ಬೇಲೂರಿನಿಂದ ಮೂಡಿಗೆರೆಗೆ ಏಕೆ? ಮೂಲಸ್ಥಾನಕ್ಕೆ ಕಾಡಾನೆ ಓಡಿಸದಿದ್ರೆ ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ: ನಯನಾ ಮೋಟಮ್ಮ

nayana motamma
ಬೇಲೂರಿನಿಂದ ಮೂಡಿಗೆರೆಗೆ ಏಕೆ? ಮೂಲಸ್ಥಾನಕ್ಕೆ ಕಾಡಾನೆ ಓಡಿಸದಿದ್ರೆ ನಾಳೆಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ: ನಯನಾ ಮೋಟಮ್ಮ
Published on: 

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲೂಕು ಭಾಗದಿಂದ ಮೂಡಿಗೆರೆ ತಾಲೂಕಿನ ಭಾಗಕ್ಕೆ ಕಾಡಾನೆಗಳ ಹಿಂಡನ್ನು ನಿನ್ನೆ ತಡರಾತ್ರಿ ಓಡಿಸಿರುವ ಅರಣ್ಯ ಅಧಿಕಾರಿಗಳು, ಇಂದು ರಾತ್ರಿಯೇ ಅವುಗಳನ್ನು ಮೂಲಸ್ಥಾನಕ್ಕೆ ಕಳಿಸದಿದ್ದರೇ ನಾಳೆಯೇ ರಾಜೀನಾಮೆ ನೀಡುವುದಾಗಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕಿಡಿಕಾರಿದ್ದಾರೆ.

ಭಾನುವಾರ ನಗರದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹಾಸನ ಜಿಲ್ಲೆಯಲ್ಲಿನ 52 ಕಾಡಾನೆಗಳನ್ನು ಜಿಲ್ಲಾ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಶಾಸಕರ ಗಮನಕ್ಕೆ ತರದೆ ಆನೆಗಳನ್ನು ಮೂಡಿಗೆರೆ ಭಾಗದಿಂದ ಭದ್ರಾ ಅಭಯಾರಣ್ಯಕ್ಕೆ ಕಳಿಸಲು ಮುಂದಾಗಿರುವುದು ಖಂಡನೀಯ ಎಂದರು.

Also Read
ಪದೇ ಪದೇ ಕಂಪನಿ ಕರೆಗಳು, ಮೆಸೇಜ್‌ಗಳು ಕಿರಿಕಿರಿ ಮಾಡ್ತಿದ್ಯಾ? ಹಾಗಿದ್ರೆ, ಇದಕ್ಕೆ ಫುಲ್​ಸ್ಟಾಪ್​ ಹಾಕಲು ಹೀಗೆ ಮಾಡಿ ಸಾಕು | Company Calls
nayana motamma

ಹಾಸನ ಜಿಲ್ಲೆಯ ಜನರ ಜೀವಕ್ಕೆ ಮಾತ್ರ ಬೆಲೆಯೇ?

ಚಿಕ್ಕಮಗಳೂರು ಜನಸಾಮಾನ್ಯರ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ನಮ್ಮಗೆ ಅಧಿಕಾರಕ್ಕಿಂತ ಜನಸಾಮಾನ್ಯರ ಜೀವ ಮುಖ್ಯ, ಅದಕ್ಕೋಸ್ಕರ ನಮ್ಮ ಅಧಿಕಾರ ತ್ಯಜಿಸಲು ಸಿದ್ದ. ಮೂಡಿಗೆರೆ ಭಾಗದಲ್ಲಿರುವ ಆನೆಗಳನ್ನು ವಾಪಾಸ್ ಅಟ್ಟಬೇಕು. ಅಕಸ್ಮಾತ್​ ತಪ್ಪಿದಲ್ಲಿ ರಾಜೀನಾಮೆ ನೀಡುವುದಾಗಿ ಮೂವರು ಶಾಸಕರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.