ಇಂದು ಮತ್ತೆ ಏಳು ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸುತ್ತೇವೆ: ಡಾ.ಜಿ.ಪರಮೇಶ್ವರ್ | Dr. G. Parameshwara

ರಾಜ್ಯದಲ್ಲಿ ಈಗಾಗಲೇ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇಂದು(ಅ. 14) ಮತ್ತೆ ಏಳು ತಾಲೂಕುಗಳನ್ನು ಘೋಷಣೆ ಮಾಡುತ್ತೇವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಇಂದು ಮತ್ತೆ ಏಳು ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸುತ್ತೇವೆ: ಡಾ.ಜಿ.ಪರಮೇಶ್ವರ್ | Dr. G. Parameshwara
Published on: 

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇಂದು(ಅ. 14) ಮತ್ತೆ ಏಳು ತಾಲೂಕುಗಳನ್ನು ಘೋಷಣೆ ಮಾಡುತ್ತೇವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು 7 ತಾಲೂಕುಗಳನ್ನ ಬರಗಾಲ ಪೀಡಿತ ಎಂದು ಘೋಷಣೆ ಮಾಡಲಿದ್ದೇವೆ. ಉಳಿದ ತಾಲೂಕುಗಳ ವಿಚಾರವಾಗಿ ಗ್ರೌಂಡ್ ಟ್ರೂಥಿಂಗ್ ಮಾಡಲು ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಒಂದು ವಾರದಲ್ಲಿ ಬರಗಾಲದ ನಷ್ಟದ ಫೈನಲ್ ಮೆಮೊರೆಂಡಮ್ ತಯಾರಾಗಲಿದೆ. ರಾಜ್ಯದಲ್ಲಿ ಆಗಿರುವ ಒಟ್ಟು ನಷ್ಟ ಎಷ್ಟು ಎಂಬ ಅಂದಾಜು ಸಿಗಲಿದೆ. ಎನ್​ಡಿಆರ್​ಎಫ್​ ಮಾರ್ಗಸೂಚಿ ಅನುಗುಣವಾಗಿ ನಾನು ಎಷ್ಟು ಕೇಳಬಹುದು ಎಂದು ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ.

Also Read
ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ತೋರಿದ್ರು : ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಡಿಕೆ ಶಿವಕುಮಾರ್ | CM DK Shivakumar
ಇಂದು ಮತ್ತೆ ಏಳು ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸುತ್ತೇವೆ: ಡಾ.ಜಿ.ಪರಮೇಶ್ವರ್ | Dr. G. Parameshwara

ಮುಖ್ಯಮಂತ್ರಿಗಳು, ನಾನು ಹಾಗೂ ಇತರೆ ಸದಸ್ಯರು ದೆಹಲಿಗೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ಹೋಗಿ ಮನವಿ ಪತ್ರ ಸಲ್ಲಿಸುತ್ತೇವೆ. ಈ ವರ್ಷ ಹೆಚ್ಚು ನಷ್ಟ ಆಗಿದೆ. ಎನ್​ಡಿಆರ್​ಎಫ್​ ಮಾರ್ಗಸೂಚಿಯನ್ನು ಸ್ವಲ್ಪಮಟ್ಟಿಗೆ ವಿಸ್ತರಿಸಿ ಎಂದು ನಾನು ಮತ್ತು ಸಿಎಂ ಪತ್ರ ಬರೆದಿದ್ದವು, ಕೇಂದ್ರ ಕೃಷಿ ಸಚಿವರು ಪರಿಶೀಲಿಸುವುದಾಗಿ ಪ್ರತ್ಯುತ್ತರವನ್ನು ಬರೆದಿದ್ದಾರೆ ಎಂದು ಹೇಳಿದ್ದಾರೆ.

ಕ್ಯಾಬಿನೆಟ್​ನಲ್ಲಿ ಮೀಸಲಾತಿ ವಿಚಾರ ಚರ್ಚೆ

ಮೀಸಲಾತಿ ಹೆಚ್ಚಳ ವಿಷಯದಲ್ಲಿ ದೆಹಲಿಗೆ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಡಿಸಿಎಂ, ನಾಳೆ ಸಚಿವ ಸಂಪುಟ ಸಭೆ ಇದೆ. ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಚರ್ಚೆ ಮಾಡಬೇಕು. ಬಳಿಕ ದೆಹಲಿ ಹೋಗುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬೇಕಾ? ಅಥವಾ ಶೆಡ್ಯೂಲ್ 9 ಗೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಾ? ಎಲ್ಲವನ್ನು ನಾಳೆಯ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net