ನಡುರಾತ್ರಿ ಪಟಾಕಿ ಅಬ್ಬರಕ್ಕೆ ನಟಿ ರಮ್ಯಾ ಗರಂ: ಬೆಂಗಳೂರು ಕಮಿಷನರ್, ಗೃಹ ಸಚಿವರಿಗೆ ದೂರು ಸಲ್ಲಿಸಿದ ಮಾಜಿ ಸಂಸದೆ! Actress Ramya

ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ನಡುರಾತ್ರಿ ಪಟಾಕಿ, ಡಿಜೆ ಹಾವಳಿ ವಿರುದ್ಧ ನಟಿ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಆಯುಕ್ತರು ಹಾಗೂ ಗೃಹ ಸಚಿವರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
Actress and former MP Ramya has expressed her outrage—and filed a complaint with the Police Commissioner—after firecrackers were burst and DJ music was played at 2:00 AM at Fun World in Bengaluru, in violation of a Supreme Court order; she reported the incident by calling 112.
ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ನಡುರಾತ್ರಿ 2 ಗಂಟೆಗೆ ಪಟಾಕಿ ಸಿಡಿಸಿ ಡಿಜೆ ಹಾಕಿದ್ದರ ವಿರುದ್ಧ ನಟಿ, ಮಾಜಿ ಸಂಸದೆ ರಮ್ಯಾ 112 ಗೆ ಕರೆ ಮಾಡಿ ಆಕ್ರೋಶ ಹೊರಹಾಕಿದ್ದು, ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
Published on: 

ಬೆಂಗಳೂರು: ಹಬ್ಬದ ಹೆಸರಿನಲ್ಲಿ ಮೋಜು-ಮಸ್ತಿ ಮಾಡುತ್ತಾ, ನಡುರಾತ್ರಿ ಪಟಾಕಿ ಸಿಡಿಸಿ, ದೊಡ್ಡದಾಗಿ ಹಾಡನ್ನು ಹಾಕಿ ಸುತ್ತಲಿನ ವಾತಾವರಣವನ್ನು ಕದಡಿದ ಹಿನ್ನಲೆ ಸ್ಯಾಂಡಲ್​ವುಡ್​ ನಟಿ, ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಜನನಿಬಿಡ ಪ್ರದೇಶವಾದ ಫನ್​ ವರ್ಲ್ಡ್​ನಲ್ಲಿ ಮದ್ಯರಾತ್ರಿ 2 ಗಂಟೆ ಸುಮಾರಿಗೆ ಪಟಾಕಿ ಸಿಡಿಸಿ ದಸರಾವನ್ನು ಆಚರಿಸಿರುವ ಘಟನೆ ನಟಿ ರಮ್ಯಾ ಅವರ ಕೋಪಕ್ಕೆ ಕಾರಣವಾಗಿದ್ದು, ಸುಪ್ರೀಂ ಕೋರ್ಟ್​ ಆದೇಶದ ಪ್ರಕಾರ, ರಾತ್ರಿ 10 ಗಂಟೆ ನಂತರ ಯಾವುದೇ ರೀತಿಯ ಪಟಾಕಿ, ಸಿಡಿಮದ್ದು ಸಿಡಿಸುವುದು ಹಾಗೂ ಲೌಡ್​​ಸ್ಪೀಕರ್​ಗಳಲ್ಲಿ ಹಾಡನ್ನು ಹಚ್ಚುವುದು ಕಾನೂನುಬಾಹಿರವಾಗಿದೆ. ಆದರೆ, ಇಲ್ಲಿ ಬೆಳಿಗ್ಗೆ 6 ಗಂಟೆ ವರೆಗೆ ದೊಡ್ಡದಾಗಿ ಹಾಡನ್ನು ಹಚ್ಚಿ, ಪಟಾಕಿ ಸಿಡಿಸಿದ್ದಾರೆಂದು ರಮ್ಯಾ ಆರೋಪಿಸಿದ್ದಾರೆ.

ಹೀಗೆ ಮಾಡುವುದು ಮೊದಲನೆಯದಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್​ ನಿಗಧಿತ ಸಮಯದಲ್ಲಿ ಮಾತ್ರ ಪಟಾಕಿ ಮತ್ತು ಹಾಡನ್ನು ಹಚ್ಚಲು ಅನುಮತಿ ನೀಡಿದೆ. ಇಲ್ಲಿ ಇದನ್ನು ಗಾಳಿಗೆ ತೂರಲಾಗಿದೆ. ಅಂತಯೇ, ಇದರಿಂದ ವೃದ್ಧರು, ವಯಸ್ಸಾದವರ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ ಎಂಬ ಕನಿಷ್ಟ ಜ್ಞಾನ ಇರಬೇಕು. ಮಾರನೇ ದಿನ ಶಾಲೆಗೆ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವವರಿಗೆ ಈ ಘಟನೆಯಿಂದ ತುಂಬಾ ತೊಂದರೆಯಾಗಿದೆ ಎಂದು ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

Also Read
"ಲಾಡೆನ್ ಸತ್ತ ದೇಶದಲ್ಲೇ ದಾವೂದ್ ಇದ್ದಾನೆ!"ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮುಖವಾಡ ಕಳಚಿದ ಭಾರತ! Dawood Ibrahim
Actress and former MP Ramya has expressed her outrage—and filed a complaint with the Police Commissioner—after firecrackers were burst and DJ music was played at 2:00 AM at Fun World in Bengaluru, in violation of a Supreme Court order; she reported the incident by calling 112.

ಪೊಲೀಸ್ ದೂರು ನೀಡಿದ ಪದ್ಮಾವತಿ!

ಇನ್ನೂ ಈ ಘಟನೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ನಟಿ, ಮಾಜಿ ಸಂಸದೆ ರಮ್ಯಾ, ನಾನು ಬೆಳಗ್ಗಿನ ಜಾವ 2.30 ರ ಸುಮಾರಿಗೆ ಪೊಲೀಸ್​ ಸಹಾಯವಾಣಿ 112 ಗೆ ಕರೆ ಮಾಡಿ ಈ ಘಟನೆಯನ್ನು ವರದಿ ಮಾಡಿದ್ದೇನೆ. ಹಾಗೆಯೇ ಪೊಲೀಸ್​ ಆಯುಕ್ತರಲ್ಲಿ ಕೂಡ ದೂರನ್ನು ಸಲ್ಲಿಸಿದ್ದೇನೆ. ರಾಜ್ಯ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಅವರು ಈ ಘಟನೆ ಹಾಗೂ ನಾನು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ಜತೆಗೆ ಈ ಘಟನೆಗಳು ಇನ್ನೊಮ್ಮೆ ನಡೆಯದಂತೆ ನೋಡಿಕೊಳ್ಳಬೇಕೆಂದು ವಿನಂತಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net