ರಾಹುಲ್​ 136, 2 ರನ್​ನಿಂದ ಗಿಲ್‌ಗೆ ಶತಕ ಮಿಸ್! ಕಿವೀಸ್ ವಿರುದ್ಧ ಭಾರತಕ್ಕೆ 118 ರನ್‌ಗಳ ಮುನ್ನಡೆ | IND vs NZ Test

 IND vs NZ Test
ಕೆ.ಎಲ್​ ಶತಕ, 2 ರನ್​ನಿಂದ ಗಿಲ್‌ಗೆ ಶತಕ ಮಿಸ್! ಕಿವೀಸ್ ವಿರುದ್ಧ ಭಾರತಕ್ಕೆ 118 ರನ್‌ಗಳ ಮುನ್ನಡೆ | IND vs NZ Test
Published on: 

IND vs NZ Test: ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಕ್ತಾಯಗೊಂಡಿದ್ದು, ಟೀಮ್​ ಇಂಡಿಯಾ ಬ್ಯಾಟರ್​ಗಳು ತಮ್ಮ ಪ್ರಾಬಲ್ಯವನ್ನು ಸಾಧಿಸಿದ್ದಾರೆ.

ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 486 ರನ್ ಗಳಿಸಿದ್ದು, ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್ ಮೊತ್ತವನ್ನು ಹಿಂದಿಕ್ಕಿ 118 ರನ್‌ಗಳ ಮುನ್ನಡೆ ಸಾಧಿಸಿದೆ. ಕನ್ನಡಿಗ ಕೆ.ಎಲ್. ರಾಹುಲ್ (136) ಭರ್ಜರಿ ಶತಕ ದಾಖಲಿಸಿದರೆ, ನಾಯಕ ಶುಭ್‌ಮನ್ ಗಿಲ್ (98) ಕೇವಲ 2 ರನ್​ನಿಂದ ಶತಕ ಮಿಸ್​ ಮಾಡಿಕೊಂಡರು. ಇನ್ನುಳಿದಂತೆ, ಯಶಸ್ವಿ ಜೈಸ್ವಾಲ್​ (85), ದೇವದತ್ತ ಪಡಿಕ್ಕಲ್​ (80) ಸ್ಫೋಟಕ ಇನ್ನಿಂಗ್ಸ್ ನೀಡಿದರೆ, ರಿಷಭ್ ಪಂತ್ ಅವರ ಅಜೇಯ 55 ರನ್ ತಂಡದ ಒಟ್ಟು ಮೊತ್ತವನ್ನು ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಕನ್ನಡಿಗರ ಭರ್ಜರಿ ಜತೆಯಾಟ

ಮೂರನೇ ದಿನದಾಟವನ್ನು ಒಂದು ವಿಕೆಟ್ ನಷ್ಟಕ್ಕೆ 142 ರನ್‌ಗಳಿಂದ ಆರಂಭಿಸಿದ ಟೀಮ್ ಇಂಡಿಯಾಗೆ ಕೆ.ಎಲ್. ರಾಹುಲ್ ಮತ್ತು ದೇವದತ್ ಪಡಿಕ್ಕಲ್ ಉತ್ತಮ ಆರಂಭ ನೀಡಿದರು. ಇಬ್ಬರೂ ಎರಡನೇ ವಿಕೆಟ್‌ಗೆ 165 ರನ್‌ಗಳ ಜತೆಯಾಟವಾಡಿ, ತಂಡದ ಮೊತ್ತವನ್ನು ಡಬಲ್​ ಮಾಡಿದರು. ಅತ್ಯುತ್ತಮ ಲಯದಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್, 175 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 80 ರನ್ ಸಿಡಿಸಿದರು.

ಮತ್ತೊಂದೆಡೆ, ತಾಳ್ಮೆಯಿಂದಲೇ ಕ್ರೀಸ್​ನಲ್ಲಿ ಆಟವಾಡಿದ ರಾಹುಲ್, 290 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಭರ್ಜರಿ 136 ರನ್ ಬಾರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಅಮೋಘ ಶತಕ ದಾಖಲಿಸಿ ತಂಡಕ್ಕೆ ಬಲ ತುಂಬಿದ್ದಲ್ಲದೇ, ತಮ್ಮ ಹೆಸರಿಗೆ ಮತ್ತೊಂದು ದಾಖಲೆಯನ್ನು ಸೇರಿಸಿಕೊಂಡಿದ್ದಾರೆ.

Also Read
ಆಸೆಯಂತೆ ಅಮೆರಿಕದಲ್ಲಿ ಸಿಕ್ತು ಕೈತುಂಬ ಸಂಬಳದ ಕೆಲಸ! ವಿಧಿಯ ಕ್ರೂರ ಆಟ ಒಂದೇ ವಾರಕ್ಕೆ ಉಸಿರು ಚೆಲ್ಲಿದ ಭಾರತೀಯ ಯುವಕ | Accident
 IND vs NZ Test

ಮೊದಲ ಇನಿಂಗ್ಸ್‌ನಲ್ಲಿ ಕಿವೀಸ್​ 368 ರನ್

ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 368 ರನ್‌ಗೆ ಆಲೌಟ್ ಆಯಿತು. ಹೆನ್ರಿ ನಿಕೋಲ್ಸ್ ಅಜೇಯ 175 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 118 ರನ್‌ಗಳ ಅಮೋಘ ಕೊಡುಗೆ ನೀಡಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಬಳಿಸಿದರೆ, ಆಕಾಶ್ ದೀಪ್ 3, ಅನ್ಶುಲ್ ಕಾಂಬೋಜ್ 2 ಮತ್ತು ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದರು.

ಇಂದು ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 486/4 ರನ್ ಗಳಿಸಿ, 118 ರನ್‌ಗಳ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಾಟದಲ್ಲಿ ಈ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿ ನ್ಯೂಜಿಲೆಂಡ್ ಮೇಲೆ ಒತ್ತಡ ಹೇರುವ ಗುರಿಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ ಎಂಬುದಂತು ಖಚಿತ,(ಏಜೆನ್ಸೀಸ್).