'ಬಸವ ಮಂಟಪ' ಪುಸ್ತಕ ವಿವಾದ: ಕೊಚ್ಚಿ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ಖಾಕಿ ವಶಕ್ಕೆ | Ravi Hanj ​

Ravi Hanj ​
'ಬಸವ ಮಂಟಪ' ಪುಸ್ತಕ ವಿವಾದ: ಕೊಚ್ಚಿ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ಖಾಕಿ ವಶಕ್ಕೆ​
Published on: 

ಕೇರಳ: ಬಸವಣ್ಣ ಅವರ ಬಗ್ಗೆ ತಮ್ಮ ಬಸವ ಮಂಟಪ ಎಂಬ ತಮ್ಮ ಕೃತಿ ಮೂಲಕ ಅವಹೇಳನ ಮಾಡಿದ್ದ ಲೇಖಕ ರವಿ ಹಂಜ್​ರನ್ನು ಇದೀಗ ಕೇರಳದ ಕೊಚ್ಚಿ ಏರ್​ಪೋರ್ಟ್​ನಲ್ಲಿ ವಶಕ್ಕೆ ಪಡೆಯಲಾಗಿದೆ.

ಬೆಳಗಾವಿ ಪೊಲೀಸರು ಪ್ರಕಟಿಸಿದ್ದ ಲುಕ್‌ಔಟ್ ನೋಟಿಸ್ ಬೆನ್ನಲ್ಲೇ ಬಸವ ಮಂಟಪ ಪುಸ್ತಕದ ಮೂಲಕ ವಿವಾದ ಸೃಷ್ಟಿಸಿದ ರವಿ ಹಂಜ್​ ಪತ್ತೆಗೆ ಶೋಧ ಕಾರ್ಯವನ್ನು ಚುರುಕುಗೊಳಿಸಲಾಗಿತ್ತು. ಇಂದು, ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿಯನ್ನು ಅಧಿಕಾರಿಗಳು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಏರ್​ಪೋರ್ಟ್​ ಅಧಿಕಾರಿಗಳು ಬೆಳಗಾವಿ ಮಾರ್ಕೆಟ್​ ಪೊಲೀಸರಿಗೆ ರವಿ ಹಂಜ್​ ಬಗ್ಗೆ ಮಾಹಿತಿ ಕೊಟ್ಟಿದ್ದು, ಕೊಚ್ಚಿಯಿಂದ ನೇರವಾಗಿ ಬೆಳಗಾವಿಗೆ ಕರೆದುಕೊಂಡು ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇಲ್ಲಿಂದ, ಮುಂದಿನ ಪ್ರಕ್ರಿಯೆ ಹಾಗೂ ಕಾನೂನು ಕ್ರಮಗಳನ್ನು ಕೈಗೊಳ್ಳಲು ಖಾಕಿ ಪಡೆ ಮುಂದಾಗಿದೆ ಎಂದು ವರದಿಯಾಗಿದೆ.

ಏನಿದು ವಿವಾದ?

ಅಮೆರಿಕದ ಶಿಕಾಗೋ ನಿವಾಸಿ ಹಾಗೂ ಲೇಖಕ ರವಿ ಹಂಜ್ ಅವರು ಬರೆದಿರುವ 600 ಪುಟಗಳ ‘ಬಸವ ಮಂಟಪ’ ಕೃತಿ ಮತ್ತು ಅದಕ್ಕೆ ಸಂಬಂಧಿಸಿದಂತೆ ಅವರು ನೀಡಿರುವ ಸಂದರ್ಶನಗಳು ರಾಜ್ಯದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿವೆ. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರನ್ನು ತಮ್ಮ ಕೃತಿಯಲ್ಲಿ ಬಸವಣ್ಣ ಅವರನ್ನು ಬಿಜ್ಜಳನ ಖಜಾನೆಯ ಹಣ ದುರುಪಯೋಗ ಮಾಡಿಕೊಂಡವರು, ಬಿಜ್ಜಳನ ಕೊಲೆಯಲ್ಲಿ ಪಾತ್ರ ಹೊಂದಿದ್ದರು ಎಂಬ ರೀತಿಯಲ್ಲಿ ತಿರುಚಲಾಗಿದೆ ಎಂಬ ಆರೋಪಗಳು ಪುಸ್ತಕದಲ್ಲಿನ ಕೆಲವು ಬರಹಗಳು ಹಾಗೂ ಬಸವಣ್ಣರ ಕುರಿತು ಅವರು ಸಂದರ್ಶನದಲ್ಲಿ ಹೇಳಿದ್ದಾರೆ ಎನ್ನಲಾದ ಹೇಳಿಕೆಗಳು ಸದ್ಯ ಭಾರಿ ಆಕ್ರೋಶ, ವಿವಾದಕ್ಕೆ ಮುಖ್ಯ ಕಾರಣವಾಗಿವೆ.

Also Read
ರಾಹುಲ್​ 136, 2 ರನ್​ನಿಂದ ಗಿಲ್‌ಗೆ ಶತಕ ಮಿಸ್! ಕಿವೀಸ್ ವಿರುದ್ಧ ಭಾರತಕ್ಕೆ 118 ರನ್‌ಗಳ ಮುನ್ನಡೆ | IND vs NZ Test
Ravi Hanj ​

ಈ ಬಗ್ಗೆ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ‘ಬಸವ ಮಂಟಪ’ ಪುಸ್ತಕವನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿತು. ಬಳಿಕ ಲೇಖಕ ರವಿ ಹಂಜ್ ವಿರುದ್ಧ ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಎಫ್‌ಐಆರ್ (FIR) ದಾಖಲಿಸಲಾಯಿತು. ತಾವು ಹಳೆಯ ಗ್ರಂಥಗಳು ಮತ್ತು ಐತಿಹಾಸಿಕ ಆಧಾರಗಳ ಮೇಲೆ ಪುಸ್ತಕ ಬರೆದಿದ್ದೇನೆ ಎಂದು ಸಮರ್ಥಿಸಿಕೊಳ್ಳುತ್ತಲೇ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ರವಿ ಹಂಜ್ ಹೇಳಿಕೆ ನೀಡಿದರು. ಆದರೆ, ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ದುಬೈ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಅವರನ್ನು ಲುಕ್‌ಔಟ್ ನೋಟಿಸ್ (LOC) ಆಧಾರದ ಮೇಲೆ ಈಗ ಕೇರಳದ ಕೊಚ್ಚಿ ಏರ್​ಪೋರ್ಟ್​ ಅಧಿಕಾರಿಗಳು ವಶಕ್ಕೆ ಪಡೆದು ಬೆಳಗಾವಿ ಪೊಲೀಸರಿಗೆ ಒಪ್ಪಿಸಿದ್ದಾರೆ.