ಆಸೆಯಂತೆ ಅಮೆರಿಕದಲ್ಲಿ ಸಿಕ್ತು ಕೈತುಂಬ ಸಂಬಳದ ಕೆಲಸ! ವಿಧಿಯ ಕ್ರೂರ ಆಟ ಒಂದೇ ವಾರಕ್ಕೆ ಉಸಿರು ಚೆಲ್ಲಿದ ಭಾರತೀಯ ಯುವಕ | Accident

 Accident
ಆಸೆಯಂತೆ ಅಮೆರಿಕದಲ್ಲಿ ಸಿಕ್ತು ಕೈತುಂಬ ಸಂಬಳದ ಕೆಲಸ! ಆದ್ರೆ, ವಿಧಿಯ ಕ್ರೂರ ಆಟಕ್ಕೆ ಉಸಿರು ಚೆಲ್ಲಿದ ಭಾರತೀಯ ಯುವಕ | Accident
Published on: 

ಅಮೆರಿಕ: ನ್ಯೂಯಾರ್ಕ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡಿನ ಈರಮಲ್ಲ ಸಾಯಿ ತೇಜ (25) ಎಂಬ ಯುವಕ ದಾರುಣವಾಗಿ ಸಾವನ್ನಪ್ಪಿದ್ದಾರೆ.

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಸಾಯಿ ತೇಜ, ವಿದ್ಯಾಭ್ಯಾಸ ಮುಗಿಸಿದ ಬಳಿಕ ಆಸೆ ಪಟ್ಟಂತೆ ಕೇವಲ ಒಂದು ವಾರದ ಹಿಂದಷ್ಟೇ ಕೈತುಂಬ ಸಂಬಳ ಬರುವಂತ ಒಂದೊಳ್ಳೆ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದರು. ಆದರೆ, ದುರ್ವೀಧಿಯ ಅಟ್ಟಹಾಸಕ್ಕೆ ಕೆಲಸ ಸಿಕ್ಕ ಒಂದು ವಾರಕ್ಕೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಇದೀಗ ಹೆತ್ತವರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಪೊಲೀಸರ ಪ್ರಕಾರ, ಬುಧವಾರ ಸಂಜೆ 6:30ರ ಸುಮಾರಿಗೆ ನ್ಯೂಯಾರ್ಕ್ ಸ್ಟೇಟ್ ಥ್ರೂವೇ (ಇಂಟರ್‌ಸ್ಟೇಟ್ 90) ರಸ್ತೆಯಲ್ಲಿ, ಕನಾಜೋಹಾರಿ ಬಳಿ ಸಾಯಿ ತೇಜ ಅವರ ವಾಹನದ ಅಡ್ಡಲಾಗಿ ಇದ್ದಕ್ಕಿದ್ದಂತೆ ಜಿಂಕೆಯೊಂದು ಬಂದಿದೆ. ಈ ವೇಳೆ, ನಿಯಂತ್ರಣ ತಪ್ಪಿ, ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಸಾಯಿ ತೇಜ ಕಾರು ದಿಢೀರ್​ ಇಂಜಿನ್​ ಆಫ್​ ಆಗಿದೆ. ಏನಾಯಿತು ಎಂದು ನೋಡುವಷ್ಟರಲ್ಲೇ, ಹಿಂದಿನಿಂದ ವೇಗವಾಗಿ ಬಂದ ಟ್ರಕ್​ವೊಂದು, ಸಾಯಿ ತೇಜ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅದರ ಬೆನ್ನಲ್ಲೇ, ಇನ್ನೂ ಎರಡು ವಾಹನಗಳು ಡಿಕ್ಕಿ ಹೊಡೆದಿವೆ.

Also Read
ತಂದೆ ಬದುಕಿರುವಾಗಲೇ ಮಗನಿಂದ ಶವಪೆಟ್ಟಿಗೆ ರೆಡಿ! ಪುಟ್ಟ ಬಾಲಕನ ಈ ವಿಚಿತ್ರ ಹವ್ಯಾಸದ ಹಿಂದಿದೆ ರೋಚಕ ಸ್ಟೋರಿ | Coffin Box
 Accident

ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಯಿ ತೇಜ ಅವರನ್ನು ಪೊಲೀಸರು ಕೂಡಲೇ ಸೇಂಟ್ ಮೇರಿಸ್ ಆಸ್ಪತ್ರೆಗೆ ಸಾಗಿಸಿದ್ದೇ ಆದರೂ, ಜೀವ ಉಳಿಸಲು ವೈದ್ಯರಿಂದ ಸಾಧ್ಯವಾಗಲಿಲ್ಲ. ಅದಾಗಲೇ, ದಾರಿ ಮಧ್ಯೆಯೇ ತೇಜ ಪ್ರಾಣ ಹೋಗಿರುವುದಾಗಿ ದೃಢಪಡಿಸಿದರು. ಸಾಯಿ ತೇಜ ಅವರ ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿ, ಸ್ಥಿತಿ ಚಿಂತಾಜನಕ ಎಂದ ಕೂಡಲೇ, ಹೆಲಿಕಾಪ್ಟರ್ ಮೂಲಕ ಅಲ್ಬನಿ ಮೆಡಿಕಲ್ ಸೆಂಟರ್‌ಗೆ (Albany Medical Center) ರವಾನಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ,(ಏಜೆನ್ಸೀಸ್).