ಪಾಕಿಸ್ತಾನ-ಅಫ್ಘಾನಿಸ್ತಾನ ಶಾಂತಿ ಮಾತುಕತೆ ವಿಫಲ: ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆ | Peace Talks

Peace Talks
Published on

ಇಸ್ತಾನ್‌ಬುಲ್‌: ಟರ್ಕಿ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆ(Peace Talks) ಸಂಪೂರ್ಣವಾಗಿ ಮುರಿದು ಬಿದ್ದಿದೆ. ಅಲ್ಲದೆ, ಮೂರು ದಿನಗಳ ಮಾತುಕತೆಗಳ ನಂತರ, ಉಭಯ ದೇಶಗಳು ಯಾವುದೇ ಒಪ್ಪಂದಕ್ಕೆ ಬರಲು ವಿಫಲರಾಗಿದ್ದು, ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.

ಈಗ, ಎರಡೂ ದೇಶಗಳು ವೈಫಲ್ಯಕ್ಕೆ ಪರಸ್ಪರ ದೂಷಿಸುತ್ತಿವೆ. ಈ ಮಾತುಕತೆಗಳನ್ನು ಆಯೋಜಿಸುತ್ತಿದ್ದ ಟರ್ಕಿ ಮತ್ತು ಕತಾರ್ ಅಧಿಕಾರಿಗಳು ಇನ್ನೂ ಪ್ರಗತಿಗಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮಾತುಕತೆಗಳು ಸ್ಥಗಿತಗೊಂಡಿವೆ.

ಸಭೆಗೆ ಕಾರಣವಾದ ಗಡಿ ಸಂಘರ್ಷ

ಕೆಲವು ವಾರಗಳ ಹಿಂದೆ ಎರಡೂ ದೇಶಗಳು ಗಂಭೀರವಾದ ಯುದ್ಧದಂತಹ ಪರಿಸ್ಥಿತಿಯಲ್ಲಿದ್ದ ಕಾರಣ ಈ ಮಾತುಕತೆಗಳು ಕಾರಣವಾಗಿತ್ತು.

ಅಲ್ಲದೆ, ಅಕ್ಟೋಬರ್ 9 ರಂದು ಪಾಕಿಸ್ತಾನವು ಅಫ್ಘಾನಿಸ್ತಾನದ ಮೇಲೆ ವಾಯುದಾಳಿಗಳನ್ನು ನಡೆಸಿದಾಗ ಇದು ಪ್ರಾರಂಭವಾಯಿತು. ಅಲ್ಲದೆ, 100 ಪಾಕಿಸ್ತಾನಿ ಸೈನಿಕರನ್ನು ಕೊಂದ ಸಂಘಟನೆಯಾದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಶಿಬಿರಗಳ ಮೇಲೆ ದಾಳಿ ನಾಶ ಮಾಡಿದ್ದೇವೆ ಎಂದು ಪಾಕ್​ ಹೇಳಿಕೊಂಡಿತ್ತು.

ಅಫ್ಘಾನ್​ ತಾಲಿಬಾನ್‌ನ ಪ್ರತಿಕ್ರಿಯೆ ವೇಗವಾಗಿ ಮತ್ತು ಶಕ್ತಿಯುತವಾಗಿತ್ತು. ತಾಲಿಬಾನ್​ ಗಡಿಯಾದ್ಯಂತ ಬೃಹತ್ ಪ್ರತಿದಾಳಿ ನಡೆಸಿತ್ತು. ವರದಿಗಳ ಪ್ರಕಾರ, ಈ ದಾಳಿಯು ಭೀಕರವಾಗಿತ್ತು. ಒಂದೇ ವಾರಾಂತ್ಯದಲ್ಲಿ 58 ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದೇವೆ ಮತ್ತು 20 ಭದ್ರತಾ ಠಾಣೆಗಳನ್ನು ನಾಶಪಡಿಸಿದ್ದೇವೆ ಎಂದು ತಾಲಿಬಾನ್ ಹೇಳಿಕೊಂಡಿದೆ.

ಈ ಗಡಿ ಸಂಘರ್ಷದಲ್ಲಿ ಹಿಂಸಾಚಾರ ಎಷ್ಟರ ಮಟ್ಟಿಗೆ ನಿಯಂತ್ರಣ ತಪ್ಪಿತ್ತೆಂದರೆ, ಸೌದಿ ಅರೇಬಿಯಾ ಮತ್ತು ಕತಾರ್ ಸೇರಿದಂತೆ ಇತರ ದೇಶಗಳು ಸಹ ಮಧ್ಯಪ್ರವೇಶಿಸಬೇಕಾಯಿತು. ಅಲ್ಲದೆ, ಅಕ್ಟೋಬರ್ 19 ರಂದು ಎರಡೂ ಕಡೆಯವರು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ ನೀಡುವುದರಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನ ಮಾತುಕತೆ ದೋಹಾದಲ್ಲಿ ನಡೆಯಿತು.

ಸಭೆಯಲ್ಲಿ ಆಗಿದ್ದೇನು..?

ಪಾಕ್​-ಅಫ್ಘಾನ್​ ದೋಹಾದಲ್ಲಿ ನಡೆದ ಮಾತುಕತೆಗಳು ಸಕಾರಾತ್ಮಕವಾಗಿ ಕಂಡುಬಂದರೂ, ಎರಡೂ ಕಡೆಯವರು ರಾಜಿ ಮಾಡಿಕೊಳ್ಳಲು ನಿರಾಕರಿಸಿದ ಕೆಲವು ವಿಷಯಗಳ ಮೇಲೆ ಇಸ್ತಾನ್‌ಬುಲ್ ಅಧಿವೇಶನ ಕುಸಿದಿದೆ.

ಅಫ್ಘಾನ್ ತಾಲಿಬಾನ್ ಟಿಟಿಪಿಯ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನವು ದೊಡ್ಡ ಬೇಡಿಕೆಯನ್ನು ಇಟ್ಟಿತ್ತು. ಟಿಟಿಪಿ ದಾಳಿ ಮಾಡಿದಾಗಲೆಲ್ಲಾ ಪಾಕಿಸ್ತಾನವು ಅಫ್ಘಾನ್ ನೆಲದ ಮೇಲೆ ದಾಳಿ ನಡೆಸುವ ಹಕ್ಕನ್ನು ಹೊಂದಿದೆ ಎಂದು ಒಪ್ಪಿಕೊಳ್ಳುವಂತೆ ಪಾಕಿಸ್ತಾನ ತಂಡವು ಅಫ್ಘಾನ್ ಒತ್ತಾಯಿಸಿದೆ.

ಮತ್ತೊಂದೆಡೆ, ಅಫ್ಘಾನ್ ತಾಲಿಬಾನ್ ತಮ್ಮದೇ ಆದ ಪ್ರಮುಖ ಬೇಡಿಕೆಯನ್ನು ಇಟ್ಟಿದೆ. ಅಮೆರಿಕದ ಡ್ರೋನ್‌ಗಳು ಅಫ್ಘಾನಿಸ್ತಾನಕ್ಕೆ ಹಾರಲು ತನ್ನ ವಾಯುಪ್ರದೇಶವನ್ನು ದಾಟಲು ಅನುಮತಿ ನೀಡುವುದನ್ನು ನಿಲ್ಲಿಸಬೇಕೆಂದು ಪಾಕಿಸ್ತಾನಕ್ಕೆ ತಿಳಿಸಿದ್ದಾರೆ.

ಎರಡೂ ಬೇಡಿಕೆಗಳನ್ನು ತಿರಸ್ಕರಿಸಿದ ಪಾಕ್​

ಅನಸ್ ಹಕ್ಕಾನಿ ಮತ್ತು ಸುಹೇಲ್ ಶಾಹೀನ್​ರಂತಹ ಹಿರಿಯ ಸದಸ್ಯರನ್ನು ಒಳಗೊಂಡ ಅಫ್ಘಾನ್ ನಿಯೋಗವು, ಟಿಟಿಪಿ ಪಾಕಿಸ್ತಾನಕ್ಕೆ ಸಮಸ್ಯೆಯಾಗಿದೆ. ಯಾರೂ ಮತ್ತೊಂದು ರಾಷ್ಟ್ರದ ಮೇಲೆ ದಾಳಿ ಮಾಡಲು ಅಫ್ಘಾನ್ ಪ್ರದೇಶವನ್ನು ಬಳಸುವುದಿಲ್ಲ. ಆದರೆ ದಾಳಿಗಳನ್ನು ಪ್ರಾರಂಭಿಸಲು ಪಾಕಿಸ್ತಾನದ ಅಧಿಕಾರವನ್ನು ಒಪ್ಪುವುದಿಲ್ಲ.

ಡ್ರೋನ್ ವಿಷಯದ ಬಗ್ಗೆ, ಪಾಕಿಸ್ತಾನದ ನಿಯೋಗವು ಮೊದಲ ಬಾರಿಗೆ ಡ್ರೋನ್ ದಾಳಿಗಾಗಿ ವಿದೇಶಿ ದೇಶ ಅಂದರೆ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಮತ್ತು ಆ ಒಪ್ಪಂದವನ್ನು ಮುರಿಯಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ವಿಚಿತ್ರ ವರ್ತನೆಯಿಂದ ಕಂಗೆಟ್ಟ ಮಧ್ಯವರ್ತಿಗಳು

ಪಾಕಿಸ್ತಾನ ತಂಡದ ವಿಚಿತ್ರ ವರ್ತನೆಯಿಂದ ಟರ್ಕಿ ಮತ್ತು ಕತಾರ್ ಮಧ್ಯವರ್ತಿಗಳು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದಾರೆ ಮತ್ತು ಗೊಂದಲಕ್ಕೊಳಗಾಗಿದ್ದಾರೆಂದು ವರದಿಯಾಗಿದೆ.

ಮೂಲಗಳು ಹೇಳುವಂತೆ ಅಫ್ಘಾನ್ ನಿಯೋಗವು ರಚನಾತ್ಮಕ ಮಾತುಕತೆ ನಡೆಸಲು ಮತ್ತು ನಿಜವಾದ ಪರಿಹಾರವನ್ನು ಕಂಡುಕೊಳ್ಳಲು ಶ್ರಮಿಸುತ್ತಿದೆ. ಆದರೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐನ ಹಿರಿಯ ಜನರಲ್ ನೇತೃತ್ವದ ಪಾಕಿಸ್ತಾನಿ ತಂಡವು ಇದೇ ಉದ್ದೇಶವನ್ನು ಹೊಂದಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net