ವಿಜಯವಾಣಿ ವರದಿ ಪರಿಣಾಮ: ಸರ್ವರ್ ಸಮಸ್ಯೆ ಬಗೆಹರಿಸಿ ಅಧಿಕಾರಿಗಳಿಗೆ ರಿಜ್ವಾನ್ ಅರ್ಷದ್ ತಾಕೀತು

ಸರ್ವರ್ ಮೇಲ್ವಿಚಾರಣೆ ನಡೆಸುತ್ತಿರುವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಎನ್‌ಐಸಿಯವರಿಗೆ ಮನವಿ ಮಾಡಿದ್ದೇವೆ. ಏಕಕಾಲದಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕ ಮತ್ತು ಮಾಲೀಕರ ಆಪ್ತ ಸಹಾಯಕರು ಲಾಗಿನ್ ತೆರೆದು ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
minister
ಸಚಿವ ರಿಜ್ವಾನ್​ ಅರ್ಷದ್​
Published on: 

ಬೆಂಗಳೂರು: (resolve server issue) ಮುಂದಿನ 3 ದಿನ ರಜೆ ಇದ್ದರೂ ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಸುಗಮವಾಗಿ ಪಡಿತರ ವಿತರಣೆ ನಡೆಯುವಂತೆ ಮೇಲ್ವಿಚಾರಣೆ ನಡೆಸಬೇಕೆಂದು ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಪಡಿತರಕ್ಕೆ ಸರ್ವರ್ ಕಂಟಕ’ ಶೀರ್ಷಿಕೆಯಡಿ ನ.26ರಂದು ವಿಜಯವಾಣಿಯಲ್ಲಿ ಸುದ್ದಿ ಪ್ರಕಟಗೊಂಡ ಬಳಿಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವರು, ಪಡಿತರ ವಿತರಣೆಗೆ ಅಡ್ಡಿಯಾಗಿರುವ ಸರ್ವರ್ ಸಮಸ್ಯೆಯನ್ನು ತಕ್ಷಣ ನಿವಾರಿಸಬೇಕು. ಮುಂದಿನ 3 ದಿನ ಸರ್ಕಾರಿ ರಜೆಗಳಿದ್ದರೂ ಯಾವೊಬ್ಬ ಅಧಿಕಾರಿಯೂ ಕರ್ತವ್ಯ ಗೈರಾಗಬಾರದು. ನ.30ರೊಳಗೆ ಪಡಿತರ ವಿತರಣೆ ಪ್ರಮಾಣ ಶೇ.100 ಗುರಿ ಮುಟ್ಟಬೇಕು ಎಂದು ತಾಕೀತು ಮಾಡಿದ್ದಾರೆ.

ಸರ್ವರ್ ಮೇಲ್ವಿಚಾರಣೆ ನಡೆಸುತ್ತಿರುವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ತಾಂತ್ರಿಕ ಸಮಸ್ಯೆ ಬಗೆಹರಿಸುವಂತೆ ಎನ್‌ಐಸಿಯವರಿಗೆ ಮನವಿ ಮಾಡಿದ್ದೇವೆ. ಏಕಕಾಲದಲ್ಲಿ ನ್ಯಾಯಬೆಲೆ ಅಂಗಡಿಯ ಮಾಲೀಕ ಮತ್ತು ಮಾಲೀಕರ ಆಪ್ತ ಸಹಾಯಕರು ಲಾಗಿನ್ ತೆರೆದು ಕಾರ್ಡ್‌ದಾರರಿಗೆ ಪಡಿತರ ವಿತರಿಸಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Also Read
'ಅಂತ್ಯಕ್ರಿಯೆ'ಗೂ ಬಂತು ಪ್ರೀ-ಬುಕ್ಕಿಂಗ್! ಶವ ಹೊರುವವರಿಂದ ಹಿಡಿದು ಪಿಂಡದಾನದವರೆಗೆ ಫುಲ್ ಪ್ಯಾಕೇಜ್ ಸೌಲಭ್ಯ! Funeral Pre Booking
minister

ಸರ್ಕಾರಕ್ಕೆ ಅಶೋಕ್ ತರಾಟೆ

ಸರ್ವರ್ ಸಮಸ್ಯೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾದ್ಯಂತ ‘ಸರ್ವರ್ ಸಮಸ್ಯೆ’ಯಿಂದಾಗಿ ಬಡವರ ಪಾಲಿನ ಪಡಿತರ ವಿತರಣೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಶೇ.50 ರೇಷನ್ ವಿತರಣೆಯೇ ಆಗದೆ ಬಾಕಿ ಉಳಿದಿದೆ. ಬಡವರು ಒಂದು ಹೊತ್ತಿನ ಊಟಕ್ಕಾಗಿ ಕೂಲಿ ಕೆಲಸ ಬಿಟ್ಟು, ವೃದ್ಧರು ಮತ್ತು ಅಂಗವಿಕಲರು ಬೆಳಗ್ಗೆಯಿಂದ ಸಂಜೆಯವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಬಯೋಮೆಟ್ರಿಕ್‌ಗಾಗಿ ಕಾದು ಪರದಾಡುತ್ತಿರುವುದು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಆಹಾರ ರಿಜ್ವಾನ್ ಅರ್ಷದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ’ಯಡಿ ಸಮರ್ಪಕವಾಗಿ ಅಕ್ಕಿ ನೀಡುತ್ತಿದ್ದರೂ, ಅದನ್ನು ಜನರಿಗೆ ತಲುಪಿಸುವ ಕನಿಷ್ಠ ತಾಂತ್ರಿಕ ವ್ಯವಸ್ಥೆಯನ್ನು ನಿರ್ವಹಿಸಲೂ ಯೋಗ್ಯತೆಯಿಲ್ಲ ಎಂದು ಜರಿದಿದ್ದಾರೆ.