ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ತೋರಿದ್ರು : ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಡಿಕೆ ಶಿವಕುಮಾರ್ | CM DK Shivakumar

ನವದೆಹಲಿಯಲ್ಲಿ ಸೋಮವಾರ(ಅ. 12) ನಡೆದ ಇಂಡಿಯಾ ಕೂಟದ ಸುಪ್ರೀಂಕೋರ್ಟ್​ವರೆಗಿನ ಪ್ರತಿಭಟನಾ ಮೆರವಣಿಗೆ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕರ ರಾಹುಲ್ ಗಾಂಧಿ ಅವರು ತಮ್ಮನ್ನು ಪಕ್ಕಕ್ಕೆ ತಳ್ಳಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ತೋರಿದ್ರು : ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಡಿಕೆ ಶಿವಕುಮಾರ್ | CM DK Shivakumar
Published on: 

ಬೆಂಗಳೂರು: ನವದೆಹಲಿಯಲ್ಲಿ ಸೋಮವಾರ(ಅ. 12) ನಡೆದ ಇಂಡಿಯಾ ಕೂಟದ ಸುಪ್ರೀಂಕೋರ್ಟ್​ವರೆಗಿನ ಪ್ರತಿಭಟನಾ ಮೆರವಣಿಗೆ ವೇಳೆ ಲೋಕಸಭೆ ವಿರೋಧ ಪಕ್ಷದ ನಾಯಕರ ರಾಹುಲ್ ಗಾಂಧಿ ಅವರು ತಮ್ಮನ್ನು ಪಕ್ಕಕ್ಕೆ ತಳ್ಳಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನಾ ಮೆರವಣಿಗೆ ಸಮಯದಲ್ಲಿ ರಾಹುಲ್ ಗಾಂಧಿಯವರು ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹಿಂದಕ್ಕೆ ಎಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಮತ್ತು ಈ ಘಟನೆಯನ್ನು ಕರ್ನಾಟಕ ಬಿಜೆಪಿ 7.4 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಆರೋಪಿಸಿತ್ತು.

ಈ ಕುರಿತು ದೆಹಲಿಯಲ್ಲಿ ಸ್ವತಃ ಸ್ಪಷ್ಟನೆ ನೀಡಿರುವ ಸಿಎಂ ಡಿ.ಕೆ.ಶಿವಕುಮಾರ್, ಪ್ರತಿಭಟನೆಯ ಸಮಯದಲ್ಲಿ ಯಾರೂ ನನ್ನನ್ನು ತಳ್ಳಲಿಲ್ಲ. ಅಲ್ಲಿ ಭಾರಿ ಜನಸಮೂಹವಿತ್ತು. ಪ್ರತಿಭಟನಾಕಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ರಾಹುಲ್ ಗಾಂಧಿ ಅವರು ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಹಿಂದೆ ಬರುತ್ತಿದ್ದ ವಾಹನವನ್ನು ಹತ್ತುವಂತೆ ಹೇಳಿದರು. ಬಿಜೆಪಿಗೆ ನನ್ನ ಮೇಲೆ ಅಪಾರ ಪ್ರೀತಿ ಇದೆ, ಅದಕ್ಕಾಗಿಯೇ ಅವರು ಇಂತಹ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಹೇಳಿದ್ದಾರೆ.

Also Read
ಆಡಂಬರ, ಬೂಟಾಟಿಕೆ, ಬಡಾಯಿ ; 2029ರ ಚುನಾವಣೆಯಲ್ಲಿ ಎನ್​ಡಿಎ ಗೆಲುವು ಎಂದ ಅಮಿತ್ ಶಾಗೆ ಕಾಂಗ್ರೆಸ್​ ತಿರುಗೇಟು | Congress
ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ, ಕಾಳಜಿ ತೋರಿದ್ರು : ವೈರಲ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಡಿಕೆ ಶಿವಕುಮಾರ್ | CM DK Shivakumar

ಇದಕ್ಕೂ ಮುನ್ನ ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಸಿಎಂ, ನಮ್ಮ ಹೋರಾಟ ಪ್ರಜಾಪ್ರಭುತ್ವಕ್ಕಾಗಿ, ಗಮನವನ್ನು ಬೇರೆಡೆ ಸೆಳೆಯುವ ವಿಷಯಗಳಿಗಲ್ಲ. ನಿನ್ನೆಯ ಪ್ರತಿಭಟನೆಯಲ್ಲಿ, ಮತ ಕಳ್ಳತನದ ವಿರುದ್ಧದ ಹೋರಾಟ ಹಾಗೂ ನಮ್ಮ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಒಗ್ಗೂಡಿದ ಜನರ ಮಹಾಸಾಗರವೇ ಕಂಡುಬಂದಿತು.

ಶ್ರೀ ರಾಹುಲ್ ಗಾಂಧಿಯವರು ನನ್ನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ, ವಾಹನಕ್ಕೆ ಹಿಂತಿರುಗಿ ಎಚ್ಚರಿಕೆಯಿಂದ ಇರುವಂತೆ ನನಗೆ ಸಲಹೆ ನೀಡಿದರು. ನಾವಿಬ್ಬರೂ ಹಂಚಿಕೊಳ್ಳುವ ಬಾಂಧವ್ಯ ಅಂತಹದ್ದು. ಅದು ನಂಬಿಕೆ, ವಾತ್ಸಲ್ಯ ಮತ್ತು ಕೌಟುಂಬಿಕತೆಯ ಬುನಾದಿಯ ಮೇಲೆ ನಿಂತಿದೆ.ಕೇವಲ 10 ಸೆಕೆಂಡುಗಳ ವಿಡಿಯೋ ಸಂಪೂರ್ಣ ಸತ್ಯವನ್ನು ಹೇಳಲಾರದು. ನೈಜ ವಿಷಯವನ್ನು ನಾವು ಮರೆಯಬಾರದು. ಅದೇ ಮತ ಕಳ್ಳತನ ಮತ್ತು ಪ್ರತಿಯೊಬ್ಬ ಭಾರತೀಯನ ಮತದಾನದ ಹಕ್ಕನ್ನು ರಕ್ಷಿಸುವ ಹೋರಾಟ ಎಂದಿದ್ದರು.

ಘಟನೆ ಬಗ್ಗೆ ಮಾತನಾಡಿದ್ದ ಡಿಸಿಎಂ ಡಾ. ಜಿ. ಪರಮೇಶ್ವರ, ಪ್ರತಿಭಟನೆಗಳು ಮತ್ತು ದೊಡ್ಡ ಸಾರ್ವಜನಿಕ ಸಭೆಗಳ ಸಮಯದಲ್ಲಿ ಭದ್ರತೆಯನ್ನು ನಿರ್ವಹಿಸುವುದು ಸವಾಲಿನ ಕೆಲಸ. ರಾಹುಲ್ ಗಾಂಧಿಯನ್ನು ರಕ್ಷಿಸುವುದು ಮತ್ತು ಜನರು ಅವರನ್ನು ಸುಲಭವಾಗಿ ಸಮೀಪಿಸಲು ಸಾಧ್ಯವಾಗದಂತೆ ನೋಡಿಕೊಳ್ಳುವುದು ಅಲ್ಲಿನ ಭದ್ರತಾ ಸಿಬ್ಬಂದಿಯ ಪ್ರಾಥಮಿಕ ಜವಾಬ್ದಾರಿ. ದುರದೃಷ್ಟವಶಾತ್, ಸಿಎಂ ಕೂಡ ಪ್ರದೇಶಕ್ಕೆ ಹೋಗಿದ್ದಾಗ ಜನಸಂದಣಿಯ ನಡುವೆ ಸ್ವಲ್ಪ ತಳ್ಳಲ್ಪಟ್ಟರು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net