"ಲಾಡೆನ್ ಸತ್ತ ದೇಶದಲ್ಲೇ ದಾವೂದ್ ಇದ್ದಾನೆ!"ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಮುಖವಾಡ ಕಳಚಿದ ಭಾರತ! Dawood Ibrahim

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತದಲ್ಲಿದ್ದಾನೆ ಎಂಬ ವಿಶ್ವಸಂಸ್ಥೆ ವರದಿಯನ್ನು ತಿರಸ್ಕರಿಸಿದ ಭಾರತ, ಆತ ಪಾಕಿಸ್ತಾನದಲ್ಲೇ ಆಶ್ರಯ ಪಡೆದಿದ್ದಾನೆ ಎಂದು ಜಾಗತಿಕ ವೇದಿಕೆಯಲ್ಲಿ ಸಾಕ್ಷಿ ಸಮೇತ ಗುಡುಗಿದೆ.
Raghu Puri, a secretary in India’s Permanent Mission to the United Nations General Assembly, exposed Pakistan’s duplicity by condemning a false report regarding Dawood Ibrahim.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ನಿಯೋಗದ ಕಾರ್ಯದರ್ಶಿ ರಾಘೂ ಪುರಿ ಅವರು ದಾವೂದ್ ಇಬ್ರಾಹಿಂ ಕುರಿತ ತಪ್ಪು ವರದಿಯನ್ನು ಖಂಡಿಸಿ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಿದರು.
Published on: 

ನವದೆಹಲಿ: ಭಾರತಕ್ಕೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರತದಲ್ಲೇ ನೆಲೆಸಿದ್ದಾನೆಂಬ ಸುಳ್ಳು ಮಾಹಿತಿಯನ್ನು ತಮ್ಮ ವರದಿಯಲ್ಲಿ ನಮೂದಿಸಿದ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಜಗತ್ತಿನ ಎದುರು ಮುಖಭಂಗ ಅನುಭವಿಸಿದ್ದಾರೆ. ಈ ಬೇಜವಾಬ್ದಾರಿ ವರದಿಗೆ ಭಾರತದ ಪ್ರತಿನಿಧಿ ವಿಶ್ವಸಂಸ್ಥೆಯ ವೇದಿಕೆಯಲ್ಲೇ ಬೆಂಡೆತ್ತಿದ್ದು, ತಪ್ಪು ಮಾಹಿತಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗುಡುಗಿದೆ.

ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರ ಬೆನ್ ಸಾಲ್, ಜುಲೈನಲ್ಲಿ ಸಲ್ಲಿಸಿದ ವರದಿಯಲ್ಲಿ ಈ ಮಹಾ ಎಡವಟ್ಟು ಮಾಡಿದ್ದಾರೆ. ಜಾಗತಿಕ ಮಟ್ಟದ ಸಂಸ್ಥೆಯೊಂದರ ವರದಿಯಲ್ಲಿ ನಡೆದಿರುವ ಈ ತಪ್ಪನ್ನು ಭಾರತ ಸಹಿಸಿಕೊಂಡಿಲ್ಲ. ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗದ ಕಾರ್ಯದರ್ಶಿ ರಾಘೂ ಪುರಿ ಅವರು ಸಾಕ್ಷಿ ಸಮೇತ ವರದಿಗಾರನ ಬಣ್ಣ ಬಯಲು ಮಾಡಿದ್ದಾರೆ.

ಸತ್ಯ ಹೇಳ್ತಿದ್ದೀನಿ ಕೇಳ್ರೋ!

ಸಭೆಯಲ್ಲಿ ನೇರವಾಗಿ ಮಾತಿಗಿಳಿದ ರಾಘೂ ಪುರಿ, ದಾಖಲೆಗಳಲ್ಲಿ ತಪ್ಪಾಗಿರುವುದನ್ನು ಸರಿಪಡಿಸುವುದು ನಮ್ಮ ಕರ್ತವ್ಯ. ಈ ವ್ಯಕ್ತಿ (ದಾವೂದ್) 2003 ರಲ್ಲಿ ವಿಶ್ವಸಂಸ್ಥೆಯ ಕಪ್ಪುಪಟ್ಟಿಗೆ ಸೇರುವ ಬಹಳ ಮೊದಲೇ ಭಾರತ ಬಿಟ್ಟು ಓಡಿಹೋಗಿದ್ದಾನೆ. ಆತ ಭಾರತದ ಹೊರಗಿನ ಬೇರೊಂದು ದೇಶದಲ್ಲಿದ್ದಾಗಲೇ ಅಲ್-ಖೈದಾ ಮತ್ತು ಬಿನ್ ಲಾಡೆನ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದಕ್ಕಾಗಿ ಆತನನ್ನು ಈ ಪಟ್ಟಿಗೆ ಸೇರಿಸಲಾಗಿತ್ತು" ಎಂದು ಸ್ಪಷ್ಟಪಡಿಸಿದ್ದಾರೆ.

ಇಷ್ಟಕ್ಕೇ ನಿಲ್ಲಿಸದ ಪುರಿ, ಪಾಕಿಸ್ತಾನದ ಹೆಸರೆತ್ತದೆ ನೇರವಾಗಿ ಚಾಟಿ ಬೀಸಿ, "ದಾವೂದ್ ಇಂದಿಗೂ ಭಾರತಕ್ಕೆ ಬೇಕಾಗಿರುವ ನಂಬರ್ ಒನ್ ಅಪರಾಧಿ. ವಿಶ್ವಸಂಸ್ಥೆಯದ್ದೇ ದಾಖಲೆಗಳ ಪ್ರಕಾರ ಆತ ಎಲ್ಲಿದ್ದಾನೆ ಗೊತ್ತಾ? ಅಮೆರಿಕವನ್ನು ನಡುಗಿಸಿದ್ದ ಒಸಾಮಾ ಬಿನ್ ಲಾಡೆನ್ ಎಲ್ಲಿ ಅಡಗಿ ಕುಳಿತಿದ್ದನೋ, ಎಲ್ಲಿ ಆತನನ್ನು ಹೊಡೆದುರುಳಿಸಲಾಯಿತೋ... ಅದೇ ದೇಶದಲ್ಲೇ ದಾವೂದ್ ಕೂಡ ರಾಜಾರೋಷವಾಗಿ ನೆಲೆಸಿದ್ದಾನೆಂದು ಹೇಳುವ ಮೂಲಕ ಪಾಕಿಸ್ತಾನದಲ್ಲಿ ಉಗ್ರರಿಗೆ ರಕ್ಷಣೆ ಸಿಗುತ್ತಿದೆ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ.

Also Read
ಜೈಲಿನಿಂದ ಹೊರಗೆ ಬರೋ ಹಾಗಿಲ್ಲ, ಪೊಲೀಸರು ಮುಟ್ಟೋ ಹಾಗಿಲ್ಲ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಕಸ್ಟಡಿಗೆ ಸಿಗದಿರಲು ಕಾರಣವೇನು? Lawrence Bishnoi
Raghu Puri, a secretary in India’s Permanent Mission to the United Nations General Assembly, exposed Pakistan’s duplicity by condemning a false report regarding Dawood Ibrahim.

ಪಾಕಿಸ್ತಾನದ ಮುಖವಾಡ ಕಳಚಿದ ಭಾರತ

1993 ರ ಮುಂಬೈ ಸರಣಿ ಬಾಂಬ್ ಸ್ಫೋಟದಿಂದ ಹಿಡಿದು 26/11 ಮುಂಬೈ ದಾಳಿಯವರೆಗೂ ರಕ್ತದೋಕುಳಿ ಹರಿಸಿದ ಉಗ್ರರು ದಶಕಗಳಿಂದ ಪಾಕಿಸ್ತಾನದಲ್ಲೇ ಬೀಡುಬಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯದಿಂದ ಸಿಗುವ ಹಣಕಾಸಿನ ನೆರವು ಕಟ್ ಆಗುವ ಭೀತಿ ಎದುರಾದಾಗ ಮಾತ್ರ ಪಾಕಿಸ್ತಾನ ಇವರ ವಿರುದ್ಧ ಕಣ್ಣೊರೆಸುವ ತಂತ್ರ ಮಾಡುತ್ತದೆ ಎಂಬುದನ್ನು ಭಾರತ ಎತ್ತಿ ತೋರಿಸಿತು. 9/11 ದಾಳಿಯ ಸೂತ್ರಧಾರರು ಬೆಟ್ಟಗುಡ್ಡಗಳಲ್ಲಿ ಅವಿತುಕೊಳ್ಳಲಿಲ್ಲ, ಬದಲಿಗೆ ಪಾಕ್ ಸೇನೆಯ ಕಣ್ಗಾವಲಿನಲ್ಲಿ ಐಷಾರಾಮಿ ಬಂಗಲೆಗಳಲ್ಲಿ ಆಶ್ರಯ ಪಡೆದಿದ್ದರು ಎಂಬ ಇತಿಹಾಸವನ್ನು ಪುರಿ ಸಭೆಯ ಗಮನಕ್ಕೆ ತಂದಿದ್ದಾರೆ.

ವರದಿಯಲ್ಲಿ ಎದ್ದು ಕಾಣುತ್ತಿದೆ ಪಕ್ಷಪಾತ

ವರದಿಯ ಅರೆಬರೆ ಮಾಹಿತಿಯನ್ನು ತರಾಟೆಗೆ ತೆಗೆದುಕೊಂಡ ಭಾರತ, 2003ರಲ್ಲಿ ಕೇವಲ ಅಲ್-ಖೈದಾ ಸಂಪರ್ಕಕ್ಕಾಗಿ ಡಿ-ಕಂಪನಿ ಮುಖ್ಯಸ್ಥನನ್ನು ಪಟ್ಟಿಗೆ ಸೇರಿಸಲಾಯಿತು ಎಂದು ಬರೆದರೆ ಅದು ಅರ್ಧ ಸತ್ಯವಷ್ಟೇ. 1993ರಿಂದ ಆತ ಭಾರತದಲ್ಲಿ ನಡೆಸಿದ ಭೀಕರ ಕೃತ್ಯಗಳಿಗಾಗಿ ನಮಗೆ ಬೇಕಾಗಿದ್ದಾನೆ ಎಂಬುದನ್ನು ವರದಿಯಲ್ಲಿ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ವಿಶೇಷ ಜವಾಬ್ದಾರಿ ಹೊತ್ತ ಅಧಿಕಾರಿಗಳ ಇಂತಹ ಅಸಮರ್ಥತೆ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೇ ಧಕ್ಕೆ ತರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Also Read
ರಾವಣ ದಹನ ವೇಳೆ ರಣರಂಗವಾದ ಮೈದಾನ: ಜನರತ್ತ ನುಗ್ಗಿಬಂದ ರಾಕೆಟ್‌, ಪಟಾಕಿ; ವಿಡಿಯೋ ವೈರಲ್​! Ravana Dahan
Raghu Puri, a secretary in India’s Permanent Mission to the United Nations General Assembly, exposed Pakistan’s duplicity by condemning a false report regarding Dawood Ibrahim.

ಕಾಶ್ಮೀರ ಎಂದಿಗೂ ನಮ್ಮದು!

ಇದೇ ವೇಳೆ ಎಂದಿನಂತೆ ಕಾಶ್ಮೀರದ ಕ್ಯಾತೆ ತೆಗೆದ ಪಾಕಿಸ್ತಾನದ ಪ್ರತಿನಿಧಿಗೆ ಭಾರತ ತಕ್ಕ ಶಾಸ್ತಿ ಮಾಡಿದೆ. "ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗ. ಅದು ನಿನ್ನೆ, ಇಂದು, ಎಂದೆಂದಿಗೂ ಭಾರತದ್ದೇ. ತನ್ನ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಸುಳ್ಳು ಪ್ರಚಾರ ಮಾಡುವ ಪಾಕಿಸ್ತಾನದ ಮಾತುಗಳಿಗೆ ಹೆಚ್ಚು ಬೆಲೆ ಕೊಟ್ಟು ಸಮಯ ವ್ಯರ್ಥ ಮಾಡಲು ನಾನು ಬಯಸುವುದಿಲ್ಲ, ಎಂದು ಹೇಳುವ ಮೂಲಕ ಭಾರತ ಚರ್ಚೆಗೆ ಪೂರ್ಣವಿರಾಮ ಹಾಕಿತು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net