ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ! Pramod Muthalik

Sri Ram Sene chief Pramod Muthalik issuing a warning to the state government during a press conference held in Hosapete.
ಹೊಸಪೇಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್.
Published on: 

ವಿಜಯನಗರ: ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದುಕೊಂಡರೆ ರಾಜ್ಯಾದ್ಯಂತ ಭಾರೀ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಎಚ್ಚರಿಕೆ ನೀಡಿದ್ದಾರೆ.

ಹೊಸಪೇಟೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಇವೆರಡು ಕಾಯಿದೆಗಳನ್ನು ಸರ್ಕಾರ ಹಿಂಪಡೆಯುವ ಸಾಧ್ಯತೆಯಿದ್ದು, ಒಂದು ವೇಳೆ ಹಿಂಪಡೆದರೆ ನಾವು ಸುಮ್ಮನೆ ಕುರುವುದಿಲ್ಲ, ರಾಜ್ಯದೆಲ್ಲಡೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಕ್ರಿಸ್​ಮಸ್​ಗೆ ಒಂದೇ ದಿನ ರಜೆ ಸಾಕು!

ಕ್ರಿಸ್​ಮಸ್​ ಹಬ್ಬಕ್ಕೆ ಸರ್ಕಾರ ಕೇವಲ ಒಂದು ದಿನದ ರಜೆಯನ್ನು ನೀಡುತ್ತಾ ಬಂದಿದೆ. ಆದರೆ, ಕೆಲ ಮಿಷನರಿ ಆಡಳಿತವಿರುವ ಶಾಲೆಗಳಲ್ಲಿ ದಸರಾ ರಜೆಯನ್ನು ಮೊಟಕುಗೊಳಿಸಿ, ಕ್ರಿಸ್​ಮಸ್​ ಸಂದರ್ಭದಲ್ಲಿ ಹತ್ತು ದಿನಗಳ ರಜೆಯನ್ನು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಈ ಕೂಡಲೇ ನಿಲ್ಲಿಸಬೇಕು.

ಕ್ರಿಶ್ಚಿಯನ್ ಮಿಷನರಿಗಳಿಗೆ ಮತಾಂತರವೇ ಮೂಲ ಉದ್ದೇಶವಾಗಿದ್ದು, ಅವರ ಮನಸ್ಸಿಗೆ ಬಂದಂತೆ ರಜೆ ನೀಡಲು ಸರ್ಕಾರ ಅವಕಾಶ ನೀಡಬಾರದು. ಈ ಬೆಳವಣಿಗೆ ಇನ್ನೊಮ್ಮೆ ಕಂಡುಬಂದಲ್ಲಿ ಪ್ರತಿಭಟನೆ ನಡೆಯುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

Also Read
ಪುಷ್ಕರ ಮೇಳದಲ್ಲಿ ದೈತ್ಯ ಪ್ರಾಣಿಗಳನ್ನೇ ಮೀರಿಸಿದ 2 ಅಡಿಯ 'ಪಿಂಕಿ': ಈ ಪುಟಾಣಿ ಎಮ್ಮೆಯ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ! Pinky Buffalo
Sri Ram Sene chief Pramod Muthalik issuing a warning to the state government during a press conference held in Hosapete.

ವಕ್ಫ್​ ಆಸ್ತಿ ಹೇಗೆ ಮಾಡಿದಿರಿ?

ಇನ್ನು ಹೊಸಪೇಟೆಯಲ್ಲಿರುವ ಸುಬೇದಾರ್ ಬಾವಿ ಮತ್ತು ಅಲ್ಲಿದ್ದ ಶಾಲೆಯೊಂದನ್ನು ವಕ್ಫ್ ಬೋರ್ಡ್​ಗೆ ವರ್ಗಾವಣೆ ಮಾಡಿ ಅದನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು. ಅದಕ್ಕೆ ಸರಿಯಾದ ಪ್ರತಿಕ್ರಿಯೆ ದೊರೆಯದ ಪಕ್ಷದಲ್ಲಿ ನಮ್ಮ ಹೋರಾಟ ಉಗ್ರವಾಗಲಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಮೊದಲಿನಿಂದಲೂ ಅಲ್ಪಸಂಖ್ಯಾತರ ಓಲೈಕೆ ಮಾಡಿಕೊಂಡೇ ಬಂದಿದೆ. ಆದರೆ ಈ ಗೋ ಹತ್ಯೆ ನಿಷೇಧ ಹಾಗೂ ಮಂತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆದರೆ ಮಾತ್ರ ನಾವು ಸುಮ್ಮನಿರಲು ಸಾಧ್ಯವೇ ಇಲ್ಲವೆಂದುಇ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಗುಡುಗಿದ್ದಾರೆ.