲ್ಲಿದೆ..

ಮೊಬೈಲ್ ಮಾರ್ಕೆಟಿಂಗ್ ಅಸೋಸಿಯೇಷನ್ ​​ಏಷ್ಯಾದ 2023ರ ವರದಿಯ ಪ್ರಕಾರ, ಜಗತ್ತಿನಲ್ಲಿ ಸುಮಾರು 6.8 ಶತಕೋಟಿ ಜನರು ವಾಸಿಸುತ್ತಿದ್ದಾರೆ. ಇವುಗಳಲ್ಲಿ, ಹಲ್ಲುಜ್ಜುವ ಬ್ರಷ್‌ಗಳು 4.2 ಬಿಲಿಯನ್ ಜನರನ್ನು ತಲುಪಿದ್ದರೆ, 5.1 ಬಿಲಿಯನ್ ಜನರು ಮೊಬೈಲ್ ಫೋನ್‌ಗಳನ್ನು ಹೊಂದಿದ್ದಾರೆ. ಇದರರ್ಥ ಮೊಬೈಲ್‌ನ ವ್ಯಾಪ್ತಿಯು ಟೂತ್ ಬ್ರಷ್‌ಗಿಂತ ಸುಮಾರು 90 ಕೋಟಿ ಅಧಿಕ ಎಂದು ವರದಿ ಹೇಳುತ್ತಿದೆ.

ಆದಾಗ್ಯೂ, ಈಗ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇಷ್ಟೇ ಅಲ್ಲ, ಭಾರತದಲ್ಲಿ ಜಲನಿರೋಧಕ(ವಾಟರ್​ ಪ್ರೂಫ್​) ಮೊಬೈಲ್ ಫೋನ್‌ಗಳು ಇನ್ನೂ ಸಾಮಾನ್ಯ ಜನರಿಗೆ ತಲುಪಲು ಸಾಧ್ಯವಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದರೆ ಶೇ. 90 ರಷ್ಟು ಮೊಬೈಲ್ ಫೋನ್‌ಗಳು ವಾಟರ್​ ಪ್ರೂಫ್​ ಹೊಂದಿರುವ ವಿಶ್ವದ ಏಕೈಕ ದೇಶ ಜಪಾನ್.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net