"ಮುಂದಿನ 5-10 ವರ್ಷಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ": ಬಾಲಚಂದ್ರ ಜಾರಕಿಹೊಳಿ ಹೊಸ ಬಾಂಬ್! Balachandra Jarkiholi

BJP MLA Balachandra Jarkiholi has made a statement regarding a separate North Karnataka state.
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ
Published on: 

ಬೆಳಗಾವಿ: ಮೈಸೂರು ರಾಜ್ಯ, ಕರ್ನಾಟಕ ಎಂದು ಮರುನಾಮರಣಗೊಂಡು ಕರ್ನಾಟಕ ಏಕೀಕರಣವಾದ ದಿನದಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಕೂಗ ಕಾಲಕಾಲಕ್ಕೆ ಕೇಳಿ ಬರುತ್ತಲೇ ಇರುತ್ತದೆ.

ಈದೀಗ, ಅರಬಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಮಾತ್ರ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವೆಂದು ನೀಡಿರುವ ಹೇಳಿಕೆ ರಾಜಕೀಯ ರಂಗದಲ್ಲಿ ಹೊಸ ಚರ್ಚೆಗೆ ವೇದಿಕೆ ನಿರ್ಮಿಸಿದೆ.

ಉಮೇಶ್​ ಕತ್ತಿ ಮಾತು ನಿಜ!

ಬೆಳಗಾವಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ದಿವಂಗತ ಶಾಸಕ ಉಮೇಶ್​ ಕತ್ತಿ ಅವರು ಯಾವಾಗಲೂ ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಬೇಡಿಕೆ ಇಡುತ್ತಿದ್ದರು. ಅವರ ಮಾತು ಕಠೋರವೆನಿಸಿದರು. ನಮ್ಮ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯ ಪಡೆಯುವುದು ಅನಿವಾರ್ಯವಾಗಿದ್ದು, ಮುಂದಿನ 5-10 ವರ್ಷಗಳಲ್ಲಿ ಇದು ಸಾಕಾರವಾಗಲಿದೆ ಎಂದಿದ್ದಾರೆ.

ಅಭಿವೃದ್ಧಿಯೇ ಇಲ್ಲದಾಗಿದೆ!

ನಮ್ಮ ಭಾಗಕ್ಕೆ ಸರಿಯಾದ ನಿರಾವರಿ ಇನ್ನು ಲಭಿಸಿಲ್ಲ, ನಮ್ಮಲ್ಲಿ ಉನ್ನತ ಮಟ್ಟದ ಕೈಗಾರಿಕೆಗಳಿಲ್ಲ. ನಮ್ಮ ಪ್ರದೇಶದ ಜನ ವಲಸೆ ಹೋಗುವುದೇ ಆಗಿದೆ. ಹಾಗೆಂದು ಯಾವ ಸರ್ಕಾರದಲ್ಲೂ ಕೆಲಸ ಆಗಿಯೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಆದರೆ ನಮ್ಮ ಭಾಗದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯ ಆಗದಿರುವುದು ನಿಜವಾಗಿದೆ.

Also Read
ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ! Pramod Muthalik
BJP MLA Balachandra Jarkiholi has made a statement regarding a separate North Karnataka state.

ನಮ್ಮ ಭಾಗದ ಸಮಸ್ಯೆಗಳನ್ನು ಹೇಳಿಕೊಳ್ಳುವ ಉದ್ದೇಶದಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ನಾವು ನಮ್ಮ ಸಮಸ್ಯೆಗಳನ್ನು ಸರ್ಕಾರದ ಮನ ಮುಟ್ಟಿಸಲು ಪ್ರಯತ್ನ ಮಾಡುತ್ತೇವೆಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ತೆವಲಿಗೆ ಮಾತನಾಡಬೇಡಿ!

ಇನ್ನು ಬಾಲಚಂದ್ರ ಜಾರಕಿಹೊಳಿ ಪ್ರತ್ಯೇಕ ಉತ್ತರ ಕಾರ್ನಾಟಕ ಹೇಳಿಕೆಗೆ ಕೌಂಟರ್​ ಕೊಟ್ಟಿರುವ ಸಚಿವ ಹೆಚ್​. ಸಿ. ಬಾಲಕೃಷ್ಣ, ಇವರ ಡಬ್ಬಲ್​ ಇಂಜಿನ್​ ಸರ್ಕಾರವಿದ್ದಾಗ ಏಕೆ ಅಭಿವೃದ್ಧಿ ಮಾಡಲಿಲ್ಲ, ಸುಮ್ಮನೆ ಬಾಯಿ ತೆವಲಿಗೆ ಪ್ರತ್ಯೇಕ ರಾಜ್ಯ ಎಂದು ಹೇಳುತ್ತಾರೆಂದು ತಿರುಗೇಟನ್ನು ನೀಡಿದ್ದಾರೆ.

ತಮ್ಮ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲವೆಂದು ಸುಳ್ಳು ಹೇಳಬಾರದು. ಸಿಎಂ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 50 ಕೋಟಿ ಅನುದಾನ ನೀಡಲಾಗಿದೆ. ಅಲ್ಲದೆ ಪುರಸಭೆಗೆ 40 ಕೋಟಿ, ನಗರಸಭೆಗೆ 60 ಕೋಟಿ ಅನುದಾನವನ್ನು ನಮ್ಮ ಸರ್ಕಾರ ನೀಡಿದೆ ಎಂದು ಬಾಲಕೃಷ್ಣ ತಿಳಿಸಿದ್ದಾರೆ.